ಚಿಕ್ಕಮಗಳೂರು; ಜೆಡಿಎಸ್ ಮತ್ತು ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದಾರೆ.
ಬಾಬಾ ಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠ ಮಾರ್ಗ ಮಧ್ಯ ರಸ್ತೆ ಕುಸಿತವಾದ ಸ್ಥಳ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜೆಡಿಎಸ್ ಮತ್ತು ಬಿಜೆಪಿಯವರು ನಮ್ಮ ಸರ್ಕಾರ ಉರುಳಿಸಬೇಕೆಂದು ಇಬ್ಬರು ಪ್ರಯತ್ನ ಪಡೆದಿದ್ದಾರೆ.ಜನರಿಂದ ಕನ್ನಡಿಗರಿಂದ ಆಯ್ಕೆಯಾಗಿರುವ ಕರ್ನಾಟಕ ಸರ್ಕಾರವನ್ನು ಉರುಳಿಸಬೇಕೆಂದು ಪ್ರಯತ್ನ ಪಡುತ್ತಿದ್ದಾರೆ.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.ಜೆಡಿಎಸ್ ನವರು ಕೂಡ ಸರ್ಕಾರದಲ್ಲಿದ್ದಾರೆ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ.ಇವರ ಕರ್ನಾಟಕಕ್ಕೆ ಕೊಡುಗೆ ಏನು? ಕಾಂಗ್ರೆಸ್ ಸರ್ಕಾರ ಬೀಳಿಸಬೇಕೆನ್ನುವುದೇ ಇವರ ಕೊಡುಗೆನಾ? ಸರ್ಕಾರವನ್ನು ಬೀಳಿಸುವುದಕ್ಕೆ ಏಳಿಸುವುದಕ್ಕೆ ವೋಟ್ ಹಾಕುವ ಜನರಿದ್ದಾರೆ ನಿಮ್ಮ ಕೊಡುಗೆ ಏನು? ಕೇಂದ್ರದಲ್ಲಿ ತಾವುಗಳೆಲ್ಲ eಸೇರಿ ಸರ್ಕಾರ ರಚನೆ ಮಾಡಿದ್ದೀರಿ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವುದೇ ನಿಮ್ಮ ಕೊಡುಗೆನಾ? ಜನರಿಂದ ಆಯ್ಕೆ ಆಗಿರುವ ಸರ್ಕಾರವನ್ನು ಬೀಳಿಸುವುದೇ ನಿಮ್ಮ ಕೊಡುಗೇನಾ ಎಂದು ಕೃಷ್ಣ ಬೈರೇಗೌಡ ಪ್ರಶ್ನೆ ಮಾಡಿದ್ದಾರೆ.
ಮೇಕೆದಾಟು ಯೋಜನೆಗೆ ತಾವುಗಳು ಅನುಮತಿ ಕೊಡಿಸಿದ್ದರೆ ಕಾಂಗ್ರೆಸ್ ಪಕ್ಷದವನಾಗಿ ತಮಗೆ ಕೈಮುಗಿದು ಧನ್ಯವಾದ ಸಲ್ಲಿಸುತ್ತಿದ್ದೆ.ಕೇಂದ್ರದಲ್ಲಿ ನಿಮ್ಮ ಸರ್ಕಾರ ಬಂದಿದೆ ಕರ್ನಾಟಕಕ್ಕೆ ಏನಾದರೂ ಒಂದು ಅಳಿಲುಸೇವೆ ಮಾಡಬೇಕೆನಿಸಿದರೆ.ಅಪ್ಪರ್ ಭದ್ರಾ ಯೋಜನೆ ಚಿಕ್ಕಮಗಳೂರು ಶಿವಮೊಗ್ಗ ಚಿತ್ರದುರ್ಗ ದಾವಣಗೆರೆ ಕುಡಿಯುವ ನೀರು ಕೊಡಬಹುದು. ಕೆರೆಗಳಿಗೆ ನೀರು ತುಂಬಿಸಬಹುದು. ಕೇಂದ್ರದಿಂದ 5300 ಕೋಟಿ ರೂಗಳು ಬರಬೇಕು ಇದುವರೆಗೂ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ನಮಗೆ ಬರಬೇಕಾದಂತಹ ಅನುದಾನ ಕೊಡಿಸಿ ಸ್ವಾಮಿ ಎಂದು ಮನವಿ ಮಾಡಿದ್ದಾರೆ.
ಕಳಸ ಬಂಡೂರಿ ಯೋಜನೆಯನ್ನು ಕೇಂದ್ರ ಸರ್ಕಾರ ಕೆಳಗೆ ಹಾಕಿಕೊಂಡು ಕೂತಿದೆ. ಇದನ್ನ ಮಾಡಿದರೆ ನೀವು ಕೇಂದ್ರದಲ್ಲಿ ಮಂತ್ರಿಯಾಗಿದ್ದಕ್ಕೆ ಸಾರ್ಥಕವಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆ ಕಡೆ ಪ್ರಹ್ಲಾದ್ ಜೋಶಿ ಈ ಕಡೆ ಕುಮಾರಸ್ವಾಮಿ ಇಬ್ಬರದ್ದು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಸ್ಕೆಚ್.ಸರ್ಕಾರ ಬೀಳಿಸಿದರೆ ಕರ್ನಾಟಕಕ್ಕೆ ಏನು ಸಿಗುತ್ತೆ?ನೀವು ಇವತ್ತು ಮಂತ್ರಿಯಾಗಿರೋದು ಸರ್ಕಾರ ರಚನೆ ಆಗಿರೋದು ಬರಿ ದ್ವೇಷ ಸಾಧನೆ ಮಾಡೋದಕ್ಕಾ ಅಥವಾ ಬೇರೆ ಏನಾದರೂ ಸಾಧನೆ ಮಾಡೋದಕ್ಕಾ?ಸಾಧನೆ ಮಾಡಬೇಕೆಂಬ ಉದ್ದೇಶವಿದೆಯಾ? ಸರ್ಕಾರ ಬೀಳಿಸ್ತೀವಿ ಬೀಳೀಸ್ತೀವಿ ಅನ್ನೋದು ಏನು ಪುರುಷಾರ್ಥನಾ?ಅದಕ್ಕಾಗಿ ಜನ ನಿಮ್ಮನ್ನ ಡೆಲ್ಲಿಗೆ ಕಳಿಸಿರೋದು ಅಂತಾ ಒಮ್ಮೆ ಯೋಚನೆ ಮಾಡಿ.ಕೇಂದ್ರ ಬಿಜೆಪಿಯಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿ ಹಾಕುವುದಕ್ಕೆ ಇವೆಲ್ಲ ಗಿಮಿಕ್ ಮಾಡ್ತಿದ್ದಾರೆ.ಒಂದು ಕಡೆ ಬಿಜೆಪಿಯವರು ಖಾಲಿ ಚೊಂಬು ಕೊಟ್ಟು ಅನ್ಯಾಯ ಮಾಡಿದ್ದಾರೆ.ಮತ್ತೊಂದು ಕಡೆ ಅದನ್ನು ಮುಚ್ಚಿ ಹಾಕಿ ಜನರನ್ನ ಯಾಮಾರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.