ಬೆಂಗಳೂರು: ಕರ್ನಾಟಕ ಭವನ ಉದ್ಘಾಟನೆ ನಮ್ಮನ ಕರೆದರೆ ಹೋಗ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿ ಅವರು ಕರ್ನಾಟಕ ಭವನಕ್ಕೆ ನಾನೇ ಡಿಸಿಎಂ ಇದ್ದಾಗ ಅಡಿಗಲ್ಲು ಹಾಕಿದ್ದೆ. ಅವರು ಕರೆದರೆ ಹೋಗ್ತೇನೆ ಕರಿಯದೇ ಇದ್ರೆ ಹೇಗೆ ಹೋಗೊದು ಎಂದು ಪ್ರಶ್ನಿಸಿದ್ದಾರೆ.ನನ್ನ ಲೀಡರ್ ಶಿಪ್ ನಲ್ಲಿ ದೆಹಲಿ ಹೋಗ್ತಾರೆ ಎನ್ನುತ್ತಿದ್ದಾರೆ. ಹೈಕಮಾಂಡ್ ಮೀಟ್ ಮಾಡ್ತಾರೆ ಎಂದೆಲ್ಲಾ ನೀವು ಹಾಕ್ತದ್ದೀರಾ.ಇದು ನನಗೆ ಗೊತ್ತಿಲ್ಲ ಯಾರು ಪ್ಲಾಂಟ್ ಮಾಡ್ತಿದ್ದಾರೊ ಗೊತ್ತಿಲ್ಲ. ನಾನು ದೆಹಲಿಗೆ ಯಾವ ಡೆಲಿಗೇಷನ್ ತೆಗೆದುಕೊಂಡ ಹೋಗ್ತಿಲ್ಲ. ಅಂತಹ ರಾಜಕೀಯ ಬೆಳವಣಿಗೆ ಯಾವುದು ಇಲ್ಲ.ನಾನು ಇಲಾಖೆ ಕೆಲಸಕ್ಕೆ ಹೋಗ್ತೇನೆ.ಹೋಗಲೇ ಬಾರದು ಎಂದೇನು ಇಲ್ಲ, ಬ್ಯಾನ್ ಆರ್ಡರ್ ಏನಿಲ್ಲ .ಅದರ ಅವಶ್ಯಕತೆ ಇಲ್ಲ ಅವಶ್ಯಕತೆ ಇದ್ದಾಗ ಹೋಗ್ತೇವೆ ಎಂದಿದ್ದಾರೆ.
ಮೈಕ್ರೋ ಫೈನಾನ್ಸ್ ಬಿಲ್ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಪರಮೇಶ್ವರ್ ಈ ಹಿಂದೆ ಶಿಕ್ಷೆ ಮೂರು ವರ್ಷವಿತ್ತು ಅದನ್ನ 10 ವರ್ಷ ಮಾಡಿದ್ದೇವೆ.ದಂಡವನ್ನ 5 ಲಕ್ಷಕ್ಕೆ ಹೆಚ್ಚಿಸಿದ್ದೇವೆ.ಕಾನೂನಿನ ಬಿಸಿ ತಟ್ಟಬೇಕೆಂದು ಹೀಗೆ ಮಾಡಿದ್ದೇವೆ.ಬಿಲ್ ರಾಜ್ಯಪಾಲರಿಗೆ ಕಳುಹಿಸಿದ್ದೇವೆ.ಅವರು ಇಲ್ಲಿಲ್ಲ ಇವತ್ತು ಬರ್ತಾರೆ ನೋಡೋಣ.ನೋಡಿ ಅಂಕಿತವನ್ನ ರಾಜ್ಯಪಾಲರು ಹಾಕಬಹುದು.ಎಂಎಫ್ ಐ ಗಳು ನ್ಯಾಯಾಲಯಕ್ಕೆಹೋಗಬಹುದು ಎಂದು ಗಮನಿಸಿದ್ದೆವು.ಇದೇ ಕಾರಣಕ್ಕೆ ಎರಡು ದಿನ ಲೇಟ್ ಆಯಿತು.ಕಾನೂನಿನ ತೊಡಕುಗಳನ್ನ ಸರಿಪಡಿಸಿದ್ದೇವೆ.ಕಾನೂನಿನ ತೊಂದರೆ ಬರೋ ಹಾಗಿಲ್ಲ ಎಂದು ಕೊಂಡಿದ್ದೇವೆ ಎಂದಿದ್ದಾರೆ.
