ಮನೆ Latest News ಅಮಾಯಕನಂತೆ ನಟಿಸಿ ಎಲ್ಲರ ಕಿವಿಗೆ ಹೂ ಇಡ್ತಿದ್ದಾರಾ ಹನುಮಂತು?

ಅಮಾಯಕನಂತೆ ನಟಿಸಿ ಎಲ್ಲರ ಕಿವಿಗೆ ಹೂ ಇಡ್ತಿದ್ದಾರಾ ಹನುಮಂತು?

0

ನಿನ್ನೆಯ ಬಿಗ್ ಬಾಸ್ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಹಲವು ಮುಖವಾಡಗಳನ್ನು ಫೇಕ್ ಫ್ರೆಂಡ್ಶಿಪ್ ಅನ್ನು ಕಳಚಿದ್ದಂತು ಸುಳ್ಳಲ್ಲ. ಅದಕ್ಕಿಂತ ಹೆಚ್ಚಾಗಿ ನಿನ್ನೆಯ ಎಪಿಸೋಡ್ ಹನುಮಂತು ಬಗ್ಗೆ ವೀಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತೂ ಸುಳ್ಳಲ್ಲ. ಬರು ಬರುತ್ತಾ ರಾಯರ ಕುದುರೆ ಕತ್ತೆಯಾಗುತ್ತಿದ್ದಾರಾ ಹನುಮಂತು ಅನ್ನೋ ಅನುಮಾನ ಸದ್ಯಕ್ಕೆ ವೀಕ್ಷಕರನ್ನು ಕಾಡೋದಕ್ಕೆ ಶುರು ಮಾಡಿದೆ. ನಿಜಕ್ಕೂ ಹನುಮಂತು ಅಮಾಯಕನಾ ಇಲ್ಲ ಆತ ಮಾಡ್ತಿರೋದು ನಾಟಕನಾ ಅನ್ನೋ ಗೊಂದಲ ಶುರುವಾಗಿದೆ.

ಸ್ನೇಹಿತರೇ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟವರು ಹನುಮಂತು ಲಮಾಣಿ. ಬಿಗ್ ಬಾಸ್ ಮನೆಗೆ ಬಂದಾಗ ಅವರು ತುಂಬಾ ಅಮಾಯಕನಂತೆ ಇದ್ದರು. ಅದು ಎಷ್ಟರ ಮಟ್ಟಿಗೆ ಅಂದರೆ ತನಗೆ ವೆಸ್ಟರ್ನ್ ಟಾಯ್ಲೆಟ್ ಬಳಸೋದಕ್ಕೆ ಗೊತ್ತಿಲ್ಲ ಅನ್ನೋ ಮಟ್ಟಿಗೆ ಅವರು ಬಿಗ್ ಬಾಸ್ ಮನೆಯಲ್ಲಿ ವರ್ತಿಸಿದ್ರು.ಆಗಲೇ ವೀಕ್ಷಕರು ಹನುಮಂತು ಇಷ್ಟೆಲ್ಲಾ ಡ್ರಾಮಾ ಬೇಡ ಕಣೋ ಅಂತಾ ಅನ್ನೋದಕ್ಕೆ ಶುರು ಮಾಡಿದ್ರು.ಆದರೆ ಇದೇ ವೀಕ್ಷಕರಿಗೆ ಹೋಗ್ತಾ ಹೋಗ್ತಾ ಹನುಮಂತು ಇಷ್ಟ ಆಗೋದಕ್ಕೆ ಶುರು ಆದರು. ತೆಗಳಿದವರು ಹೊಗೊಳೋದಕ್ಕೆ ಶುರು ಮಾಡಿದ್ರು. ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ಹನುಮಂತು ಅವರು ಕೂಡ ತಮ್ಮ ರಿಯಲ್ ಆಟವನ್ನು ತೋರಿಸೋದಕ್ಕೆ ಆರಂಭಿಸಿದ್ರು. ಟಾಸ್ಕ್ ಗಳಲ್ಲಿ ಚೆನ್ನಾಗಿ ಆಡೋದಕ್ಕೆ ಸ್ಟಾರ್ಟ್ ಮಾಡಿದ್ರು. ಅಲ್ಲಿಂದ ಹನುಮಂತು ಡ್ರಾಮಾ ಮಾಡ್ತಾನೆ ಅಂತಿದ್ದೊರೆಲ್ಲಾ ಹನುಮಂತು ಪ್ರಾಮಾಣಿಕ ಆಟಗಾರ. ಆತ ಮುಗ್ಧ ಆದ್ರೆ ಬುದ್ಧಿವಂತ ಅಂತಾ ಹೇಳೋದಕ್ಕೆ ಶುರು ಮಾಡಿದ್ರು.

