ಮನೆ Latest News ಹೊಸ ಶಾಸಕರನ್ನು ಸಂಪುಟಕ್ಕೆ ತಗೊಳ್ಳೋದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟಿದ್ದು: ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್...

ಹೊಸ ಶಾಸಕರನ್ನು ಸಂಪುಟಕ್ಕೆ ತಗೊಳ್ಳೋದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟಿದ್ದು: ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ಹೊಸ ಶಾಸಕರನ್ನು ಸಂಪುಟಕ್ಕೆ ತಗೊಳ್ಳೋದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟಿದ್ದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಹೊಸ ಶಾಸಕರಿಂದ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ಹೊಸ ಶಾಸಕರು ಸಂಪುಟ ಸೇರುವ ಬೇಡಿಕೆ ಇಟ್ಟಿದ್ದಾರೆ.ಅವರನ್ನು ಸಂಪುಟಕ್ಕೆ ತಗೋಬಾರದು ಅಂತ ಏನೂ ಇಲ್ಲ.ಆದರೆ ಅನುಭವ ಬರಲಿ ಅಂತ ಕೇಳಿದ್ದಾರೆ. ಅವರ ಬೇಡಿಕೆ ತಪ್ಪೇನಿಲ್ಲ. ನಾನೂ 1999 ರಲ್ಲಿ ಸಚಿವ ಆದವನು. ಅವರನ್ನು ಸಂಪುಟಕ್ಕೆ ತಗೊಳ್ಳೋದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟಿದ್ದು.ಅವರ ಬೇಡಿಕೆ ಸರಿಯಾಗಿದೆ, ಆದ್ರೆ ಹೈಕಮಾಂಡ್ ಯಾವ ರೀತಿ ಸ್ವೀಕರಿಸುತ್ತೆ ಇದನ್ನು ಅಂತ ನೋಡಬೇಕು ಎಂದು ಅವರು ತಿಳಿಸಿದ್ದಾರೆ.

ಖಾಸಗಿ ಹೊಟೇಲಿನಲ್ಲಿ ಹೆಚ್ಡಿಕೆ ಭೇಟಿ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ರಾಜಕೀಯ ಕಾರಣಕ್ಕೆ ಭೇಟಿ ಮಾಡಿಲ್ಲ. ಕೈಗಾರಿಕೆ ಸಂಬಂಧ ಒಂದು ವಿಚಾರ ಇತ್ತು ಭೇಟಿ ಮಾಡಿದೆ.ನಾವು ಹಿಂದೆ ಒಟ್ಟಾಗಿ ಸರ್ಕಾರ ನಡೆಸಿದವರು. ಭೇಟಿ ಆಗಿರೋದೇ ತಪ್ಪು ಅನ್ನೋದು ಸರಿಯಲ್ಲ. ನಾನು ರಾಜಕೀಯ ಕಾರಣಕ್ಕೆ ಭೇಟಿ ಮಾಡಿಲ್ಲ. ನಮ್ಮ ಸಿದ್ಧಾಂತ ನಮಗೆ, ಅವರ ಸಿದ್ಧಾಂತ ಅವರಿಗೆ. ನಮ್ಮಲ್ಲಿ ಗೆದ್ದವರೆಲ್ಲ ಮಂತ್ರಿ ಆಗಲು ಅರ್ಹರಿದ್ದಾರೆ. ಆದ್ರೆ 33 ಸ್ಥಾನ ಅಷ್ಟೇ ಇರೋದು, ಹೊಸಬರೂ ಬೇಕು, ಹಳಬರೂ ಬೇಕು. ಈಗ ಪುನಾರಚನೆ ಚರ್ಚೆ ನಡೀತಿದೆಯಲ್ಲ.ಇದು ಸಂದರ್ಭ ಅಂತ ಅವರು ಪತ್ರ ಬರೆದಿರಬಹುದು.ಪುನಾರಚನೆ ಆಗುತ್ತೋ, ನಾಯಕತ್ವ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಏನೋ ಒಂದು ವಿದ್ಯಮಾನ ಅಂತೂ ಆಗುತ್ತಲ್ವಾ? ಎಂದಿದ್ದಾರೆ.

ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಮಾತನಾಡಿದ ಅವರು ದಲಿತ ಸಿಎಂ ಚರ್ಚೆ ಆಗಲಿ, ಇನ್ನೂ ಹೆಚ್ಚು ಚರ್ಚೆ ಆಗಲಿ .ಅದರಲ್ಲಿ ನನಗೆ ತಪ್ಪು ಕಾಣ್ತಿಲ್ಲ. ಆದ್ರೆ ತೀರ್ಮಾನ ಮಾಡೋದು ಹೈಕಮಾಂಡ್ ಎಂದಿದ್ದಾರೆ. ಇದೇ ವೇಳೆ ಭಟ್ಕಳ ಕೋಮುಗಲಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾನುನು ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲೇ ಘಟನೆ ಆದರೂ ಸ್ಥಳೀಯ ಪೊಲೀಸರು ನೋಡ್ಕೋತ್ತಾರೆ. ಸ್ಥಳೀಯ ಪೊಲೀಸರಿಗೆ ಸಾಧ್ಯ ಆಗಿಲ್ಲ ಎಂದರೆ ಹಿರಿಯ ಅಧಿಕಾರಿಗಳಿಗೆ ಹೇಳ್ತಾರೆ. ಸಾದ್ಯ ಆಗಿಲ್ಲ ಎಂದರೆ ಹಿರಿಯ ಅಧಿಕಾರಿಗಳು ಭೇಟಿ ಕೊಡ್ತಾರೆ. ಅಗತ್ಯ ಬಿದ್ದರೆ ಹೆಚ್ಚಿನ ಪೋರ್ಸ್ ಕಳುಹಿಸ್ತೇವೆ. ಇನ್ನು ಅಗತ್ಯ ಇದ್ದರೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಲಾಗುತ್ತೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಮರ್ಥವಾಗಿದೆ ಅಂದಿದ್ದಾರೆ.

ಶಿವಮೊಗ್ಗ ಬಾಲಕನ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಮಾಹಿತಿ ಇರೋದು ಇಷ್ಟೇ. 16-17-18ವರ್ಷದ ವಯೋಮಿತಿ ಹುಡುಗರು ಹೊಡೆದಾಡಿಕೊಂಡಿದ್ದಾರೆ. ಯಾವುದೂ ಆಯುಧ ಬಳಸಿಲ್ಲ ಎಂದು ವರದಿ ಕೊಟ್ಟಿದ್ದಾರೆ. ಒಬ್ಬ ಹುಡುಗ ಸತ್ತಿದ್ದಾನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು ದರ್ಶನ್ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಮಾಡಲಿ, ಅವರು ಮಾಡೋದು ಅವರು ಮಾಡ್ತಾರೆ. ಅವರು ಏನ್ ಅಪಾದನೆ ಮಾಡ್ತಾರೆ. ಅದಕ್ಕೆ ಸರಿಯಾದ ಉತ್ತರವನ್ನ ಡಿಪಾರ್ಟ್ಮೆಂಟ್‌ನವರು ಕೊಡ್ಬೇಕು, ಕೊಡ್ತಾರೆ ಎಂದಿದ್ದಾರೆ.