ಮನೆ Latest News ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ

0

ಬೆಂಗಳೂರು; ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ  ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ZP,TP,GBA ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗೆ ಪಕ್ಷ ಸಂಘಟನೆ, ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ರೂಪರೇಷೆ , ರಾಜ್ಯ ಪ್ರವಾಸ ಕುರಿತು ಸಮಾಲೋಚನೆ ನಡೆಯಿತು.

ಸಭೆ ಬಳಿಕ ಮಾತನಾಡಿದ JDLP ನಾಯಕ ಸುರೇಶ್ ಬಾಬು ಕುಮಾರಸ್ವಾಮಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂದೆ ಬರುವ ಪದವೀಧರ,ಶಿಕ್ಷಕರ ಕ್ಷೇತ್ರಗಳ MLC ಚುನಾವಣೆ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ಆಯ್ತು. ಅಭ್ಯರ್ಥಿ ಹಾಕಲು ಭೋಜೇಗೌಡರು,ವಿವೇಕಾನಂದ, ಮಂಜೇಗೌಡ, ಶಿವಶಂಕರ್  ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. GBA ಚುನಾವಣೆ ಯಾವಾಗಲೇ ಬಂದರು ಎದುರಿಸಲು ಸಿದ್ದತೆ ಚರ್ಚೆ ಆಗಿದೆ. ಜವರಾಯಿಗೌಡ, ಶರವಣ,ಕುಪೇಂದ್ರ ರೆಡ್ಡಿ,ನಿಖಿಲ್ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ. GBA ಚುನಾವಣೆಗೆ 5 ಭಾಗದಲ್ಲೂ ಸಮಿತಿ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.

ಹೊಸ ಕೋರ್ ಕಮಿಟಿ ರಚನೆಗೆ  ಚರ್ಚೆ ಆಗಿದೆ. ಪುನರ್ ರಚನೆ ಮಾಡೋಕೆ ತೀರ್ಮಾನ ಮಾಡಲಾಗಿದೆ. ದೇವೇಗೌಡ, ಕುಮಾರಸ್ವಾಮಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ದೀಪಾವಳಿ ಆದ ಬಳಿಕ ತೀರ್ಮಾನ ಅಗಲಿದೆ. ಪಕ್ಷದ ರಾಷ್ಟ್ರೀಯ ಸಭೆ ನವೆಂಬರ್ 22ಕ್ಕೆ ನಡೆಯಲಿದೆ. ಎಲ್ಲಾ ರಾಜ್ಯಗಳಿಂದ ಜೆಡಿಎಸ್ ನಾಯಕರನ್ಮ ಆಹ್ವಾನ ನೀಡಲಾಗುತ್ತೆ. ಆದಷ್ಟೂ ಬೇಗ ಸ್ಥಳ ನಿಗದಿ ಮಾಡಲಾಗುತ್ತದೆ. ನ.22 ರಂದು ನಮ್ಮ ಪಕ್ಷಕ್ಕೆ 25 ವರ್ಷಗಳ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಬೆಳ್ಳಿ ಮಹೋತ್ಸವ ಮಾಡೋಕೆ ಚರ್ಚೆ ಆಗಿದೆ. ಯಾವಾಗ ಎಲ್ಲಿ ಮಾಡಬೇಕು ಅಂತ ತೀರ್ಮಾನ ಮಾಡಲಾಗುತ್ತೆ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಆರೋಗ್ಯದ ಅನೇಕರು ಏನೇನೋ ಹಬ್ಬಿಸಿದ್ದರು. ಇನ್ ಫೆಕ್ಷನ್ ಆಗಿದರಿಂದ ಸಮಸ್ಯೆ ‌ಆಗಿತ್ತು.ಈಗ ಆರೋಗ್ಯವಾಗಿ ಇದ್ದಾರೆ‌. ಕಾರ್ಯಕರ್ತರು ಆತಂಕ ಪಡೋ ಅವಶ್ಯಕತೆ ಇಲ್ಲ. 15 ದಿನ ಆದ ಮೇಲೆ ಕುಮಾರಸ್ವಾಮಿ ‌ಪ್ರವಾಸ ಮಾಡ್ತಾರೆ. ಜೆಡಿಎಸ್ ಶಾಸಕರಿಗೆ ಅನುದಾನ ಕೊಡದ ವಿಚಾರ ಚರ್ಚೆ ಆಗಿದೆ. ಸರ್ಕಾರ ‌224 ಕ್ಷೇತ್ರ ಸಮಾನವಾಗಿ ಸರ್ಕಾರ ನೋಡಬೇಕು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅನುದಾನ ಬಿಡುಗಡೆ ಮಾಡಿದ್ದರು. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಸಮಸ್ಯೆ ಆಗಿದೆ. ಇನ್ನು ‌ಕೂಡಾ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಕೂಡಲೇ ಸರ್ಕಾರ ಸರ್ವೆ ಮಾಡಿ ಕೇಂದ್ರಕ್ಕೆ ಮನವಿ ಮಾಡಬೇಕು. ಕುಮಾರಸ್ವಾಮಿ ಅವ್ರು ಕೇಂದ್ರಕ್ಕೆ ಮನವಿ ಸಹ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸಲಹೆ ಕೊಡ್ತೀನಿ ಎಲ್ಲಾ ರೈತರಿಗೂ ಅವರ ಜಮೀನಿಗೆ ಇನ್ಶೂರೆನ್ಸ್ ಮಾಡಬೇಕು. ಇನ್ಶುರೆನ್ಸ್ ಮಾಡಿದ್ದರೆ ಸರ್ಕಾರಕ್ಕೆ ಪರಿಹಾರ ‌ಕೊಡೋ ಅವಶ್ಯಕತೆ ಇಲ್ಲ. ಮುಂದಿನ ವರ್ಷದಿಂದ ಎಲ್ಲಾ ರೈತರ ಜಮೀನಿಗೂ ವಿಮೆ ಮಾಡಬೇಕು ಅಂತ ಒತ್ತಾಯ ಮಾಡ್ತೀನಿ ಎಂದು ಹೇಳಿದರು.

