ಮನೆ Latest News ಮತ್ತೆ ತನ್ನ ನರಿ ಪ್ರದರ್ಶಿಸಿದ ಪಾಕ್, ಭಾರತದ 15 ನಗರ ಮೇಲೆ ದಾಳಿಗೆ ಯತ್ನ; ...

ಮತ್ತೆ ತನ್ನ ನರಿ ಪ್ರದರ್ಶಿಸಿದ ಪಾಕ್, ಭಾರತದ 15 ನಗರ ಮೇಲೆ ದಾಳಿಗೆ ಯತ್ನ; ಪಾಪಿಸ್ತಾನದ ದಾಳಿಗೆ ತಕ್ಕ ಉತ್ತರ ಕೊಟ್ಟ ಭಾರತೀಯ ಸೇನೆ

0

ಜಮ್ಮು ಕಾಶ್ಮೀರ;  ಭಾರತೀಯ ಸೇನೆಯನ್ನು ಎದುರಿನಿಂದ ಎದುರಿಸಲು ತಾಕತ್ತಿಲ್ಲದ ಪಾಪಿ ಪಾಕಿಸ್ತಾನ ಹಿಂದಿನಿಂದ ಹೇಡಿಗಳಂತೆ ದಾಳಿ ಮುಂದುವರೆಸಿದೆ.

ಭಾರತದ ಆಪರೇಷನ್ ಸಿಂಧೂರ್ ನಿಂದ ಪತರುಗುಟ್ಟಿ ಹೋಗಿರುವ ಪಾಕಿಸ್ತಾನ ಇದೀಗ ಅಮಾಯಕ ನಾಗರೀಕರನ್ನು ಗುರಿಯಾಗಿಸಿದೆ. ನಿನ್ನೆ ಕೂಡ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿದ್ದ ಪಾಕಿಸ್ತಾನ 15ಕ್ಕೂ ಹೆಚ್ಟು ಮಂದಿಯನ್ನು ಬಲಿ ಪಡೆದಿತ್ತು. ಇಂದು ಮತ್ತೆ ಪಾಕಿಸ್ತಾನದ ಮಿಸೈಲ್ ದಾಳಿಗೆ 16 ಮಂದಿ ಉಸಿರು ಚೆಲ್ಲಿದ್ದಾರೆ.

ಇದರ ಮಧ್ಯೆ ನಿನ್ನೆ ಪಾಕಿಸ್ತಾನ ತಡರಾತ್ರಿ ಭಾರತದ 15 ನಗರಗಳ ಮೇಲೆ ಮಿಸೈಲ್ ದಾಳಿ ಮಾಡುವ ಯತ್ನ ಮಾಡಿದೆ. ಭಾರತ ಅವಂತಿಪುರ,  ಶ್ರೀನಗರ,  ಜಮ್ಮು,  ಪಠಾಣ್​​ಕೋಟ್,  ಅಮೃತಸರ,  ಕಪುರ್ತಲಾ,  ಜಲಂಧರ್,  ಲುಧಿಯಾನ,  ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ, ಭುಜ್ ಮೇಲೆ ದಾಳಿಗೆ ಯತ್ನಿಸಿತ್ತು. ಈ ದಾಳಿಯನ್ನು ಭಾರತ ತಡೆದಿದೆ. ಡ್ರೋಣ್ ಅಟ್ಯಾಕ್ ಮೂಲಕ ಪಾಕಿಸ್ತಾನ ಮಿಸೈಲ್ ಅನ್ನು ಹೊಡೆದುರುಳಿಸಿದೆ. ಭಾರತದ ಪ್ರಮುಖ ಅಸ್ತ್ರ S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತವನ್ನ ರಕ್ಷಿಸಿದೆ.

ಅತ್ತ ಪಾಕ್ ಬಾಲ ಬಿಚ್ಚುತ್ತಿದ್ದಂತೆ ಭಾರತೀಯ ಸೇನೆ  ಪಾಕಿಸ್ತಾನದ ಲಾಹೋರ್​ನಲ್ಲಿರೋ ಏರ್ ಡಿಫೆನ್ಸ್ ಸಿಸ್ಟಮ್ ಅನ್ನೇ ಉಡೀಸ್ ಮಾಡಿದೆ. ಚೀನಾ  ಪಾಕಿಸ್ತಾನಕ್ಕೆ ಕೊಟ್ಟಿದ್ದ HQ-9 ಏರ್ ಡಿಫೆನ್ಸ್ ಸಿಸ್ಟಮ್ ಭಾರತದ ದಾಳಿಯಿಂದ ಪುಡಿ, ಪುಡಿಯಾಗಿದೆ. ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ,  ಗುಜ್ರಾನ್​​​ವಾಲಾ, ಚಕ್ವಾಲ್,  ಅಟ್ಟೋಕ್,  ಬಹಾವಲ್​​ಪುರ್​, ಮೈನ್ವಾಲ್, ಛೋರ್,  ಕರಾಚಿ ದಾಳಿ ಮಾಡಿದೆ.

