ಮನೆ Latest News ರಾಜೇಂದ್ರ ರಾಜಣ್ಣ ಕುಟುಂಬಕ್ಕೆ ತಿಳಿ ಹೇಳುವಷ್ಟು ದೊಡ್ಡವನು ನಾನಲ್ಲ; ಶಾಸಕ ಕುಣಿಗಲ್ ರಂಗನಾಥ್ ಹೇಳಿಕೆ

ರಾಜೇಂದ್ರ ರಾಜಣ್ಣ ಕುಟುಂಬಕ್ಕೆ ತಿಳಿ ಹೇಳುವಷ್ಟು ದೊಡ್ಡವನು ನಾನಲ್ಲ; ಶಾಸಕ ಕುಣಿಗಲ್ ರಂಗನಾಥ್ ಹೇಳಿಕೆ

0

ಬೆಂಗಳೂರು; ರಾಜೇಂದ್ರ ರಾಜಣ್ಣ ಕುಟುಂಬಕ್ಕೆ ತಿಳಿ ಹೇಳುವಷ್ಟು ದೊಡ್ಡವನು ನಾನಲ್ಲ ಎಂದು ಶಾಸಕ ಕುಣಿಗಲ್ ರಂಗನಾಥ್ ಹೇಳಿದ್ದಾರೆ.

ನಾನು ಕುಣಿಗಲ್ ನ ನೀರಿನ ಸಮಸ್ಯೆಗಳ ಪರಿಹರಿಸಲು ಹೋರಾಟ ಮಾಡ್ತಿದ್ದೇನೆ.ಕುಣಿಗಲ್ ತಾಲೂಕಿನ ೯೦% ನೀರೇ ಹರಿದಿಲ್ಲ. ಸಣ್ಣ ಮಟ್ಟದಿಂದ ಹಿಡಿದು ವಿಧಾನಸೌಧದ ತನಕ ತೆಗೆದುಕೊಂಡು ಹೋಗಿ ರೈತರಿಗಾಗಿ ಕೆಲಸ ಮಾಡ್ತಿದ್ದೇನೆ.ಜಿಲ್ಲೆಯ ರೈತರ ನನ್ನ ತಾಲೂಕಿನ ರೈತರ ಹೋರಾಟಕ್ಕೆ ನಾನು ಬದ್ಧ. ರಾಜೇಂದ್ರ ರಾಜಣ್ಣ ಕುಟುಂಬಕ್ಕೆ ತಿಳಿಹೇಳುವಷ್ಡು ದೊಡ್ಡವನು ನಾನಲ್ಲ.ರಾಜಣ್ಣ ಕೂಡ ಹಿರಿಯರು, ಅವರು ನನ್ನ ಸಚಿವರು.ನನ್ನ ತಾಲೂಕಿನ ರೈತರಿಗೆ ಸಾಲ ಹೆಚ್ಚು ಕೊಡಿಸಬೇಕು ಎಂದು ಅಪೇಕ್ಷೆ ಪಡುವುದು ತಪ್ಪಾ?.ನಾನು ನಿಷ್ಟೆಯಿಂದ ಪಕ್ಷಕ್ಕೆ ಕ್ಷೇತ್ರಕ್ಕೆ ಕೆಲಸ ಮಾಡ್ತಿದ್ದೇನೆ. ಮಾಧ್ಯಮದ ಮೂಲಕ ಹೇಳಿಕೆ ನೀಡುವುದು ಎಷ್ಟು ಸರಿ?.ಡಿ ಕೆ ಶಿವಕುಮಾರ್ ಬಲವಾಗಿ ಪಕ್ಷವನ್ನು ನಡೆಸುತ್ತಿದ್ದಾರೆ.ಕಾರ್ಯಕರ್ತರಲ್ಲಿ ನಿರೀಕ್ಷೆ ಇದೆ ಅದನ್ನು ಅಸತ್ಯ ಮಾಡಬಾರದು ಎಂದಿದ್ದಾರೆ.