ಸಭೆ ಬಳಿಕ MLC ಶರವಣ ಮಾತನಾಡಿ ಕುಮಾರ ಸ್ವಾಮಿಯವರು JDLP ಸಭೆ ಕರೆದಿದ್ದರು. 3 ಗಂಟೆಗಳ ಕಾಲ ಚರ್ಚೆ ಮಾಡಲಾಯಿತು. ZP, TP, GBA ಚುನಾವಣೆ, ಮುಂದಿನ ವರ್ಷ ಬರುವ MLC ಚುನಾವಣೆ ಇವೆಲ್ಲವನ್ನೂ ಚರ್ಚೆ ಮಾಡಿದ್ದೇವೆ . ನಾವೆಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದರ ಚರ್ಚೆಗೆ ಆಗಿದೆ. ಸಭೆಯಲ್ಲಿ ಶಾಸಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಿಲ್ಲಾ ಪಂಚಾಯತಿ, GBA ಚುನಾವಣೆ ಹಾಗೂ MLC ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕು ಅಂತಲೂ ಚರ್ಚೆ ಆಗಿದೆ. ಜನರೊಂದಿಗೆ ಜನತಾದಳ ಮತ್ತಷ್ಟು ಕ್ಷೇತ್ರದಲ್ಲಿ ಮುಂದುವರೆಸಲು ಚರ್ಚೆ ಆಗಿದೆ. ಕುಮಾರಸ್ವಾಮಿ ಅವರ ಆರೋಗ್ಯ ಚೆನ್ನಾಗಿದೆ. ದೇವೇಗೌಡರು ಆರಾಮವಾಗಿ ಇದ್ದಾರೆ. ದೇವೇಗೌಡರು- ಕುಮಾರಸ್ವಾಮಿ ಅವರು ಒಂದು ತಿಂಗಳು ಆದ ಮೇಲೆ ಜಿಲ್ಲಾ ಪ್ರವಾಸ ಮಾಡಬೇಕು ಅಂತ ಶಾಸಕರು ಹೇಳಿದ್ದಾರೆ. ಹೊಸ ಕೋರ್ ಕಮಿಟಿ ರಚನೆಗೆ ಸಭೆಯಲ್ಲಿ ಚರ್ಚೆ ಆಗಿದೆ. ಮೈತ್ರಿಗೆ ಯಾವುದೇ ಸಮಸ್ಯೆ ‌ಇಲ್ಲ.ಮೈತ್ರಿಯಲ್ಲಿಯೇ ಎಲ್ಲಾ ಚುನಾವಣೆ ‌ಎದುರಿಸೋ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದರು.

ಜೆಡಿಎಸ್ ಶಾಸಕ ಎ.ಮಂಜು ಮಾತನಾಡಿ  ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಕಾಂಗ್ರೆಸ್ ಅವರು ಅಪಪ್ರಚಾರ ಮಾಡ್ತಾ ಇದ್ದಾರೆ. ಕುಮಾರಸ್ವಾಮಿ ಆರೋಗ್ಯವಾಗಿ ಇದ್ದಾರೆ. 15 ದಿನದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡ್ತಾರೆ. ಹೊಸ ಕೋರ್ ಕಮಿಟಿ ಅಧ್ಯಕ್ಷ ಯಾರನ್ನು ಮಾಡಬೇಕು ಅನ್ನೋ ನಿರ್ಧಾರ ಕುಮಾರಸ್ವಾಮಿ, ದೇವೇಗೌಡರಿಗೆ ಬಿಡಲಾಗಿದೆ. ಮುಂದಿನ ಎಲ್ಲಾ ‌ಚುನಾವಣೆಗೆ ಬಿಜೆಪಿ ಜೊತೆ ಹೊಂದಾಣಿಕೆಗೆ ಎಲ್ಲಾ ಶಾಸಕರು ಒಪ್ಪಿದ್ದಾರೆ. 4 MLC ಸ್ಥಾನಕ್ಕೆ ಸದಸ್ಯ ನೋಂದಣಿ ಮಾಡ್ತೀವಿ ಅಮೇಲೆ ಯಾವ ಯಾವ ಸೀಟು ಅಂತ ಬಿಜೆಪಿ-ಜೆಡಿಎಸ್ ಕೂತು ನಿರ್ಧಾರ ಮಾಡ್ತೀವಿ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, GBA ಚುನಾವಣೆಗೂ ದೇವೇಗೌಡರು ಹೇಳಿದಂತೆ ಹೊಂದಾಣಿಕೆಯಿಂದ ಹೋಗಲು ಚರ್ಚೆ ಆಗಿದೆ ಎಂದರು,