ಮನೆ Latest News ಮೊದಲ ಹಂತದಲ್ಲಿ ಜ.17ಕ್ಕೆ ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯದ್ಯಕ್ಷ ಬಿ ವೈ...

ಮೊದಲ ಹಂತದಲ್ಲಿ ಜ.17ಕ್ಕೆ ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯದ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

0

ಚಿತ್ರದುರ್ಗ: ಮೊದಲ ಹಂತದಲ್ಲಿ ಜ.17ಕ್ಕೆ ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯಲಿದೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯದ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಬಳ್ಳಾರಿ ಟೂ ಬೆಂಗಳೂರು ಬಿಜೆಪಿ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯದ್ಯಕ್ಷ ಬಿ ವೈ ವಿಜಯೇಂದ್ರ ಜನಾರ್ಧನರೆಡ್ಡಿ, ಶ್ರೀರಾಮುಲು ಅಭಿಪ್ರಾಯ ಮಾತ್ರ ಅಲ್ಲ. ನಮ್ಮೆಲ್ಲರ ಅಭಿಪ್ರಾಯ ಸಹ ಪಾದಯಾತ್ರೆ ಪರವಾಗಿದೆ. ವರಿಷ್ಠರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಬಿಜೆಪಿ ವರಿಷ್ಠರ ಜತೆ ನಾನು ಈಗಾಗಲೇ ಮಾತನಾಡಿದ್ದೇನೆ. ಒಂದೆರಡು ದಿನದಲ್ಲಿ ಪಾದಯಾತ್ರೆ ಬಗ್ಗೆ ಮಾಹಿತಿ ಸಿಗಲಿದೆ. ರಾಜ್ಯದಲ್ಲಿ ಅರಾಜಕತೆ ವಿರುದ್ಧ ಹೋರಾಟಕ್ಕೆ ಪಕ್ಷ ನಿರ್ಧಾರ ಮಾಡಿದೆ ಎಂದಿದ್ದಾರೆ.

ಮೊದಲ ಹಂತದಲ್ಲಿ ಜ.17ಕ್ಕೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದ ಅವರು ಡಿಸಿಎಂ ಡಿಕೆಶಿ ಶಿಕಾರಿಪುರಕ್ಕೆ ಪಾದಯಾತ್ರೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಪಾದಯಾತ್ರೆ ಬೇಡ ಡಿಕೆಶಿ ಬಂದು ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಹೆಚ್ ಡಿಡಿ, ಹೆಚ್ ಡಿಕೆ ಮೋದಿ ಕೈ ಬಲ ಪಡಿಸಲು ಎನ್ ಡಿಎ ಸೇರಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ಮನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಿದ್ದಾರೆ.

ಗ್ರಾಮೀಣ ಅಭಿವೃದ್ಧಿಗಾಗಿ ಜಿ ರಾಮ್ ಜಿ ಯೋಜನೆ ಬಗ್ಗೆ ಮಾತನಾಡಿ ಸಿದ್ಧರಾಮಯ್ಯ, ರಾಹುಲ್ ಗಾಂಧಿಯಿಂದ ಅಪಪ್ರಚಾರ ನಡೆಯುತ್ತಿದೆ. ಬಿಜೆಪಿ ರಾಜ್ಯದಾದ್ಯಂತ ಜಾಗೃತಿ ಮೂಡಿಸುತ್ತದೆ ಎಂದ ಅವರು ಮೈಸೂರು ಹೆಲಿಪ್ಯಾಡ್ ನಲ್ಲಿ ರಾಹುಲ್, ಸಿದ್ದರಾಮಯ್ಯ, ಡಿಕೆಶಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಇರಲಿ ಪಾಪ, ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಅದು.ಒಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಕಾತುರವಿದೆ. ನನ್ನ ತಾಳ್ಮೆ ಕೆಣಕಬೇಡಿ ಎಂದು ಉಳಿದವರು ಸಿದ್ಧರಾಗಿದ್ದಾರೆ.ಈ ನಡುವೆ ರಾಜ್ಯದ ಜನ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ನಿನ್ನೆ ಜರ್ಮನಿ ಚಾನ್ಸಲರ್ ರಾಜ್ಯಕ್ಕೆ ಬಂದಿದ್ದರು. ಸಿಎಂ ಕುರ್ಚಿ ಉಳಿಸಿಕೊಳ್ಳಲು ಒಬ್ಬರು ಹೋಗಿದ್ದಾರೆ.ಸಿಎಂ ಕುರ್ಚಿ ಕಸಿಯಲು ಮತ್ತೊಬ್ಬರು ಹೋಗಿದ್ದಾರೆ.ಇಬ್ಬರೂ ರಾಹುಲ್ ಗಾಂಧಿ ಬಳಿ ಹೋಗಿ ನಿಂತಿದ್ದಾರೆ. ರಾಜ್ಯದ ಪರಿಸ್ಥಿತಿ ಏನಾಗಬೇಕೆಂದು ಜನ ಗಮನಿಸುತ್ತಿದ್ದಾರೆ.ಬರುವ ದಿನಗಳಲ್ಲಿ ಜನ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.