ಬೆಂಗಳೂರು; ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಸಾಕ್ಷಿ ಕೇಳಿದ್ದು ಸೈನಿಕರ ಬಗ್ಗೆ ಸಂಶಯ ವ್ಯಕ್ತಪಡಿಸಿದಂತೆ ಅಲ್ಲವೇ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರ ಟೋನ್ ನೋಡಿದಾಗ ಬಿಜೆಪಿ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಅಂತಾ ತಿಳಿದುಕೊಂಡಿರುವಂತಿದೆ. ಇಡೀ ದೇಶ ಯುದ್ಧ ಮಾಡಬೇಕು ಅಂತ ಇದ್ದಾಗ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಸೇರಿದಂತೆ ಯುದ್ಧ ಬೇಡ ಅಂತಾ ಹೇಳಿದ್ದು ಪಾಕಿಸ್ತಾನದಲ್ಲಿ ಲೀಡಿಂಗ್ ನ್ಯೂಸ್ ಆಯಿತು. ಪುಲ್ವಾಮಾ ದಾಳಿ ಆದಾಗ ಭಯೋತ್ಪಾದಕ ದಾಳಿಯ ಬಗ್ಗೆಯೇ ಸಂಶಯಿಸಿ ಕಾಂಗ್ರೆಸ್ ನವರು ಮಾತಾಡಿದರು. ಯಾಕೆ ಹೀಗೆ ದೇಶದ ವಿಷಯ ಬಂದಾಗ ಕೂಡಾ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಸಹಾಯ ಆಗುವ ರೀತಿ ಮಾತಾಡುತ್ತಾರೆ?.ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಸಾಕ್ಷಿ ಕೇಳಿದ್ದು ಸೈನಿಕರ ಬಗ್ಗೆ ಸಂಶಯ ವ್ಯಕ್ತಪಡಿಸಿದಂತೆ ಅಲ್ಲವೇ? ಎಂದಿದ್ದಾರೆ.
ಈಗ ಟೀಕಿಸುತ್ತಿರುವ ಕಾಂಗ್ರೆಸ್ ಸ್ನೇಹಿತರೇ? .ಮುಂಬೈ ಮೇಲೆ ದಾಳಿ ಆದಾಗ ನೀವು ಸೈನಿಕರಿಗೆ ಸ್ವಾತಂತ್ರ್ಯ ಕೊಟ್ಟಿದ್ರಾ?. ಕಾಶ್ಮೀರದಲ್ಲಿ ಕಲ್ಲು ಹೊಡೆದವರಿಗೆ ಗುಂಡು ಹೊಡೆಯುವ ಸ್ವಾತಂತ್ರ್ಯ ಕೊಟ್ಟಿದ್ರಾ?. ದೇಶದ ಹಿತಾಸಕ್ತಿ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಜನ ಸ್ವೀಕರಿಸಲ್ಲ. ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗುವವರಿಗೆ ಬಿಜೆಪಿ ಸಪೋರ್ಟ್ ಮಾಡುತ್ತಿದ್ಯಾ?. ಭಯೋತ್ಪಾದಕರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿರುವುದು ಬಿಜೆಪಿ ನಾ? . ಬಿಜೆಪಿ ಗೆದ್ದಾಗ ಭಾರತ್ ಮಾತಾ ಕೀ ಜೈ ಘೋಷಣೆ ಬರುತ್ತದೆ. ನೀವು ಗೆದ್ದಾಗಲೇ ಬೆಳಗಾವಿ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದ್ದು.ಸೈನ್ಯದ ಮೇಲೆಯೇ ಸಂಶಯ ಬರುವ ರೀತಿ ಮಾಡಬೇಡಿ. ಸಂಧಾನದ ಮೇಜಿನಲ್ಲಿ ಮೋದಿ ಸೋತಿಲ್ಲ. ಸಂಧಾನದ ಮೇಜಿನಲ್ಲಿ ಸೋತವರು ಯಾರು ಅಂತಾ ಹಿಂತಿರುಗಿ ನೋಡಿ.ಸತ್ತವರ ಹೆಸರು ಹೇಳಬಾರದು ಅಂತಾ ನಾನು ಈಗ ಅವರ ಹೆಸರು ಹೇಳಲ್ಲ ಎಂದು ಹೇಳಿದ್ದಾರೆ.
ನಿಮ್ಮ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರದಂತಹ ಒಂದು ಮಾಡಿದ್ದೀರಾ ಹಿಂದೆ?.ಸಂತಾಪ, ಖಂಡನೆ ಇಷ್ಟೇ ಮಾಡಿದ್ದು ಕಾಂಗ್ರೆಸ್ .ಮುಂಬೈ ದಾಳಿಗೆ ಏನು ಕೌಂಟರ್ ಮಾಡಿದ್ರಿ? ಅಫ್ಜಲ್ ಗುರು ಪರ ನಿಂತವರು ಯಾರೂ?.ಹಿಂದಿನ ಕ್ರೆಡಿಟ್ ಇಂದಿರಾ ಗಾಂಧಿಗೋ ಸೈನಿಕರಿಗೋ ಅಂತಾ ಸಿದ್ದರಾಮಯ್ಯ ಹೇಳಬೇಕು. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ ಎಂದು ಹೇಳುವ ಪ್ರದಾನ ಮಂತ್ರಿ ನಮಗೆ ಈಗ ಸಿಕ್ಕಿದ್ದಾರೆ. ಕಾಂಗ್ರೆಸ್ ಗೆ ಶಶಿ ತರೂರ್ ಅವರೇ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.