 

ಜನಸಾಮಾನ್ಯರ ಕೆಲಸ ನಾವು ಮಾಡಬೇಕು. ರಾಜೇಂದ್ರ ಮಂತ್ರಿ ಮಗ.  ನಾನೊಬ್ಬ ಸಾಮಾನ್ಯ ವ್ಯಕ್ತಿ.ನಾನು ರಾಜೇಂದ್ರಗೆ ಬೆದರಿಕೆ ಹಾಕೋದಕ್ಕೆ ಆಗುತ್ತಾ? ಜಾಸ್ತಿ ಚರ್ಚೆ ಮಾಡುವುದು ಸರಿಯಲ್ಲ.ಕಾಂಗ್ರೆಸ್ ಸರ್ಕಾರ ಇದ್ದಾಗ ಡಿಕೆಶಿ ಮಾರ್ಗದರ್ಶನದಲ್ಲಿ ಜನರ ಪರಿಹಾರಕ್ಕೆ ಚಿಂತನೆ ಮಾಡೋಣ. ಶಿರಸಾ ವಹಿಸಿ ಕೆಲಸ ಮಾಡೋಣ.ಸಹಕಾರ ಇಲಾಖೆ ಸೊಸೈಟಿಗಳು ಕುಣಿಗಲ್ ನಲ್ಲಿ ಇವೆ.ಕಾಂಗ್ರೆಸ್ ಬೆಂಬಲಿತ ರೈತರನ್ನು ನಾನು ಸಾಕಷ್ಟು ಮಂದಿ ಸೇರಿಸಿದ್ದೇನೆ.ಅವರ ಪರವಾಗಿ ಹೆಚ್ಚು ಸಾಲ ಕೇಳುವುದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

ಹನಿಟ್ರ್ಯಾಪ್ ಎನ್ನುವುದೇ ಹಾದಿ ತಪ್ತಾ ಇದೆಯಾ? ನಾವೇ ಹಾದಿ ತಪ್ತಾ ಇದೆವಾ?. ಜನರಿಗೆ ಬೇಸರ ಮಾಡಬಾರದು. ಕಾರ್ಯಕರ್ತರು ಹಗಲು ರಾತ್ರಿ ಕಷ್ಟ ಪಟ್ಟಿದ್ದಾರೆ ಅವರ ತ್ಯಾಗಕ್ಕೆ ಮೋಸ ಮಾಡಬಾರದು ನಾವು. ಪಕ್ಷದ ಚೌಕಟ್ಟಲ್ಲಿ ಎಲ್ಲವೂ ಚರ್ಚೆ ಆಗಬೇಕಿತ್ತು.ಪಾರ್ಟಿ ಇದ್ರೇನೆ ಸರ್ಕಾರ ಪಾರ್ಟಿಗೆ ಮುಜುಗರ ಆಗಬಾರದಿತ್ತು.ಯಾವ ವೈಮನಸ್ಸು ಭಿನ್ನಾಭಿಪ್ರಾಯ ಇಲ್ಲ.ಹಾಸನದಲ್ಲಿ ಒಕ್ಕಲಿಗ ಹೆಣ್ಣು ಮಕ್ಕಳಿಗೆ ಅನ್ಯಾಯ ಆದಾಗ ನಾವು ಇವರನ್ನು ಬೆಂಬಲಿಸಬೇಕಾ?.ಆರ್ ಆರ್ ನಗರ ಮುನಿರತ್ನರನ್ನು ಆರ್ ಅಶೋಕ್ ಸಮರ್ಥಿಸಿಕೊಳ್ಳಬೇಕಾ? ಎಂದಿದ್ದಾರೆ.

ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತಾಡುವಷ್ಟು ದೊಡ್ಡವನು ನಾನಲ್ಲ. ಸಿದ್ದರಾಮಯ್ಯ ಉತ್ತಮವಾಗಿ ಸರ್ಕಾರ ಮಾಡ್ತಿದ್ದಾರೆ. ಡಿಕೆಶಿ ಅವರು ಪಕ್ಷವನ್ನ ಬಲಗೊಳಿಸಲು ಕೆಲಸ ಮಾಡ್ತಿದ್ದಾರೆ. ಡಿಕೆಶಿ ಸಂಘಟನೆ ಬಗ್ಗೆ ಜನ ಮಾತಾಡ್ತಿದ್ದಾರೆ.ಮುಂದಿನ ದಿನಗಳಲ್ಲಿ ಡಿಕೆಶಿ ಅವರಿಗೂ ಒಳ್ಳೆಯದಾಗುತ್ತದೆ ಎಂದು ಕುಣಿಗಲ್ ರಂಗನಾಥ್ ಹೇಳಿದ್ದಾರೆ.

