ಮನೆ Latest News ಶ್ರೀರಾಮುಲುನ ಜಾತಿಯನ್ನ ನೋಡಿ ನಾವು ಸ್ನೇಹ ಮಾಡಿಲ್ಲ: ಮಾಜಿ ಸಚಿವ ಜನಾರ್ದನ್ ರೆಡ್ಡಿ ಹೇಳಿಕೆ

ಶ್ರೀರಾಮುಲುನ ಜಾತಿಯನ್ನ ನೋಡಿ ನಾವು ಸ್ನೇಹ ಮಾಡಿಲ್ಲ: ಮಾಜಿ ಸಚಿವ ಜನಾರ್ದನ್ ರೆಡ್ಡಿ ಹೇಳಿಕೆ

0

ಬೆಂಗಳೂರು;  ಜನಾರ್ದನ ರೆಡ್ಡಿನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂಬ ಶ್ರೀರಾಮುಲು ಅವರ ಹೇಳಿಕೆಗೆ ಜನಾರ್ದನ ರೆಡ್ಡಿ ಸುದ್ದಿಗೋಷ್ಟಿ ಮೂಲಕ ಉತ್ತರ ಕೊಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ನಾನು ಶ್ರೀರಾಮುಲು ಅವರ ಜಾತಿಯನ್ನ ನೋಡಿ ನಾವು ಸ್ನೇಹ ಮಾಡಿಲ್ಲ ಎಂದಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಒಂದು ತಿಂಗಳ ಹಿಂದೆಯೇ ಬಿಜೆಪಿ ಪಕ್ಷಕ್ಕೆ ಪುನಃ ಸೇರ್ಪಡೆಯಾದೆ. ಬಳ್ಳಾರಿಯಲ್ಲಿ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಿಗೂ ಸಂಚರಿಸುವ ಅನುಮತಿ ಇತ್ತು. ಸಂಡೂರು ಉಪಚುನಾವಣೆ ಟಿಕೆಟ್ ನೀಡುವ ವೇಳೆ ಚರ್ಚೆ ಮಾಡಿದ್ರು. ಪಕ್ಷ ಯಾರಿಗೆ ಟಿಕೆಟ್ ಕೊಟ್ರೂ ಗೆಲುವಿಗೆ ಪ್ರಮಾಣಿಕ ಪ್ರಯತ್ನ ಮಾಡ್ತೀನಿ. ಬಂಗಾರು ಹನುಮಂತ ನನ್ನ ಅಭ್ಯರ್ಥಿ ಅಲ್ಲ. ಅದು ST ಮೀಸಲು ಕ್ಷೇತ್ರ, ಹೀಗಾಗಿ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿತ್ತು. ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯ ಬಿಜೆಪಿ ನಾಯಕರು ಪ್ರಚಾರ ಮಾಡಿದ್ರು.ಶ್ರೀರಾಮುಲು ಕೂಡ ಪ್ರಚಾರ ಮಾಡಿದ್ರು. ಮೂರು ದಿನ ತಡವಾಗಿ ಪ್ರಚಾರಕ್ಕೆ ಬಂದು ಪ್ರಚಾರ ಮಾಡಿದ್ರು. ಬೈಎಲೆಕ್ಷನ್ ಯಾಕೆ ಸೋತ್ವಿ ಅನ್ನೋದು ಮುಖ್ಯಮಂತ್ರಿಗಳೇ ಅಲ್ಲಿ ಮೂರು ದಿನ‌ ಉಳಿದ್ರು, ಹೀಗಾಗಿ ಸೋಲು ಆಯ್ತು. ನಾನು ಯಾರ ವಿರುದ್ಧವೂ ಚಾಡಿ ಹೇಳುವ ಅವಶ್ಯಕತೆ ಇಲ್ಲ.ಜನಾರ್ದನ್ ರೆಡ್ಡಿ, ಶ್ರೀರಾಮುಲು ಬಗ್ಗೆ ಬಳ್ಳಾರಿ ಜನತೆಗೆ ಗೊತ್ತಿದೆ. ರಾಮುಲು‌‌ ಜನಾರ್ದನ ರೆಡ್ಡಿ ಬೆಳೆಸಿದ ರೀತಿ ಗೊತ್ತು. ಕತೆಕತೆಗಳಾಗಿ ಬಳ್ಳಾರಿ ಜನತೆ ಬಿಚ್ಚಿಡುತ್ತಾರೆ ಎಂದರು.