ದನ ಕದ್ದವರನ್ನ ನಾನೇ ಗುಂಡಿಕ್ಕಿ ಕೊಲ್ತೇನೆ ಎಂದ ಸಚಿವ ಮಂಕಾಳ್ ವೈದ್ಯ ಹೇಳಿಕೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಗೊತ್ತಾಗಿಲ್ಲ,ಅದು ಅವರ ವೈಯಕ್ತಿಕವಾಗಿ ಹೇಳಿರ್ತಾರೆ.ಸಂದರ್ಭದಲ್ಲಿ ಹೇಳಿರ್ತಾರೆ ಎಂದ ಗೃಹಸಚಿವರು ಕ್ಯೂ ಆರ್ ಕೋಡ್ ಮೂಲಕ ಮತಾಂತರ ಮಾಡ್ತಿರೋ ಬಗ್ಗೆ ಗೊತ್ತಿಲ್ಲ ನನಗೆ ,ಕಂಪ್ಲೇಂಟ್ ಬಂದರೆ ಕಾನೂನು ಚೌಕಟ್ಟಲ್ಲಿ ಕ್ರಮ ಕೈಗೊಳ್ಳುತ್ತೇವೆ.ಹಿಂದಿನ ಸರ್ಕಾರ ತಂದಿದ್ದ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಕ್ರಮ ವಾಗ್ತಿದೆ ಅಷ್ಟೇ ಎಂದಿದ್ದಾರೆ.
ಎಸ್ಎಸ್ ಎಲ್ ಸಿ ಪರೀಕ್ಷಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಕುರಿತು ನಾವು ಸುಧೀರ್ಘ ವಾಗಿ ಚರ್ಚೆ ಮಾಡ್ತೇವೆ.ಇನ್ನು ಒಂದು ತಿಂಗಳಿದೆ ಒಂದು ತಿಂಗಳು ದೊಡ್ಡ ಸಮಯವೇ .ನೋಡೋಣ ಚರ್ಚೆ ಮಾಡ್ತೇವೆ ಎಂದಿದ್ದಾರೆ. ಹಾಲು ಒಕ್ಕೂಟ ಚುನಾವಣೆ ವಿಚಾರವಾಗಿ ಗುಬ್ಬು ಶ್ರೀನಿವಾಸ್ ಅಸಮಾಧಾನ ವಿಚಾರದ ಬಗ್ಗೆ ಇದೇ ವೇಳೆ ರಿಯ್ಯಾಕ್ಟ್ ಮಾಡಿದ ಸಚಿವರು ನಾವು ಪ್ರಾಮಾಣಿಕವಾಗಿ ಕೆಲಸ ಮಾಡೋರೆ.ನಮಗೂ ಸಮಸ್ಯೆಗಳು ಜಾಸ್ತಿ.ಪದೇ ಪದೇ ಏನಿಲ್ಲ ಈ ಚುನಾವಣೆಯಲ್ಲಿ ಅಷ್ಟೇ .ನಾವೆಲ್ಲ ಸ್ನೇಹಿತರೇ,ಒಂದೇ ಪಕ್ಷದಲ್ಲಿದ್ದೇವೆ. ಇವೆಲ್ಲ ಬರ್ತಾವೇ ರಾಜಕೀಯದಲ್ಲಿ.ನಾನು ಮಾತಾಡ್ತೇನೆ ಮಾತು ಬಿಡದಷ್ಟು ರಾಜಕೀಯ ಇಲ್ಲ ಎಂದಿದ್ದಾರೆ.











