ಮನೆ Latest News ಫೋನ್ ಟ್ಯಾಪಿಂಗ್ ಮಾಡಿ ಯಾರ್ಯಾರು ಎಲ್ಲೆಲ್ಲಿ ಹೋದ್ರು, ಏನು ಮಾಡಿದ್ರು ಅನ್ನೋದೆಲ್ಲ ನಡೆಯುತ್ತಿಲ್ಲ: ಗೃಹ ಸಚಿವ...

ಫೋನ್ ಟ್ಯಾಪಿಂಗ್ ಮಾಡಿ ಯಾರ್ಯಾರು ಎಲ್ಲೆಲ್ಲಿ ಹೋದ್ರು, ಏನು ಮಾಡಿದ್ರು ಅನ್ನೋದೆಲ್ಲ ನಡೆಯುತ್ತಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ಫೋನ್ ಟ್ಯಾಪಿಂಗ್ ಮಾಡಿ ಯಾರ್ಯಾರು ಎಲ್ಲೆಲ್ಲಿ ಹೋದ್ರು, ಏನು ಮಾಡಿದ್ರು ಅನ್ನೋದೆಲ್ಲ ನಡೆಯುತ್ತಿಲ್ಲ ಎಂದು  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಫೋನ್ ಟ್ಯಾಪಿಂಗ್ ಮಾಡ್ತಿರುವ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಸರ್ಕಾರ ನಡೆಸೋದು ನಾವು, ನಮಗೆ ಹೆಚ್ಚಿನ ಮಾಹಿತಿ ಇರುತ್ತೆ, ಅವರಿಗಲ್ಲ. ವಿಪಕ್ಷದವರಿಗೆ ಯಾರು ಹೇಳಿದ್ದು ಗೂಢಚಾರಿಕೆ, ಫೋನ್ ಟ್ಯಾಪಿಂಗ್‌ ಮಾಡ್ತಿದ್ದಾರೆ ಅಂತಾ? ಆ ಥರಾದ ಬೆಳವಣಿಗೆ ಯಾವುದೂ ನಡೆಯುತ್ತಿಲ್ಲ. ನಮ್ಮ ಗಮನಕ್ಕೆ ಅಧಿಕೃತವಾಗಿ ಆ ಥರಾದ್ದು ಯಾವುದೂ ಇಲ್ಲ.ಸಿಎಂ ಗಮನಕ್ಕೂ ಅಂತಹ ವಿಚಾರ ಯಾವುದೂ ಗಮನದಲ್ಲಿಲ್ಲ. ಪೊಲಿಟಿಕಲ್ ಇಂಟಲಿಜೆನ್ಸ್ ಅನ್ನೋ ಪ್ರತ್ಯೇಕ ವಿಭಾಗವೇ ಇದೆ. ಅದರ ಮೂಲಕ ಸಿಎಂಗೆ ಮಾಹಿತಿ ಸಹಜವಾಗಿ ನಿತ್ಯ ಹೋಗುತ್ತೆ. ಫೋನ್ ಟ್ಯಾಪಿಂಗ್ ಮಾಡಿ ಯಾರ್ಯಾರು ಎಲ್ಲೆಲ್ಲಿ ಹೋದ್ರು, ಏನು ಮಾಡಿದ್ರು ಅನ್ನೋದೆಲ್ಲ ನಡೆಯುತ್ತಿಲ್ಲ. ಪೊಲಿಟಿಕಲ್ ಇಂಟಲಿಜೆನ್ಸ್ ಮೂಲಕ ಹಿಂದಿನಿಂದಲೂ ಎಲ್ಲ ಸಿಎಂಗಳಿಗೂ ಮಾಹಿತಿ ಹೋಗ್ತಿದೆ. ನಿರ್ದಿಷ್ಟವಾಗಿ ಯಾವ ಮಾಹಿತಿ ಬೇಕು ಅನ್ನೋದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ.

ಕೊಲ್ಲಿ ದೇಶಗಳಲ್ಲಿ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಸಿಎಂ ಹಾಗೂ ಸಿಎಸ್ ಪತ್ರ ಬರೆದಿದ್ದಾರೆ. ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆಸಿ ಅಂತ ಪತ್ರ ಬರೆದಿದ್ದಾರೆ. ಸುಮಾರು ಜನ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಯಾವ ಸ್ಥಿತಿಯಲ್ಲಿ ಇದ್ದಾರೆ ಅವರೆಲ್ಲ ಅಂತ ಗೊತ್ತಿಲ್ಲ. ನಾನು ಭೋಜೇಗೌಡ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ದುಬೈನಲ್ಲಿರುವ ಕೆಲವರು ಸಹಾಯ ಮಾಡ್ತಿದ್ದಾರೆ. ಭೋಜೇಗೌಡ ಅವರ ಕುಟುಂಬ ಅಲ್ಲಿ ಸಿಕ್ಕಿಕೊಂಡಿದೆ. ಬಂಕರ್ ನಲ್ಲಿಟ್ಟಿದ್ರು ಅಂತ ಭೋಜೇಗೌಡ ಹೇಳಿದ್ರು. ಇನ್ನೂ ಬಹಳ ಜನ ಇದ್ದಾರೆ, ನಮ್ಮ ಕೆಲವು ಶಾಸಕರು ಸಹ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಖಮೇನಿ ಸಾವು ಹಿನ್ನೆಲೆಯಲ್ಲಿ ನಿಗಾ ಇಡಲು ಕೇಂದ್ರ ಗೃಹ ಇಲಾಖೆಯಿದ ರಾಜ್ಯಗಳಿಗೆ ಪತ್ರ ಕಳಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಆ ಥರಾ ಪತ್ರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಡಿಜಿ ಅವರು ನನಗೆ ನನ್ನ ಏನೂ ಹೇಳಿಲ್ಲ. ನಾನೂ ಆಥರ ಪತ್ರ ಬಂದಿದೆ ಅಂತ ಮಾಧ್ಯಮಗಳಲ್ಲೇ ನೋಡಿದ್ದು. ಸಂಭಾವ್ಯ ಅಹಿತಕರ ಘಟನೆಗಳು ಆಗುತ್ತೆ ಅಂತ ನನಗೆ ಅನಿಸಿಲ್ಲ. ಏನೇ ಇದ್ರೂ ನಾವು ಎಚ್ಚರಿಕೆ ವಹಿಸ್ತೇವೆ ಎಂದಿದ್ದಾರೆ.

ಖಮೇನಿ ಪರ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದ ಬಗ್ಗೆ ಮಾತನಾಡಿ ಅವರು ಅಲ್ಲಿ ಪ್ರತಿಭಟನೆ ಮಾಡಿದ್ದು ನಿಯಮ ಬಾಹಿರ. ಕೋರ್ಟ್ ಹೇಳಿರೋದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿ ಅಂತಾ. ಮೊನ್ನೆ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡ್ತೇನೆ. ಹ್ಯಾರೀಸ್ ಇರಲಿ ಯಾರೇ ಇರಲಿ ನಿಯಮಾನುಸಾರ ಪ್ರತಿಭಟನೆ ಮಾಡಬೇಕು. ತಪ್ಪಾಗಿದ್ರೆ ಪರಿಶೀಲಿಸಿ ಕ್ರಮ ತಗೋತೇವೆ ಎಂದು ಹೇಳಿದ್ದಾರೆ.