ಬೆಂಗಳೂರು; ಇಂಡೋ-ಪಾಕ್ ಕ್ರಿಕೆಟ್ ಮ್ಯಾಚ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ದ ಶಾಸಕ ಪ್ರದೀಪ್ ಈಶ್ವರ್ ಕಿಡಿ ಕಾರಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ರದ್ದು ಮಾಡಬೇಕು. ನಾನು ಯಾವುದೇ ಕಾರಣಕ್ಕೂ ಇಂಡಿಯಾ ಪಾಕಿಸ್ತಾನ ಮ್ಯಾಚ್ ಅನ್ನು ನೋಡುವುದಿಲ್ಲ. ಯಾವ ಮುಖ ಇಟ್ಟುಕೊಂಡು ಮ್ಯಾಚ್ ಮಾಡುತ್ತಿದ್ದಾರೆ. ಪೆಹಲ್ಗಾಮ್ ಘಟನೆಯ ನೋವು ನಮಗೆ ಇನ್ನೂ ಇದೆ. ಕೇಂದ್ರದ ಬಿಜೆಪಿ ಈ ಮ್ಯಾಚ್ ನಿಲ್ಲಿಸಬಹುದಿತ್ತು ಆದ್ರೆ ನಿಲ್ಲಿಸಿಲ್ಲ. ಪಾಕಿಸ್ತಾನದವರು ನಮ್ಮವರನ್ನ ಕೊಂದಿದ್ದಾರೆ ಅಂತವರ ಜೊತೆ ನಾವು ಮ್ಯಾಚ್. ಇಲ್ಲಿ ಅಶೋಕ, ವಿಜಯೇಂದ್ರ, ಯತ್ನಾಳ ಹೇಳಿದ್ರು ಪಾಕಿಸ್ತಾನ ಅಂತ ಬೊಬ್ಬೆ ಹಾಕಿದ್ರು. ನಿಮಗೆ ಧಮ್ಮು ತಾಕತ್ ಇದ್ರೆ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ನಿಲ್ಲಿಸಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಮ್ಯಾಚ್ ರದ್ದು ಮಾಡಿಸ್ತಿದ್ವಿ. ನಾವಿನ್ನು ಪೆಹಲ್ಗಾಮ್ ಘಟನೆ ಮರೆತಿಲ್ಲ. ನಮಗೆ ನೋವಿದೆ ಅದಕ್ಕೆ ನಾನು ಇವತ್ತಿನ ಮ್ಯಾಚ್ ನೋಡಲ್ಲ. ನಾನೊಬ್ಬ ಕಾಂಗ್ರೆಸ್ ಶಾಸಕನಾಗಿ ಹೇಳುತ್ತಿದ್ದೇನೆ ಇಂಡಿಯಾ ಪಾಕಿಸ್ತಾನ ಮ್ಯಾಚ್ ರದ್ದು ಮಾಡಿ ಎಂದಿದ್ದಾರೆ.
ಇನ್ನು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ಹೊರ ಹಾಕಿದ್ದಾರೆ. ಛಲವಾದಿ ನಾರಾಯಣ ಸ್ವಾಮಿಗೆ ತಮ್ಮ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಜನರಿಗೆ ಒಳ್ಳೆಯದು ಮಾಡೋದರಲ್ಲಿ ನಾನು ಅಣ್ಣ ಅವರು ತಮ್ಮ. ದಲಿತರ ಬಗ್ಗೆ ನಾರಾಯಣ ಸ್ವಾಮಿ ಮಾತನಾಡ್ತಾರೆ. ಎಐಸಿಸಿ ಅಧ್ಯಕ್ಷರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ.ನಮ್ಮ ಕ್ಷೇತ್ರದಲ್ಲಿ ದಲಿತ ಹುಡುಗ ಆತ್ಮಹತ್ಯೆ ಮಾಡಿಕೊಂಡ. ನಿಮ್ಮ ಸಂಸದರ ಹೆಸರು ಹೇಳಿ ಸತ್ತೊದ. ನೀವು ಅವರ ಕುಟುಂಬವನ್ನು ಮಾತನಾಡಿಸಲು ಬಂದ್ರಾ?. ಇದೇನಾ ನಿಮ್ಮ ದಲಿತ ಪ್ರೀತಿ?. ನನ್ನ ನಿಮ್ಯಾನ್ಸ್ ಗೆ ಸೇರಿಸುತ್ತೇನೆ ಅಂದಿದ್ದೀರಾ. ಮೊದಲು ನೀವು ಟ್ರೀಟ್ಮೆಂಟ್ ತೆಗೆದುಕೊಂಡು ಬನ್ನಿ. ರವಿಕುಮಾರ್, ಯತ್ನಾಳ್, ಪ್ರತಾಪಸಿಂಹ ಅವರು ಕರೆದುಕೊಂಡು ಹೋಗಿ. ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಕೊಡಿಸುತ್ತೇನೆ ಎಂದು ಗುಡುಗಿದ್ದಾರೆ.