18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸು ಪಡೆಯಬೇಕು; ವಿಧಾನಸಭೆ ವಿಪಕ್ಷ ನಾಯಕ ಆರ್  ಆಶೋಕ್ ಆಗ್ರಹ

ಬೆಂಗಳೂರು; 18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸು ಪಡೆಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್  ಆಶೋಕ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ನಮ್ಮ ಶಾಸಕರನ್ನ ಸಸ್ಪೆಂಡ್ ಮಾಡಿದ್ದಾರೆ. ಸಸ್ಪೆಂಡ್ ಆದೇಶ ವಾಪಸು ಪಡೆಯಬೇಕು. ಸ್ಪೀಕರ್ ಜೊತೆ ಮಾತನಾಡಿದ್ದೇನೆ. ಹಬ್ಬ ಮುಗಿಯಲಿ ಮಾತನಾಡೋಣ ಅಂದಿದ್ದಾರೆ. ನಮ್ಮ ಶಾಸಕರ ಮೇಲೆ ನಮಗೆ ಗೌರವವಿದೆ ಎಂದಿದ್ದಾರೆ.

ಇನ್ನು ಎಂದಿನಂತೆ ರಾಜ್ಯಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು ಇದೊಂದು ಕುಲಗೆಟ್ಟ ಸರ್ಕಾರ.ನೀವು ಗ್ಯಾರೆಂಟಿಗಳನ್ನ ಕೊಡಕ್ಕೆ ನಮ್ಮ ಆಕ್ಷೇಪ ಇಲ್ಲ. ನಿಮ್ಮ ಛೇಲಾಗಳಿಗೆ ಕೆಲಸ ಕೊಟ್ಟಿದ್ದೀರಿ. 150 ಕೋಟಿ ಹಣ ಖರ್ಚು ಆಗ್ತಿದೆ.ಇದು ಯಾರ ದುಡ್ಡು.. ಇದಕ್ಕೆ ಏಜೆಂಟ್ ಯಾಕೆ ಬೇಕು. ಡಿಬಿಟಿ ಮೂಲಕ ಹಣ ಹೋಗ್ತಿದೆ. ಈ ಏಜೆಂಟ್ ಗಳ ಕೆಲಸವೇನು..? ಎಂದು ಪ್ರಶ್ನಿಸಿದ್ದಾರೆ. ಕೆಪಿಸಿಸಿಯಲ್ಲಿ ಆಗ್ತಿರುವ ಭ್ರಷ್ಟಾಚಾರವನ್ನ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.ವಿಧಾನ ಸಭೆಯಲ್ಲಿಯೇ ಒಪ್ಪಿಕೊಂಡಿದ್ದಾರೆ

 

ಕೆಪಿಸಿಸಿ ಸದಸ್ಯರ ಸಂಖ್ಯೆ ಕಡಿಮೆ ಆಗಿದ್ದು ನಮ್ಮ ಹೋರಾಟದಿಂದ.ಈ ವಿಚಾರವನ್ನ ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ನಿಲುವು ಬದಲಿಸುವಲ್ಲಿ ನಮ್ಮ ಪಾತ್ರ ಹೆಚ್ಚಿದೆ.ಈ ಹೋರಾಟದಲ್ಲಿ ನಾವು ಸಕ್ಸಸ್ ಆಗಿದ್ದೇವೆ ಎಂದ ಅವರು ಫೋನ್ ಕದ್ದಾಲಿಕೆ ಮಾಡ್ತಿರುವುದು ನೂರಕ್ಕೆ ನೂರರಷ್ಟು ನಿಜ. ಇದರಲ್ಲಿ ಯಾವುದೇ ಅನುಮಾನ ಬೇಡ.ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಲಿಕೆ ಆಗ್ತಿದೆ.ನನ್ನ ಮತ್ತು ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗ್ತಿದೆ.ರಾಜೇಂದ್ರ ಹಾಗೂ ರಾಜಣ್ಣ ಅವರ ಫೋನ್ ಕದ್ದಾಲಿಕೆ ಆಗಿದೆ.ಹಲವು ಶಾಸಕರ ಫೋನ್ ಕದ್ದಾಲಿಕೆ ಆಗಿದೆ. ಆಡಳಿತ ಪಕ್ಷದವರದ್ದು ಆಗಿದೆ.ವಿಪಕ್ಷದವರದ್ದು ಆಗಿದೆ.. ರಾಜಣ್ಣ ರಾಜೇಂದ್ರ ಟ್ರ್ಯಾಕ್‌ ಮಾಡೋಕೆ ಕದ್ದಾಲಿಕೆ ಮಾಡಿಸಿರುತ್ತಾರೆ..ನಾನು, ಕುಮಾರಸ್ವಾಮಿ ಅವರು ಮೊದಲಿಂದಲೂ ಆರೋಪ ಮಾಡ್ತಿದ್ವಿ .ಎರಡು ವರ್ಷಗಳಿಂದ ನಮ್ಮ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.