ಮನೆ Latest News ಬಿಎಸ್ ವೈ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ ; ಪ್ರಾಥಮಿಕ ವರದಿಯ ಆಧಾರದಲ್ಲಿ ತನಿಖೆ...

ಬಿಎಸ್ ವೈ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ ; ಪ್ರಾಥಮಿಕ ವರದಿಯ ಆಧಾರದಲ್ಲಿ ತನಿಖೆ ಆಗಬೇಕು ಎಂದ ಸಚಿವ ಕೃಷ್ಣಬೈರೇಗೌಡ ಹೇಳಿಕೆ

0

ಬೆಂಗಳೂರು: ಬಿಎಸ್ ವೈ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಕೃಷ್ಣಬೈರೇಗೌಡ ಹೇಳಿಕೆ ನೀಡಿದ್ದು, ಪ್ರಾಥಮಿಕ ವರದಿಯ ಆಧಾರದಲ್ಲಿ ತನಿಖೆ ಆಗಬೇಕು ಎಂದಿದ್ದಾರೆ.

ಅಂತಹ ಪ್ರಕರಣವನ್ನ ನಾವು ಕೇಳಿದ್ದೇವೆ. ಮುಡಾದು ಕೊಟ್ಟಾಗ ಯಾವುದೇ ಪ್ರಾಥಮಿಕ ವರದಿ ಇರಲಿಲ್ಲ. ತನಿಖೆಗೆ ಶಿಫಾರಸ್ಸು ಇದೆ. ಮುಡಾ ಮತ್ತು ಬಿಎಸ್ ವೈ ಪ್ರಕರಣವನ್ನ ಒಂದೇ ತಕಡಿಗೆ ಹಾಕುವುದು ಬೇಡ. ಸಿದ್ದರಾಮಯ್ಯ ಹಣ ಆಸ್ತಿ ಮಾಡಬೇಕೆಂದರೆ ಸೈಟ್ ನಲ್ಲಿ ಮಾಡ್ಬೇಕಾ?. ಹಣಕ್ಕಾಗಿ ರಾಜಕಾರಣಕ್ಕೆ ಅವರು ಬಂದಿದ್ದಾರಾ? . ಚಿಟಿಕೆ ಹೊಡೆದ್ರೆ ಬೇಕಾದಷ್ಟು ಹಣ ಸಿಎಂ ಬಳಿ ಬಂದು ಬೀಳುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ, 1985ರಿಂದ ಮಂತ್ರಿಯಾಗಿದ್ದವರು .ದುಡ್ಡು ಮಾಡೋಕೆ ಬಂದವರು ಕೆಲವರಿದ್ದಾರೆ, ಇವರು ಬೇರೆ ತರ. ಸಿದ್ದರಾಮಯ್ಯ ಬಗ್ಗೆ ಇದು ಆರೋಪ ರಾಜಕಾರಣ. ಅವರ ಶ್ರೀಮತಿ ಎದುರಿಗೆ ಬಂದರೆ ನಾವೇ ಗುರುತಿಸಲೂ ಅಸಾಧ್ಯ. ಅವರು ಮನೆಯಿಂದ ಹೊರ ಬಂದಿರಲಿಲ್ಲ, ಅವರನ್ನೂ ಬೀದಿಗೆ ನಿಲ್ಲಿಸಿದ್ದೀರಲ್ಲ. ವ್ಯವಸ್ಥಿತವಾಗಿ ಟ್ರ್ಯಾಪ್ ಮಾಡುವ ಕೆಲಸ ಮಾಡಿದ್ದಾರೆ. ಮೋಡ ಸೃಷ್ಟಿ ಮಾಡಿ ಭೀಕರ ಮಳೆ‌ ಸುರಿಯುವ ರೀತಿ ಮಾಡಿದ್ದಾರೆ ಎಂದಿದ್ದಾರೆ.

 ಯಡಿಯೂರಪ್ಪ ವಿರುದ್ದ ಪ್ರಾಸಿಕ್ಯೂಷನ್ ನೀಡಬೇಕು ಎಂಬ ವಿಚಾರ; ಬಿಜೆಪಿ ನಾಯಕರು ಹೇಳಿದ್ದೇನು?