ಹಾದಿ ಬೀದಿಯಲ್ಲಿ ಹಾಡಿಕೊಳ್ಳೋದು ಬೇರೆ. ಶ್ರೀರಾಮುಲು ಸೋದರ ಮಾವ ರೈಲ್ವೇ ಬಾಬು ಕೊಲೆ ಆಗುತ್ತೆ.ಆಗ ಶ್ರೀರಾಮುಲು ನನ್ನ ಬಳಿ ಬಂದಿದ್ರು.ಎರಡು ಚಾಕುಗಳನ್ನ ಇಟ್ಟಿಕೊಂಡು, ಬೆನ್ನಿಗೆ ಕೊಡಲಿ ಇಟ್ಟಿಕೊಂಡು ಬಂದಿದ್ರು. ಆಗ ವಿಪಕ್ಷದವರು ಕೊಂದಿದ್ರು. ಎರಡನೇ ಟಾರ್ಗೆಟ್ ಶ್ರೀರಾಮುಲು‌ ಆಗಿದ್ರೆ, ಅವತ್ತು ರಾಜಕೀಯವಾಗಿ ತುಂಬಾ ಬಲಿಷ್ಠವಾಗಿದ್ದರು. ಶ್ರೀರಾಮುಲು ಜೊತೆಗೆ ಇಟ್ಟುಕೊಂಡು, ನಿಮ್ಮ ಮಗನ ಸಹವಾಸವಿರುವವರನ್ನ ಮುಗಿಸಿದ್ದೇವೆ ಅಂತ ಹೇಳಿದ್ರು. ನಮ್ಮ‌ ತಾಯಿ ಆಗ ಧೈರ್ಯ ತುಂಬಿದ್ರು. ಒಬ್ಬ ಪಾಲಿಕೆ‌ ಸದಸ್ಯರನ್ನ ಕೊಲೆ ಮಾಡಿದ್ದಾರೆ ಅಂತ 2004ರಲ್ಲಿ ಶ್ರೀರಾಮುಲು‌ ಮೇಲೆ‌ ಆರೋಪ ಬಂತು. ಆಗ ಚುನಾವಣೆ ಆದ ಒಂದೇ ತಿಂಗಳಿಗೆ ಈ ಕೊಲೆ ಆಯ್ತು. ದಿವಾಕರ್ ಬಾಬು ಅವರ ಹಿನ್ನೆಲೆ ಹೇಳುತ್ತಾ ಬಂದ್ರು.ಆಗ ಮಾನನಷ್ಟ ಮೊಕದ್ದಮೆ ಕೂಡ ಹೂಡಿದ್ರು. ಸೂರ್ಯ ನಾರಾಯಣ್ ರೆಡ್ಡಿ, ದಿವಾಕರ್ ಬಾಬು ಈಗ ಕಾಂಗ್ರೆಸ್ ನಲ್ಲಿ ಇದ್ದಾರೆ. ಇವರನ್ನ ಕೊಲೆ ಮಾಡೋಕೆ ಶ್ರೀರಾಮುಲು‌ ದಿನ‌ ಎಣಿಕೆ ಮಾಡ್ತಿದ್ರು. ಕ್ರೈಂನಲ್ಲಿ ಭಾಗಿಯಾಗಬಾರದು ಅಂತ ಹೇಳಿದೆ ಎಂದಿದ್ದಾರೆ.

ನಾರಾಯಣ ರೆಡ್ಡಿನ ಬಿಡಬಾರದು ಅಂತ ಶ್ರೀರಾಮುಲು ಓಡಾಡುತ್ತಾ ಇದ್ರು.ಒಳ್ಳೆಯ ಮಾತುಗಳಿಂದ ನಾನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋದೆ. ದಿವಾಕರ್ ಬಾಬು ಕಾಂಗ್ರೆಸ್ ನಿಂದ ಗೆಲ್ಲುತ್ತಾರೆ. ಬಿಜೆಪಿಗೆ ಬಂದ್ರೆ ನಾವು ಬೆಂಬಲ ನೀಡುವುದಾಗಿ ಹೇಳಿದ್ವಿ.ಇದು 1994ರಲ್ಲಿ ಆದದ್ದು. ಆಗ ಯಡಿಯೂರಪ್ಪ ಬಂದಿದ್ರು. ಶ್ರೀರಾಮುಲುನ ಜಾತಿಯನ್ನ ನೋಡಿ ನಾವು ಸ್ನೇಹ ಮಾಡಿಲ್ಲ.ನೀವು ನಿಮ್ಮ ಜೊತೆಯಲ್ಲಿ‌ ರಾಮುಲು ಮಂತ್ರಿ ಮಾಡಿ ಅಂತ ಹೇಳಿದೆ.ಆಗ ರಾಮುಲು ಮಂತ್ರಿ‌ ಆದ್ರು, ಇದು ನಾನು ಮಾಡಿದ ದ್ರೋಹ. ರಾಮುಲು ಮೇಲೆ ಮೊಳಕಾಲ್ಮೂರಿನಲ್ಲಿ ಆಗ ದಾಳಿ ಮಾಡುತ್ತಾರೆ . ಇವರ ಕಾರನ್ನ ಪುಡಿಪುಡಿ ಮಾಡಿ, ಪೊರಕೆ‌ ಚಪ್ಪಲಿ, ಕಲ್ಲುಗಳಿಂದ ಹೊಡೆದ್ರು. ನಾನು ಅಲ್ಲಿಗೆ ಹೊಗಿ ಅವರ ಜೊತೆಗಿದ್ದು ರಕ್ಷಣೆ ಮಾಡಿದೆ. ಮೊಳಕಾಲ್ಮೂರಿನಲ್ಲಿ 35 ಸಾವಿರ ಮತಗಳ ಅಂತರದಿಂದ ರಾಮುಲು ಗೆದ್ದರು.ಇದು ನಾನು ಮಾಡಿದ ಮತ್ತೊಂದು ದ್ರೋಹ. ಹೆತ್ತ ತಾಯಿಯ ಹಾಲು ಕುಡಿದು ಅವರಿಗೆ ಒದೆಯುವ ರೀತಿ ಈಗ ಮಾಡಿದ್ದಾರೆ. ಇಂತಹ ಘಟನೆಗಳಿಂದಲೇ ಆ ಗಾದೆ ಮಾತು ಹುಟ್ಟಿದೆ ಎಂದು ಬೇಸರ ಹೊರ ಹಾಕಿದ್ರು,