ಮನೆ Latest News ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಿನ್ನೆಲೆ; ಜೆಡಿಎಸ್ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ

ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಿನ್ನೆಲೆ; ಜೆಡಿಎಸ್ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ

0

ಬೆಂಗಳೂರು; ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಿತು.ಜಿಟಿ ದೇವೇಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್, ಮಾಜಿ ಎಮ್ ಎಲ್ ಎ ಅಶ್ವಿನ್ ಕುಮಾರ್, ಎಮ್ ಎಲ್ ಸಿ ತಿಪ್ಪೇಸ್ವಾಮಿ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಭಾಗಿಯಾಗಿದ್ದರು.

ಸಭೆ ಬಳಿಕ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಜೆಡಿಎಲ್ ಪಿ ನಾಯಕ ಸುರೇಶ್ ಬಾಬು, ನಿಖಿಲ್ ಕುಮಾರಸ್ವಾಮಿ,ಮಾಜಿ ಸಚಿವರಾದ ಸುರೇಶ್ ಕುಮಾರ್, ಸಾರಾ ಮಹೇಶ್, ಸೇರಿದಂತೆ ಹಲವರು ಉಪಸ್ಥಿತಿದ್ದರು. ಈ ವೇಳೆ ಮಾತನಾಡಿದ ಅವರು ರಾಜ್ಯದ ಕೋರ್ ಕಮಿಟಿಯ ಪದಾಧಿಕಾರಿಗಳು ಹಿರಿಯ ನಾಯಕರು ಸಭೆ ಮಾಡಿದ್ದೇವೆ.ಈಗಾಗಲೇ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಜೆಡಿಎಸ್ ಬಿಜೆಪಿ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಲಾಗಿದೆ.ಎರಡು ಪಕ್ಷಗಳೂ ಧರಣಿ ಮಾಡಿದ್ದೇವೆ.ಜನರಿಗೆ ನಮ್ಮ ಹೋರಾಟವನ್ನ ತಲುಪಿಸುವ ಕೆಲಸವನ್ನ ಮಾಡಿದೆ.ರಾಜ್ಯ ಸರ್ಕಾರ ಯಾವುದನ್ನ ಲೆಕ್ಕಿಸದೆ ಸದನವನ್ನ‌ ಅರ್ಧಕ್ಕೆ‌ ನಿಲ್ಲಿಸಿದ್ದಾರೆ.ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಬೇಕು ಎಂಬ ತೀರ್ಮಾನವಾಗಿದೆ.ಈ ತೀರ್ಮಾನ ಮಾಡಿದ ಮೇಲೆ ಹಾಸನ ಮಂಡ್ಯ ರಾಮನಗರ ಗುಲ್ಬರ್ಗ ಚಿಕ್ಕಮಗಳೂರು ಎಲ್ಲಾ ಮುಖಂಡರೆಲ್ಲಾ ಸೇರಿ ಕೋರ್ ಕಮಿಟಿ ನಡೆಸಿ ತೀರ್ಮಾನ ಮಾಡಿ ಸಭೆ ನಡೆಸಬೇಕಂತ ನಾಯಕರು ತಿಳಿಸಿದ್ರು .

 