ಭಾರತದ ಪ್ರತಿದಾಳಿಯಿಂದಾಗಿ ಪಾಕಿಸ್ತಾನದ ಏರ್​​ ಡಿಫೆನ್ಸ್​ ರಾಡಾರ್​ಗಳು ಚಿಂದಿ ಚಿತ್ರಾನ್ನವಾಗಿದೆ.  ಸಿಯಾಕೋಟ್​ನಲ್ಲಿನ ಸೇನಾ ನೆಲೆಯೂ ನಾಶವಾಗಿದೆ. ಲಾಹೋರ್, ರಾವಲ್ಪಿಂಡಿ, ಕರಾಚಿಯಲ್ಲಿ ಡ್ರೋನ್ ದಾಳಿಯಾಗಿದ್ದು,  ಭಾರತದ ಆಪರೇಷನ್ ಸಿಂಧೂರ ಚಾಪ್ಟರ್ 2 ಪಾಕ್ ಹೆದರಿ ನಡುಗುವಂತಾಗಿದೆ.

ಇನ್ನು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾರೋದರಿಂದ ರಾಜ್ಯದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಗೃಹಸಚಿವ ಪರಮೇಶ್ವರ್  ನಿನ್ನೆಯೇ ಪೊಲೀಸ್ ಭದ್ರತೆ ಬಗ್ಗೆ ಮಾಹಿತಿ ನೀಡಿದ್ದೇನೆ. ಸ್ಪೆಷಲ್ ಫೋರ್ಸಸ್ ಬಳಕೆ ಮಾಡಿಕೊಳ್ತಿದ್ದೇವೆ. ರಾಯಚೂರು, ಕೈಗ, ಕೆ.ಆರ್.ಎಸ್ ಇಂಡಸ್ಟ್ರೀಸ್ ಫೋರ್ಸ್ ಬಳಕೆ ಮಾಡಿಕೊಳ್ತೇವೆ. ಅವರಿಗೆ ಕಮಾಂಡೋ ಟ್ರೈನಿಂಗ್ ಎಲ್ಲಾ ಆಗಿದೆ. ಹೆಚ್ಚುವರಿಯಾಗಿ ಅವರನ್ನ ಬಳಸಿಕೊಳ್ತೇವೆ. ಎಲ್ಲಾ ಇಲಾಖೆಯಲ್ಲೂ ಭದ್ರತೆಗೆ ಬೇಕಾದ ಸಂಖ್ಯೆ ಇದೆ. ಅಡೀಷನಲ್ ಆಗಿ ರೆಕ್ರೂಪ್‌ಮೆಂಟ್ ಮಾಡಿಕೊಂಡ್ರೆ ಒಂದು ವರ್ಷ ಟ್ರೈನಿಂಗ್ ಆಗಬೇಕು ಎಂದಿದ್ದಾರೆ.

ನಿನ್ನೆ ಮಾಕ್ ಡ್ರಿಲ್ ಯಶಸ್ವಿ ವಿಚಾರದ ಬಗ್ಗೆ ಮಾತನಾಡಿ ಕೇಂದ್ರದಿಂದ ಸೂಚನೆ ಬಂದಿತ್ತು. ಮೂರು ಜಿಲ್ಲೆಯಲ್ಲಿ ಮಾಕ್ ಡ್ರಿಲ್ ಮಾಡುವಂತೆ ಸೂಚನೆ ಬಂದಿತ್ತು. ಅಡೀಷನಲ್ ಆಗಿ ಮೈಸೂರು ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಎಲ್ಲಾ ಜಿಲ್ಲೆಗಳಿಗೂ ಸೀರಿಯಸ್ ಆಗಿ ತಿಳಿಸಿದ್ದೇವೆ‌. ಎಸ್ಪಿಗಳಿಗೆ ಭದ್ರತೆ ಬಗ್ಗೆ ಸೂಚಿಸಿದ್ದೇವೆ ಎಂದ್ರು. ಕೆಲ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ವಿಚಾರದ ಬಗ್ಗೆ ಮಾತನಾಡಿ ರಿಟೈರ್ಡ್ ಆದಾಗ ಅವರನ್ನ ರಿಕ್ರೂಪ್‌ಮೆಂಟ್ ಆಗಬೇಕು ಎಂದರು.

ನಾಳೆ ಕ್ಯಾಬಿನೆಟ್ ಸಭೆ ವಿಚಾರದ ಬಗ್ಗೆ ಮಾತನಾಡಿ ಇನ್ನೂ ಅಜೆಂಡಾ ಬಂದಿಲ್ಲ. ನಾಳೆ ಜಾತಿ ಗಣತಿ ಬಗ್ಗೆ ರೈಸ್ ಆಗಬಹುದು ಎಂದಿದ್ದಾರೆ.