ರಾಜ್ಯದ ಸಿಎಂ ಬಗ್ಗೆ ಬಾಯಿಗೆ ಬಂದಹಾಗೆ ಮಾತಬಾಡಿದ್ರೆ ಸಂವಿಧಾನ ಗೌರವನಾ. ನೀವು ಸಿಎಂ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ನಾನು ನಿಮ್ಮ ಬಗ್ಗೆ ಮಾತನಾಡಬಾರದಾ. ಕೋತಿಗಳನ್ನ ಕೋತಿ ಅಂದ್ರೆ ತಪ್ಪಾ ಎಂದು ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ದಲಿತರ ಬಗ್ಗೆ ನೀವೆಲ್ಲ ಮಾತನಾಡುತ್ತಿದ್ದೀರಾ. ದಲಿತರ ಮನೆಗೆ ಹೋಗಿ ಎಷ್ಟು ಕೆಲಸ ಮಾಡಿದ್ದೀರಾ. ಈ ಬಗ್ಗೆ ರಿಪೋರ್ಟ್ ಕಾರ್ಡ್ ಕೊಡಿ ನಾನು ರಿಪೋರ್ಟ್ ಕಾರ್ಡ್ ಕೊಡುತ್ತೇನೆ.ಹಿಂದೂ ಧರ್ಮದ ಬಗ್ಗೆ ಎಲ್ಲ ನಾಯಕರು ಮಾತನಾಡುತ್ತಾರೆ. ಬಡ ಬ್ರಾಹ್ಮಣ ಅರ್ಚಕರ ಮಕ್ಕಳಿಗೆ ಏನಾದರೂ ಸಹಾಯ ಮಾಡಿದ್ದಾರ?. ಯತ್ನಾಳ ಅವರೆ ನಿಮ್ಮ ಹತ್ತಿರ ನೂರಾರು ಕೋಟಿ ಆಸ್ತಿ ಇದೆ.ಅರ್ಚಕರ ಮಕ್ಕಳ ಭವಿಷ್ಯಕ್ಕೆ ೨೫% ಆಸ್ತಿ ಬರೆದುಕೊಟ್ಟರೆ ನಾನು ಕೋಡುತ್ತೇನೆ.ನಿಮ್ಮ ಹಿಂದೂ ಧರ್ಮದ ಪ್ರೀತಿಗೆ ನಾನು ಎಲ್ಲೂ ಮಾತನಾಡಲ್ಲ. ಯತ್ನಾಳ್ ಅವರಿಗೆ ಹಿಂದೂ ಧರ್ಮವನ್ನ ಬರೆದುಕೊಟ್ಟಿದ್ದಾರಾ? ಎಂದಿದ್ದಾರೆ.
ಹಾಸನದಲ್ಲಿ ಮೃತರಿಗೆ ಪರಿಹಾರ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿ ಪರಿಹಾರ ನೀಡಿರೋದು ಕಡಿಮೆಯಾಗಿದೆ, ನಾನು ಸಿಎಂ ಅವರ ಗಮನಕ್ಕೆ ತರುತ್ತೇನೆ. ಗೈಡ್ ಲೈನ್ಸ್ ಮೂಲಕ ಪರಿಹಾರ ನೀಡಿರುತ್ತಾರೆ. ಪರಿಹಾರ ಹೆಚ್ಚಳಕ್ಕೆ ಸಿಎಂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ











