ಮನೆ Latest News ನನ್ನನ್ನೂ ಪರಿಗಣಿಸಿದ್ರೆ ಜವಾಬ್ದಾರಿ ನಿಭಾಯಿಸುತ್ತೇನೆ; ಬಿಜೆಪಿ ರಾಜ್ಯಾಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಕುಮಾರ ಬಂಗಾರಪ್ಪ

ನನ್ನನ್ನೂ ಪರಿಗಣಿಸಿದ್ರೆ ಜವಾಬ್ದಾರಿ ನಿಭಾಯಿಸುತ್ತೇನೆ; ಬಿಜೆಪಿ ರಾಜ್ಯಾಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಕುಮಾರ ಬಂಗಾರಪ್ಪ

0

ಬೆಂಗಳೂರು; ಮಾಜಿ ಸಚಿವ ಕುಮಾರ ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನನ್ನನ್ನೂ ಪರಿಗಣಿಸಿದ್ರೆ ಜವಾಬ್ದಾರಿ ನಿಭಾಯಿಸುತ್ತೇನೆ .ಇನ್ನೂ 3 ವರ್ಷದ ಅವಧಿಯಲ್ಲಿ ಮತ್ತಷ್ಟು ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಜನಾಂದೊಲನ ಕಾರ್ಯಕ್ರಮದಲ್ಲಿ ಭಾಗಿ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ, ಡಿಕೆಶಿ ವಿಚಾರ ವೇದಿಕೆ ಮೇಲೆ ಮಾತಾಡಿದ್ರೆ ಏನು ಪ್ರಯೋಜನ? ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಚರ್ಚೆ ಯಾಕೆ? ಅವರ ಬದಲಾವಣೆಯಿಂದ ನಮಗೇನು? ನಾವು ನಿಮ್ಮನ್ನ ಬದಲಿಸಬೇಕು ಅಂತಿದ್ದೇವೆ ಎಂದು ವಿಜಯೇಂದ್ರಗೆ ಕುಮಾರ ಬಂಗಾರಪ್ಪ ಕೌಂಟರ್ ಕೊಟ್ಟಿದ್ದಾರೆ.

ಬಾಂಬ್ ಬ್ಲಾಸ್ಟ್ ಗಳು ದೆಹಲಿ ಸೇರಿದಂತೆ ಎಲ್ಲ ಕಡೆ ನಡೆದಿದೆ. ಬೆಂಗಳೂರಿನಲ್ಲೂ ನಡೆದಿದೆ.ಜಪಾನ್, ನ್ಯೂಜಿಲ್ಯಾಂಡ್, ಭೂತಾನ್ ನಂತಹ ದೇಶಗಳಲ್ಲೂ ನಡೆದಿದೆ.ಶ್ರೀಲಂಕಾವನ್ನ ಫ್ರೆಂಡ್ಲಿಯಾಗಿ ಇಟ್ಟಿಕೊಂಡಿದ್ದೇವೆ. ಕಾನೂನುಬಾಹಿರವಾಗಿ ಇರುವುದರ ವಿರುದ್ಧ ಹೋರಾಟ. ವೋಟಿಂಗಿಗೋಸ್ಕರ ಕಾಂಗ್ರೆಸ್ ಇವರಿಗೆ ಇಚ್ಚೆಯನುಸಾರು‌ ದಾಖಲೆ ಕೊಡುವ ಕೆಲಸ ಮಾಡುತ್ತಿದೆ.ಕೆನಡಾ ರಾಜಕೀಯವಾಗಿ ಹೇಗೆ ಆಗ್ತಿದೆ ಅಂತ ನೋಡಿದ್ದೀವಿ. ರಾಜಕೀಯ ಅನ್ನೋದು ಚಲಾವಣೆಯಲ್ಲಿರುವ ವಿಚಾರದ ಬಗ್ಗೆ ಮಾತನಾಡಿದ ಅವರು 370, ತ್ರಿಬಲ್‌ ತಲಾಖ್ ವಿಚಾರ ಉತ್ತಮ ಬೆಳವಣಿಗೆ. ರಾಷ್ಟ್ರಕ್ಕೆ ಸುಭದ್ರವಾದ ಕಾನೂನುಗಳು ಅಗತ್ಯ ಎಂದ್ರು.