ವಾಲ್ಮಿಕಿ ನಿಗಮದಲ್ಲಾಗಿರುವ ಪ್ರಕರಣ, ಮೂಡ ಹಗರಣ ಸಿಎಂ ಹೊರಲೇಬೇಕು.ನಾವು ಬಿಜೆಪಿ ಹೋರಾಟ ಮಾಡಿ‌ ಸರ್ಕಾರ ಭ್ರಷ್ಟಾಚಾರವನ್ನ ರಾಜ್ಯದ ಜನತೆಗೆ ತಲುಪಿಸಬೇಕು.ಇದೇ ಸಮಯದಲ್ಲಿ ಪ್ರವಾಹಕ್ಕೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ.ಉತ್ತರ ಕನ್ನಡದ ಶಿರುರಿನಲ್ಲಿ 11 ಜನ ಮರಣಹೊಂದಿದ್ದಾರೆ.ಹೆಚ್ ಡಿ ಕುಮಾರಸ್ವಾಮಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ರು.ಸಿಎಂ ರಾಜ್ಯ ಸರ್ಕಾರದ ನಾಯಕರು ಭೇಟಿ ಕೊಟ್ಟಿರಲಿಲ್ಲ.ಸುಮಾರು ಕರ್ನಾಟಕ ಅರ್ಧಭಾಗದಲ್ಲಿ  ಪ್ರವಾಹ ಹೆಚ್ಚಾಗ್ತಿದೆ.ಬೆಳೆಗಳು, ತೋಟ ನಾಶವಾಗ್ತಿದೆ ಅವರನ್ನ ಬಿಟ್ಟು ಬರೋಕೆ ಆಗ್ತಿಲ್ಲ.ಹಾಲಿ ಶಾಸಕರು ಮಾಜಿ ಶಾಸಕರು ಇದ್ರು ನಾವು ಜನರನ್ನ ಬಿಟ್ಟು ಬರೋಕೆ ಆಗ್ತಿಲ್ಲಾ ಅಂತಾ, ಜೆಡಿಎಸ್ ವರಿಷ್ಠರಿಗೆ ಬಿಜೆಪಿ ನಾಯಕರಿಗೆ ಮನವಿ ಮಾಡೊಣಾ.ಮಂಡ್ಯ ಹಾಸನದ ಜನರು ಭತ್ತ ಬೆಳೆದಿಲ್ಲಾ ಬರಗಾಲ ಇತ್ತು.ನಾವೆಲ್ಲ ರೈತರು ಬೆಳೆ  ಹಾಕೊದಕ್ಕೆ ಶುರುಮಾಡಬೇಕಿದೆ.ಆದದ ಮೇಲೆ ಮಾಡಿ ಆಮೇಲೆ ಹೋರಾಟ ಮಾಡೋಣ‌ ಎಂಬ ಒತ್ತಡ ತಂದಿದ್ದಾರೆ.ಮಂಡ್ಯ ಶ್ರೀರಂಗಪಟ್ಟಣ ಮೈಸೂರು ಈ ಭಾಗದಲ್ಲಿ ಕುಮಾರಸ್ವಾಮಿ ಅವರು ಬರಬೇಕು.ಅವರು ಬರದೇ ನಾವು ಒಪ್ಪೊಲ್ಲಾ ನಡೆಯದೆ ಇದ್ರು ಪರವಾಗಿಲ್ಲಾ ಸಭೆಯಲ್ಲಿ ಭಾಗವಹಿಸಲಿ ಎಂದು ಒತ್ತಾಯ ಮಾಡ್ತಿದ್ದಾರೆ.ಕುಮಾರಸ್ವಾಮಿ ಅವರು ಬರದೇ ಇದ್ರೆ ಸಕ್ಸಸ್ ಆಗೊಲ್ಲಾ ನಾವು ಪಾದಯಾತ್ರೆಗೆ ಬರೊಲ್ಲಾ ಅಂತ ಹೇಳಿದ್ದಾರೆ.ಯಡಿಯೂರಪ್ಪ, ವಿಜಯೇಂದ್ರ, ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಬೇಕು.ಸ್ವಲ್ಪ ದಿನಗಳ ಕಾಲ‌ಈ ಪಾದಯಾತ್ರೆ ಮುಂದಕ್ಕೆ ಹಾಕಬೇಕೆಂದು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ.ಆ ಭಾಗದ ಜನ ರೈತರಿಗೆ ಮನ್ನಣೆ ಕೊಡಬೇಕಿದೆ.ನಾಯಕರೆಲ್ಲಾ ಸೇರಿ ತೀರ್ಮಾನ ತೆಗೆದುಕೊಂಡಿರುವ ವಿಚಾರ.ಪರಿಣಾಮ ಏನ್ ಅಗುತ್ತೆ ಅಂತ ನಮ್ಮ ನಾಯಕರಿಗೆ ಗೊತ್ತಿಲ್ಲಾ.ಜಲಪ್ರವಾಹ ಜಾಸ್ತಿಯಾಗ್ತಿದೆ.ಹೋರಾಟದಿಂದ ಹಿಂದುಳಿಯಲ್ಲ ಎಂದಿದ್ದಾರೆ.