ಮನೆ Latest News ಕಾಡು, ಕಬ್ಬಿನ ಗದ್ದೆಗಳು ಪೊಲೀಸ್ ಠಾಣೆಗಿಂತಲೂ ಸೇಫಾ? : ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ

ಕಾಡು, ಕಬ್ಬಿನ ಗದ್ದೆಗಳು ಪೊಲೀಸ್ ಠಾಣೆಗಿಂತಲೂ ಸೇಫಾ? : ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ

0

 

ಬೆಂಗಳೂರು: ಕಾಡು, ಕಬ್ಬಿನ ಗದ್ದೆಗಳು ಪೊಲೀಸ್ ಠಾಣೆಗಿಂತಲೂ ಸೇಫಾ? ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಿ ಟಿ ರವಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ರಾಜ್ಯಪಾಲರ ಭೇಟಿ ಮಾಡಿ ಸಿ. ಟಿ. ರವಿ ಬಂಧನ, ನಂತರ ಪೊಲೀಸ್ ಟಾರ್ಚರ್, ನೂರಾರು ಕಿ.ಮೀ. ಅಲೆಸಿದ್ದ ಬಗ್ಗೆ ದೂರು ನೀಡಿದ್ದೇವೆ. ಕಾಡು, ಕಬ್ಬಿನ ಗದ್ದೆ, ಜಲ್ಲಿ ಕ್ರಷರ್ ಎಲ್ಲಾ ಕರೆದುಕೊಂಡು ಹೋಗಿದ್ದು ಅನುಮಾನ ಹುಟ್ಟಿಸಿದೆ. ಕಾಡು, ಕಬ್ಬಿನ ಗದ್ದೆಗಳು ಪೊಲೀಸ್ ಠಾಣೆಗಿಂತಲೂ ಸೇಫಾ? . ಪೊಲೀಸ್ ಸ್ಟೇಷನ್ ಸೇಫ್ ಅಲ್ಲ ಅಂತ ಈ ಸರ್ಕಾರ ಜನರಿಗೆ ತಿಳಿಸಿದೆ. ಸರ್ಕಾರ ನಗೆ ಪಾಟಲಿಗೀಡಾಗಿದೆ ಎಂದಿದ್ದಾರೆ.

ಗೃಹ ಸಚಿವರು, ಸಿಎಂಗೆ ಗೊತ್ತಿಲ್ಲದೇ ಇವೆಲ್ಲಾ ನಡೆದಿದೆ. ಸಿ.ಟಿ. ರವಿಗೆ ಸೂಕ್ತ ರಕ್ಷಣೆ ಕೊಡಬೇಕು. ತನಿಖೆ ಪಾರದರ್ಶಕ ಆಗಿ ನಡೆಯಬೇಕು.ಪೊಲೀಸರಿಗೆ ಕ್ಷಣ ಕ್ಷಣಕ್ಕೂ ಯಾರಿಂದ ಫೋನ್ ಬರುತ್ತಿತ್ತು ಅಂತ ಗೊತ್ತಾದರೆ ಹಿಂದೆ ಯಾರಿದ್ದರು ಎನ್ನುವುದು ತಿಳಿಯುತ್ತದೆ. ರಾಜ್ಯಪಾಲರು ಸಂವಿಧಾನ ರಕ್ಷಕರು. ಯಾರಗೇ ಈ ಸಮಸ್ಯೆ ಆದರೂ ರಾಜ್ಯಪಾಲರು ಬಿಡಲ್ಲ ಅಂತ ಸಂದೇಶ ಕೊಡುವಂತೆ ಕೇಳಿಕೊಂಡಿದ್ದೇವೆ ಎಂದಿದ್ದಾರೆ. ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಅಂತ ಕೇಳಿದ್ದೇವೆ. ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ರಿಂದ ಆಣೆ ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾರು ಸತ್ಯ ಯಾರು ಮಿಥ್ಯ ಎನ್ನುವುದನ್ನು ಸಂವಿಧಾನ ತೀರ್ಮಾನ ಮಾಡುತ್ತದೆ. ಸಂವಿಧಾನದ ತೀರ್ಪು ಏನೇ ಬಂದರೂ ಸಿ.ಟಿ. ರವಿ ಒಪ್ಪಿಕೊಳ್ಳುತ್ತಾರೆ.ಧರ್ಮಸ್ಥಳದ ಮಂಜುನಾಥ ಮಂಜುನಾಥ ಆಗಿಯೇ ಇರಲಿ ಎಂದಿದ್ದಾರೆ.

ಸಿಐಡಿ ತನಿಖೆಗೆ ಪ್ರಕರಣ ಹಸ್ತಾಂತರ ವಿಚಾರದ ಬಗ್ಗೆ ಮಾತನಾಡಿದ ಅವರು ಅವನು ಎಡ ಮಾರ್ಟಿನೋ, ಬಲ ಮಾರ್ಟಿನೋ ಗೊತ್ತಿಲ್ಲ.ಇವರು ನಡೆದುಕೊಂಡ ರೀತಿ ಸರಿಯಲ್ಲ. ಇವರು ಯಾವ ತನಿಖೆ ಮಾಡಿದ್ರೆ ಏನು?. ಸಿ.ಟಿ. ರವಿಗೆ ಊಟ ನೀಡದೇ ಸುತ್ತಾಟ ಮಾಡಿಸಿದ್ದಾರೆ. ಅವರು ನಕ್ಸಲ್ ಏರಿಯಾದಿಂದ ಬಂದವರು, ಭಯೋತ್ಪಾದಕರ ಬೆದರಿಕೆ ಕೂಡಾ ಇದೆ. ಹೀಗೆ ಮಾಡಿದ್ದು ಸರೀನಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯ ಶೋಧನಾ ತಂಡ ರಚಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಶಾಸಕಾಂಗ ಪಕ್ಷ ಮನವಿ ಮಾಡಿದೆ.