ನಾವು ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿದಿಲ್ಲ. ರಾಜ್ಯಾಧ್ಯಕ್ಷ ಚುನಾವಣೆಗೆ ಹಿಂದೆ ಸರಿದಿದ್ದೀವಿ ಅಂತ ಮಾಧ್ಯಮಗಳಲ್ಲಿ ಚರ್ಚೆ ಆಗಿದೆ.ಕೇಂದ್ರದ ನಾಯಕರಿಗೆ‌ ವರದಿ ಸಲ್ಲಿಕೆ ಮಾಡಿದ್ದೀವಿ. ರಾಜ್ಯಾಧ್ಯಕ್ಷರ ಚುನಾವಣೆಗೆ ನಮ್ಮ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಬರುವ ದಿನಾಂಕವೇ ನಿರ್ಧಾರ ಆಗಿಲ್ಲ. ಕೇಂದ್ರದ ವರಿಷ್ಠರು ಯಾವುದೇ ನಿರ್ಧಾರದ ಬಗ್ಗೆ ಚರ್ಚೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಮಾಡಬೇಕು ಅಂತ ನಾವೆಲ್ಲ ಚರ್ಚೆ ಮಾಡ್ತೀವಿ.ನಾವು ನಮ್ಮ‌ ಹೇಳಿಕೆಗೆ ಬದ್ದರಿದ್ದೇವೆ. ನೋಟಿಸ್ ಅನ್ನೋದು ರಾಜಕೀಯ ಅಲ್ಲ.ಅವರಿಗೆ ಸೂಕ್ತವಾದ ಉತ್ತರ ಕೊಟ್ಟಿದ್ದಾರೆ. ಅವರ ಹಿಂದೆ ನಾವೆಲ್ಲ ಇದ್ದೇವೆ ಎಂದ್ರು.

ನಾನು ಯಡಿಯೂರಪ್ಪ ಅವರನ್ನ ವಿರೋಧ ಮಾಡ್ತಿಲ್ಲ.ಶಿವಮೊಗ್ಗದಲ್ಲಿ ಪರಂಪರೆ ಇಲ್ಲ. ಈಗಿನ ರಾಜಕೀಯ ದ್ವೇಷ ಈಗಿನ ರಾಜ್ಯಾಧ್ಯಕ್ಷ ಮಾಡಿದ ರೀತಿ ನಾವು ಮಾಡೊಲ್ಲ. ಕೆಜೆಪಿಯಲ್ಲೇ ಒಂದು ಗುಂಪು ಮಾಡಿದ್ದಾರೆ.ಸಿದ್ದೇಶ್ವರ್ ಯಾಕೆ ಹೊರ ಬಂದ್ರು.ಹೈದರಾಬಾದ್ ಕರ್ನಾಟಕ ನಾವು ಯಾಕೆ ಕಳೆದುಕೊಂಡಿದ್ದೀವಿ?. ಯಡಿಯೂರಪ್ಪ ಅಪ್ಪವರಿಗೆ ವೈಯಕ್ತಿಕವಾಗಿ ಗೌರವ ಕೊಡ್ತಾ ಇದ್ದೀವಿ. ಅವರಿಗೆ ಅಗೌರವ ತರುವ ವಿಚಾರ ಇಲ್ಲ.ಯಡಿಯೂರಪ್ಪ, ದೇವೇಗೌಡರು, ಸಿದ್ದರಾಮಯ್ಯನವರ ಬಗ್ಗೆ ನಾವು ಅಗೌರವ ತೋರೊಲ್ಲ.ಅವರ ಆಡಳಿತ ತಪ್ಪಲ್ವ, ಇದನ್ನ ವಿರೋಧ ಮಾಡ್ತಿದ್ದೇವೆ ಎಂದು ತಿಳಿಸಿದ್ರು.

ಅರವಿಂದ ಲಿಂಬಾವಳಿ ನಮ್ಮ ಜೊತೆಗಿದ್ದಾರೆ. ಎಲ್ಲರು ಒಟ್ಟಿಗೆ ಇದ್ದೇವೆ. ಲಿಂಬಾವಳಿ ಅವರ ಮಾರ್ಗದರ್ಶನ ನಮಗೆ ಸಿಕ್ಕಿದೆ. ಅಕ್ರಮ ಬಾಂಗ್ಲಾ ನುಸುಳುಕೋರರು ಲಿಂಬಾವಳಿ ಕ್ಷೇತ್ರದಲ್ಲೇ ಹೆಚ್ಚಾಗಿದೆ.ಅವರೇ ಹೋರಾಟ ಮಾಡೋಣ ಅಂತ ಮಾರ್ಗದರ್ಶನ ನೀಡಿದ್ದಾರೆ.ಸಮಸ್ಯೆಗಳೆಲ್ಲ ವರಿಷ್ಠರಿಗೆ ಮನವರಿಕೆ ಮಾಡಿದ್ದೇವೆ. ಮತ್ತೆ ಅವರನ್ನ ಭೇಟಿ ಮಾಡೊಲ್ಲ. ಸಂದರ್ಭ ಬಂದರೆ ಹೋಗಿ ಭೇಟಿ ಮಾಡ್ತೀವಿ. ಈಗಿನ ಅಧ್ಯಕ್ಷರು ಬದಲಾಗುತ್ತಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.