ಇನ್ನು ಕಿಚ್ಚ ಸುದೀಪ್ ಅವರು ಕೂಡ ಹನುಮಂತು ಅವರನ್ನು ನೆಚ್ಚಿಕೊಂಡಿದ್ರು. ಪ್ರೀತಿಯಿಂದ ಬಟ್ಟೆ ಕಳುಹಿಸಿದ್ರು. ಇದರ ಮಧ್ಯೆ ಹನುಮಂತು ಅವರಿಗೆ ಒಂದು ಬಾರಿ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಟಾಸ್ಕ್ ರದ್ದಾಗಲಿ ಅಂತಾ ಹನುಮಂತು ಹೇಳಿದ ಮಾತಿಗೆ ಫುಲ್ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದರು. ಆದಾದ ಬಳಿಕ ಅನೇಕರು ಕಿಚ್ಚ ಹನುಮಂತುಗೆ ಆ ರೀತಿ ಹೇಳಿದ್ದು ಸರಿಯಲ್ಲ ಎಂದಿದ್ದರು. ಇನ್ನೂ ಕೆಲವರು ಹನುಮಂತು ಇತ್ತೀಚೆಗೆ ಸ್ವಲ್ಪ ಅತಿಯಾಗಿ ಆಡುತ್ತಿದ್ದಾರೆ. ಹಾಗಾಗಿ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದು ಒಳ್ಳೆದಾಯ್ತು ಅಂದಿದ್ದರು. ಇದೆಲ್ಲದರ ನಡುವೆ ಬರು ಬರುತ್ತಾ ಹನುಮಂತು ಅವರು ಯಾಕೋ ಕೊಂಚ ಛೇಂಜ್ ಆಗ್ತಿದ್ದಾರೆ ಅಂತಾ ವೀಕ್ಷಕರಿಗೂ ಅನ್ನಿಸೋದಕ್ಕೆ ಶುರುವಾಯ್ತು. ಎಲ್ಲಾ ಗೊತ್ತಿದ್ದರು ಹನುಮಂತು ಯಾಕೋ ನನಗೆ ಏನೂ ಗೊತ್ತಿಲ್ಲ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಅಂತಾ ವೀಕ್ಷಕರು ಕಮೆಂಟ್ ಮಾಡೋದಕ್ಕೆ ಶುರು ಮಾಡಿದ್ರು. ಇತ್ತೀಚೆಗೆ ಎಲ್ಲರಿಗೂ ಹನುಮಂತು ಅವರ ವರ್ತನೆ ನೋಡಿದ್ರೆ ಹಾಗೇ ಅನ್ನಿಸೋದಕ್ಕೆ ಶುರುವಾಗಿದೆ.

ಈಗ ನಿನ್ನೆ ವಿಚಾರಕ್ಕೆ ಬರೋಣ ನಿನ್ನೆ ಗ್ರಾಸರಿ ಟಾಸ್ಕ್ ವಿಚಾರದಲ್ಲಿ ತ್ರಿವಿಕ್ರಂ ಅವರು ಇಷ್ಟು ದಿನ ನಾವು ಆಟ ಆಡಿ ಊಟ ಹಾಕಿದ್ದೀವಿ ಈಗ ನೀವು ಆಡಿ ಊಟ ಹಾಕಿ ಎಂದು ಆಡಿದ ಮಾತಿನ ಬಗ್ಗೆ ಕಿಚ್ಚ ಸುದೀಪ್ ಅವರು ಹನುಮಂತು ಅವರ ಬಳಿ ರಿಯಾಕ್ಷನ್ ಕೇಳಿದ ಹನುಮಂತು ಅವರು ಏನು ಕೂಡ ಮಾತೇ ಆಡೋದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಗಂಟೆಗಟ್ಟಲೇ ಮಾತನಾಡೋ, ಮನೆ ಮಂದಿಯ ಮುಂದೆ ಹಾಸ್ಯ ಚಟಾಕಿ ಹಾರಿಸುತ್ತಾ ಕಾಲ್ ಎಳೆಯೋ ಹನುಮಂತು ಇಲ್ಲ್ಯಾಕೆ ಮಾತ್ರ ಸೈಲೆಂಟ್. ಕಿಚ್ಚನ ಮುಂದೆ ಮಾತ್ರ ಯಾಕೆ ಹನುಮಂತು ಮಾತೇ ಬಾರದಷ್ಟು ಮುಗ್ಧನಾಗಿದ್ದಾರೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಗೇರ್ ಟಾಸ್ಕ್ ನಲ್ಲಿ ಆಕ್ಟಿವಿಟಿ ರೂಂಗೆ ಹೋಗುವಾಗ ಯಾಕೋ ಅತಿಯಾಗಿ ಆಡಿದ್ರು ಅನ್ನಿಸಿದ್ದಂತೂ ಸುಳ್ಳಲ್ಲ