ಮನೆ Latest News ಕಾಂಗ್ರೆಸ್ ಸರ್ಕಾರ ಇದ್ಯಾ? ಸತ್ತೋಗಿದ್ಯಾ? : ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಇದ್ಯಾ? ಸತ್ತೋಗಿದ್ಯಾ? : ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ

0

ಬೆಂಗಳೂರು; ಕಾಂಗ್ರೆಸ್ ಸರ್ಕಾರ ಇದ್ಯಾ? ಸತ್ತೋಗಿದ್ಯಾ? ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಉದಯಗಿರಿ ಠಾಣೆ ಗಲಭೆ ಆರ್ ಎಸ್ ಎಸ್ ಕೃತ್ಯ ಎಂಬ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು  ಕಾಂಗ್ರೆಸ್ ಸರ್ಕಾರ ಇದ್ಯಾ? ಸತ್ತೋಗಿದ್ಯಾ? .ಪೊಲೀಸರು ಏನು ಮಾಡುತ್ತಿದ್ದರು?.ಆರ್ ಎಸ್ ಎಸ್ ನವರು ಭಾಗವಹಿಸಿದ್ದರೆ ತನಿಖೆ ಮಾಡಿದ್ದೀರಾ? .ಯಾವ ತನಿಖೆ ವರದಿ ಅಧರಿಸಿ ಹೇಳುತ್ತೀರಿ?.ಆಧಾರ ರಹಿತವಾಗಿ ಬುದ್ಧಿಗೇಡಿ ಹೇಳಿಕೆಯನ್ನು ಹರಿಪ್ರಸಾದ್ ಕೊಟ್ಟಿದ್ದಾರೆ.ಕೆಲವು ಅಲ್ಪಸಂಖ್ಯಾತರು ಗೂಂಡಾಗಳಂತೆ, ಭಯೋತ್ಪಾದಕರಂತೆ ವರ್ತಿಸಲು ಕಾಂಗ್ರೆಸ್ ಕಾರಣ.ಹುಬ್ಬಳ್ಳಿ, ಡಿಜೆ-ಕೆಜಿ ಹಳ್ಳಿ ಘಟನೆಗಳಲ್ಲಿ ಕಠಿಣ ಕ್ರಮ ಕೈಗೊಂಡಿದ್ದಿದ್ದರೆ ಉದಯಗಿರಿ ಘಟನೆ ಆಗುತ್ತಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿವಿಗಳನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಕೊಪ್ಪಳ, ಚಾಮರಾಜನಗರ, ಬೀದರ್ ಸೇರಿದಂತೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಬರೆ ಎಳೆಯಲಾಗುತ್ತಿದೆ. ಶಿಕ್ಷಣ ಪ್ರಮಾಣ ಹೆಚ್ಚಾಗಬೇಕು ಅಂತ ಹೊಸ ವಿವಿಗಳನ್ನು ತೆರೆಯಲಾಗಿತ್ತು. ಅಲ್ಲಿನ ಪರಿಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ವಿವಿಯ ಪ್ರಾಧ್ಯಾಪಕರು, ಆಡಳಿತ ವರ್ಗಕ್ಕೆ ವೇತನ ಕೊಡಲಾಗದ ಹಿನ್ನೆಲೆಯಲ್ಲಿ ವಿವಿ ಮುಚ್ಚಲು ಸರ್ಕಾರ ಮುಂದಾಗಿದೆ. ಶಿಕ್ಷಣ ಸಂಸ್ಥೆ ಮುಚ್ಚುವುದು ಬಡ ವಿದ್ಯಾರ್ಥಿಗಳಿಗೆ ಮಾಡುವ ಘೋರ ಅನ್ಯಾಯ. ಹೀಗಾದ್ರೆ ವಿವಿಗಳು ನಡೆಯುವುದು ಹೇಗೆ?.ಬೋಧಕ, ಭೋದಕೇತರ ವರ್ಗ ಇಲ್ಲ ಅಂತ ಶಿಕ್ಷಣ ಸಂಸ್ಥೆ ಮುಚ್ಚುತ್ತೀರಾ?. ಶಿಕ್ಷಕರಿಲ್ಲ ಅಂತ ಶಾಲೆಗಳನ್ನು ಮುಚ್ಚುತ್ತೀರಾ?.ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ದೊಂಬರಾಟ ಮಾಡಬಾರದು.ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಆರ್ಥಿಕ ಪರಿಶೀಲನೆ ಮಾಡಲು ಉಪಸಮಿತಿ ಮಾಡಲಾಗಿತ್ತು.ಆ ಉಪಸಮಿತಿ ವರದಿಯ ಆಧಾರದ ಮೇಲೆ ಈ ಕ್ರಮ ಆಗಿದ್ದರೆ ಆ ಸಮಿತಿ ವರದಿಯೇ ಸರಿಯಲ್ಲ.ಆ ಉಪಸಮಿತಿ ವರದಿಯನ್ನು ಬಿಸಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ಯಾರಂಟಿ ಯೋಜನೆ ಹಣ ತಲುಪದ ವಿಚಾರದ ಬಗ್ಗೆ ಮಾತನಾಡಿದ ಅವರು  ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ.ಹಾಲಿನ ದರ ಹೆಚ್ಚಳ ಮಾಡುವುದಾಗಿ ಹೇಳುತ್ತಿದ್ದಾರೆ. ಕೇಂದ್ರದಿಂದ ಅಕ್ಕಿ ಬರುತ್ತಿದೆ, 5 ಕೆಜಿಯ ಹಣ ಕೊಡುತ್ತಿಲ್ಲ. ಹೈಸ್ಕೂಲ್‌ಗೆ ಅತಿಥಿ ಶಿಕ್ಷಕರಾಗಿ ಬರುವವರಿಗೆ ನಾಲ್ಕೈದು ತಿಂಗಳಿಂದ ವೇತನವೇ ನೀಡಿಲ್ಲ.ಇನ್ನು ಯಾವುದಕ್ಕೆ ಟ್ಯಾಕ್ಸ್ ಹಾಕಬೇಕು ಅಂತಾ  ಕಾಯುತ್ತಿದ್ದಾರೆ.ಸಿದ್ದರಾಮಯ್ಯ ಎರಡನೇ ಅವಧಿಯ ಸರ್ಕಾರ ಸಂಪೂರ್ಣ ನೆಲ ಕಚ್ಚಿದೆ.ಗೃಹಲಕ್ಷ್ಮಿ ಹಣ ಕೂಡಾ ಹಾಕಿಲ್ಲ. ಇದು ಪಾಪರ್ ಸರ್ಕಾರ, ಸಂಪೂರ್ಣ ದಿವಾಳಿಯಾಗಿದೆ ಎಂದರು.