ಬೆಂಗಳೂರು; ನಮ್ಮ ಕರ್ನಾಟಕದಲ್ಲಿ ನಮ್ಮ ಪೊಲೀಸರು ಬಟ್ಟೆ ಬಿಚ್ಚು ಸಂಪ್ರದಾಯ ಯಾವತ್ತು ಇಟ್ಟುಕೊಂಡಿಲ್ಲ ಎಂದು ವಿಧಾನಸೌಧದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಆರೋಪ ರಾಜಕೀಯ ಆರೋಪ. ನಾನು ಅಲ್ಲೇ ಇದ್ದೆ. ಆ ಮಹಿಳೆ ಪೊಲೀಸರಿಗೆ ಕಚ್ಚಿದ್ದಾಳೆ. 10 ಜನ ಕಾನ್ಸ್ ಸ್ಟೇಬಲ್ ಗಳ ಮೇಲೆ ಹಲ್ಲೆ ಮಾಡಿದ್ದಾಳೆ.. ಬಿಜೆಪಿ ಆಯಮ್ಮ ಮಾಡಿರೋದು ತಪ್ಪಿದೆ. ಆ ಲೇಡಿಯೇ ಬಟ್ಟೆ ಬಿಚ್ಚು ಕೊಂಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ನಮ್ಮ ಪೊಲೀಸರು ಬಟ್ಟೆ ಬಿಚ್ಚು ಸಂಪ್ರದಾಯ ಯಾವತ್ತು ಇಟ್ಟುಕೊಂಡಿಲ್ಲ. ಆದರೆ ನಾನು ಅ ಘಟನೆ ಡಿಫೆಂಡ್ ಮಾಡಿಕೊಳ್ಳಲ್ಲ. ಆದರೆ ಆಕೆ ಮಾಡಿದ್ದು ತಪ್ಪು. ಆಕೆ ಮೇಲೆ ಹಲ್ಲೆ ಆಗಿರೋದು ನಿಜ. ಹಲ್ಲೆ ಆಗಿರೋ ವಿಚಾರಕ್ಕೆ ಕ್ರಮ ಆಗಬೇಕು. ದೂರು ದಾಖಲಾಗಿದೆ ಕಾನೂನು ಪ್ರಕಾರ ಕ್ರಮ ಆಗುತ್ತದೆ.ನಾನೇ ಉಸ್ತುವಾರಿ ಸಚಿವ ಇದ್ದೇವೆ. ಹಲ್ಲೆ ವಿಚಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಡ್ತೀನಿ ಎಂದಿದ್ದಾರೆ.
ಬಳ್ಳಾರಿ ಗಲಾಟೆ ವಿಚಾರ ಸರ್ಕಾರಕ್ಕೆ ಮುಜುಗರ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಳ್ಳಾರಿ ಘಟನೆಗೆ ನನ್ನ ಬೆಂಬಲ ಇಲ್ಲ. ಆ ರೀತಿ ಆಗಬಾರದು. ಈಗಾಗಲೇ ಸಿಎಂ,ಸರ್ಕಾರ ಕ್ರಮ ತೆಗೆದುಕೊಂಡಿದ್ದಾರೆ. ಇನ್ನು ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯದಲ್ಲಿ ಬರ್ತಿವೆ. ಕಾನೂನು ಕ್ರಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.ಮೃತನ ಕುಟುಂಬಕ್ಕೆ ಸಚಿವ ಜಮೀರ್ 25 ಲಕ್ಷ ಕ್ಯಾಶ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ ಐಟಿ ಇಲಾಖೆಗೆ ಅ ವಿಷಯ ಬರೊಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿ ಅದು ಐಟಿಗೆ ಬರಬಹುದು. ಆದರೆ ಜಮೀರ್ ಕ್ಯಾಶ್ ಕೊಟ್ಟಿರೋದು ನನಗೆ ಗೊತ್ತಿಲ್ಲ. ನಾನು ನೋಡಿಲ್ಲ ಎಂದು ಹೇಳಿದ್ದಾರೆ.











