ಬೆಂಗಳೂರು; ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ನವೀಕೃತ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭ ಇಂದು ನೆರವೇರಿತು. ಕುಸರಿ ಕೆತ್ತನೆಯ ಬೀಟೆಮರದ ಹೊಸ ಬಾಗಿಲನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ವಿಪಕ್ಷ ನಾಯಕ ಆರ್ ಅಶೋಕ್, ಪರಿಷತ್ ವಿಪಕ್ಷ ನಾಯಕ ಚೆಲುವಾದಿ ನಾರಾಯಣಸ್ವಾಮಿ, ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವ ಹೆಚ್ ಕೆ ಪಾಟೀಲ್, ಪರಮೇಶ್ವರ್, ರಾಮಲಿಂಗ ರೆಡ್ಡಿ ಸಲೀಂ ಅಹ್ಮದ್ ಈ ವೇಳೆ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸ್ಪೀಕರ್ ಯು ಟಿ ಖಾದರ್ ಮಹಾದ್ವಾರದ ಉದ್ಘಾಟನೆ ಹಾಗೂ ಸೋಲಾರ್ ಅಳವಡಿಕೆಗೆ ಚಾಲನೆ ನೀಡಲಾಗ್ತಿದೆ. ಜನರು ಬೆಂಗಳೂರಿಗೆ ಬಂದಾಗ ವಿಧಾನಸೌದದ ಫೋಟೊ ತೆಗೆದುಕೊಳ್ತಾರೆ. ಗ್ರಾಡ್ ಸ್ಟೆಪ್, ಬ್ಯಾಂಕ್ವೆಟ್ ಹಾಲ್ ಗಳಿಗೂ ನೂತನ ಬಾಗಿಲು ಅಳವಡಿಕೆ ಮಾಡಲಾಗುವುದು. ಈ ದ್ವಾರ ಹಾಗೂ ಕೆತ್ತನೆ ಅಂತರಾಷ್ಟ್ರೀಯ ಮನ್ನಣೆಗೆ ಸಿಗುತ್ತೆ. ಸೋಲಾರ್ ಸಿಸ್ಟಮ್ ಮೂಲಕ ವಿದ್ಯುತ್ ಪಡೆದ್ರೆ ಖರ್ಚು ಕಡಿಮೆ ಆಗುತ್ತೆ. ಜನರು ವಿಧಾನಸೌದ ನೋಡಲು ಆಸಕ್ತಿಯಿಂದ ಬರ್ತಾರೆ. ಮೈಸೂರು ಅರಮನೆ ರೀತಿಯಲ್ಲೇ ವಿಧಾನಸೌದ ಸೌಂದರ್ಯ ಹೆಚ್ಚಾಗಿಸಬೇಕು. ಈ ಬಗ್ಗೆ ಸಿಎಂ ಅವರಿಗೂ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಇನ್ನು 290 ಕಿಲೋವ್ಯಾಟ್ (KW) ಸಾಮರ್ಥ್ಯದ ಸೌರ ವಿದ್ಯುತ್ ಫಲಕಗಳನ್ನು ಕೂಡ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಸೋಲಾರ್ ಪ್ಯಾನಲ್ಸ್ ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಲೋಕೋಪಯೋಗಿ ಇಲಾಖೆ (ವಿದ್ಯುತ್ ವಿಭಾಗ)ಯು ಮೆ।। ಸೆಲ್ನೋ ಸಂಸ್ಥೆಯ ಸಹಭಾಗಿತ್ವದಲ್ಲಿ ಅಳವಡಿಸಿರುವ ಸೌರ ಫಲಕ ಇದಾಗಿದೆ. ವಿಧಾಸೌಧ ಮತ್ತು ವಿಕಾಸಸೌಧದಲ್ಲಿ ಹಸಿರು ಇಂಧನ ಬಳಕೆಯನ್ನು ಉತ್ತೇಜಿಸಲು ಸೌರ ಫಲಕವನ್ನು ಆಳವಡಿಸಲಾಗಿದೆ.