ಬೆಂಗಳೂರು; ಯಡಿಯೂರಪ್ಪ ವಿರುದ್ದ ಪ್ರಾಸಿಕ್ಯೂಷನ್ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಯಾರ್ಯಾರು ಏನೇನು ಹೇಳಿದ್ದಾರೆ ನೋಡೋಣ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಹರತಾಳು ಹಾಲಪ್ಪ ಸುಳ್ಳು ಪ್ರಕರಣಗಳು ಎಲ್ಲಿ ಹೋಗಿ‌ ನಿಲ್ಲುತ್ತದೆ ನೋಡಿ. ಇದೆಲ್ಲಾ ನೆಮ್ಮದಿ , ಸಮಯ ಹಾಳು ಮಾಡೋ ಪ್ರಯತ್ನ. ಇದು ಯಡಿಯೂರಪ್ಪ ಅವರಿಗೂ ಏನೂ ಆಗಲ್ಲ. ಇದರಲ್ಲಿ ಏನೂ ಆಗಲ್ಲ, ಹಾನಿ‌ ಮಾಡೋದು ಅಷ್ಟೇ ಅವರ ಉದ್ದೇಶ ಎಂದಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಸನ್ಯಾಸಿ ಚಿನ್ಮಯಿಯನ್ನ ತಕ್ಷಣ ಬಿಡುಗಡೆ ಮಾಡಬೇಕು. ಹಿಂದುಗಳ ಮೇಲೆ ಹಿಂಸಾಚಾರಗಳನ್ನ ನಿಲ್ಲಿಸಬೇಕು. ಪಕ್ಷವಾಗಿ ಕಾಂಗ್ರೆಸ್ ತೀರ್ಮಾನ ಏನು?. ಕುಲಾಧಿಪತಿ ಸ್ಥಾನಕ್ಕೆ ಸಿಎಂ ನಿನ್ನೆ ಕೋಕ್ ಕೊಟ್ಟಿದ್ದಾರೆ. ಸರ್ವಾಧಿಕಾರಿ ಧೋರಣೆ ಮಾಡಲು ಹೊರಟಿದ್ದೀರಾ?. ನಿಮ್ಮ‌ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ. ಗೌವರ್ನರ್ ನಿಂದ ಇಷ್ಟು ದಿನ ಕುಲಪತಿಗಳ ನೇಮಕ ಆಗುತ್ತಿತ್ತು. ಮುಡಾ ಹಗರಣ ನಡೆದಿದೆ, ಎಫ್ ಐಆರ್ ನಡೆದಿದೆ. ಈವರೆಗೆ ಏನೂ ನಡೆದಿಲ್ಲ ಅನ್ನೋ ಹಾಗೆ ಇದ್ದೀರ. ನೀವು ರಾಜೀನಾಮೆ ಅಂತೂ ಕೊಡಲಿಲ್ಲ. ಏನೂ ಆಗಿಲ್ಲ ಅಂದರೆ ಬೇರೆಯವನ್ನ ಯಾಕೆ ಅರೆಸ್ಟ್ ಮಾಡಲು ಪ್ರಯತ್ನ ಮಾಡುತ್ತಿದ್ದೀರಿ. ನೀವು ಇವತ್ತೇ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.

ಬಿಎಸ್ ಯಡಿಯೂರಪ್ಪ ವಿರುದ್ಧ ಹಗೆತನದ ರಾಜಕಾರಣ ಮಾಡುತ್ತಿದ್ದಿರಿ. ಬಿಜೆಪಿ ವಿರುದ್ಧ ರಾಜಕಾರಣ ಮಾಡಲು ಹೊರಟಿದ್ದೀರಿ. ನಿಮ್ಮ‌ ಅಬಕಾರಿ ಇಲಾಖೆಯಲ್ಲಿ‌ ಆಡಿಯೋ ವೀಡಿಯೋ ಓಡಾಡುತ್ತಿದೆ. ತಿಮ್ಮಾಪುರ್ ಅವರು 700 ಕೋಟಿ‌ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಇಬ್ಬರು ಅಧಿಕಾರಿಗಳನ್ನ ಮಾತ್ರ ಅಮಾನತು ಮಾಡಲಾಗಿದೆ. ಇವರ ತಲೆದಂಡ ಮಾತ್ರ ಯಾಕೆ? ಅಬಕಾರಿ‌ ಸಚಿವರ ತಲೆತಂಡ ಯಾಕೆ ಇಲ್ಲ. ಬಳ್ಳಾರಿಯಲ್ಲಿ ಬಾಣಂತಿಯರ ಸಾವಾಗುತ್ತೆ. ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾ?. ದನಕರುಗಳಿಗೆ ಕೊಡುವ ಔಷಧಿಗಳು ಸರಬರಾಜು ಆಗಿದೆ. ವರದಿ ಬಂದ್ಮೇಲೆ ಆಗಿದ್ದು ನಿಜ ಅಂತ ಒಪ್ಪಿಕೊಳ್ತಾರೆ. KDP ಸಭೆ ನಡೆಯುತ್ತೆ, ಪೂರ್ಣವಾಗಿ ಬಂದಿದ್ದೆರ ವೆಟರ್ನರಿ ಔಷಧಿಗಳು. ಕಳಪೆ ಔಷಧಿಯೂ ಇದೆ, ದ್ರಾವಣ ಕೂಡ ಕಳಪೆಯಾಗಿದೆ. ಹೀಗಾಗಿ ಸಾವನ್ನಪ್ಪಿದ್ದಾರೆಂದು ವರದಿ ಬಂದಿದೆ.ನೀವು ಆ ಸ್ಥಾನಕ್ಕೆ ಯೋಗ್ಯರಲ್ಲ ಅಂತ ಆರೋಗ್ಯ ಸಚಿವರಿಗೂ ಹೇಳಿಲ್ಲ. ಕೂಡಲೇ ದಿನೇಶ್ ಗುಂಡೂರಾವ್ ನ ಕ್ಯಾಬಿನೆಟ್ ನಿಂದ ವಜಾಗೊಳಿಸಬೇಕು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಡಾ. ಅಶ್ವಥ್ ನಾರಾಯಣ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಸರ್ಕಾರದ ಮೇಲೆ ಮಾಡಿದರು. ತನಿಖೆಗೆ ನಾಗಮೋಹನ್ ದಾಸ್ ಸಮಿತಿ ಮಾಡಿ ಒಂದೂವರೆ ವರ್ಷ ಆಯಿತು. ಅವರ ಆರೋಪ ನಿರಾಧಾರ ಎಂಬುದು ಈಗ ಸ್ಪಷ್ಟವಾಗಿದೆ.ಯಡಿಯೂರಪ್ಪನವರ ಮೇಲೆ ಸಚಿವ ಸಂಪುಟ ಸಭೆಯಲ್ಲಿ ತನಿಖೆ ಆಗಬೇಕು ಎಂಬ ಪ್ರಯತ್ನ ಮಾಡಿರುವುದು ಖಂಡನೀಯ. ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ. ದ್ವೇಷದ ರಾಜಕೀಯ ಕೈಬಿಟ್ಟು ನಿಮ್ಮ ಆಡಳಿತ ಹೇಗೆ ಉತ್ತಮ ಮಾಡುವುದು ನೋಡಿ. ನಿಮ್ಮ ಸರ್ಕಾರದಲ್ಲಿ ಬೆಳಗ್ಗೆ ಎದ್ದರೆ ಭ್ರಷ್ಟಾಚಾರ, ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ. ಈಗಾಗಲೇ ನಮ್ಮ ಮೇಲೆ ತನಿಖೆಗೆ ಸಾಕಷ್ಟು ಆಯೋಗಗಳು, ಎಸ್ಐಟಿಗಳು ಎಲ್ಲಾ ಆಗಿವೆ. ಮತ್ತೆ ಮತ್ತೆ ಮರು ಪ್ರಯತ್ನ ಮಾಡುವ ಬದಲು ನಿಮ್ಮಲ್ಲಿ ಭ್ರಷ್ಟಾಚಾರವನ್ನು ಸರಿಪಡಿಸಬೇಕು ಅಂತಾ ಕ್ರಮ ವಹಿಸಿ.ದ್ವೇಷದ ರಾಜಕಾರಣ ಸಲ್ಲದು ಎಂದಿದ್ದಾರೆ.