ಮನೆ Latest News ಯೋಗೇಶ್ವರ್ ಪಕ್ಷಕ್ಕೆ ಬಂದರೆ ನಮ್ಮ ಸ್ವಾಗತ; ಬೆಂಗಳೂರಿನಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ

ಯೋಗೇಶ್ವರ್ ಪಕ್ಷಕ್ಕೆ ಬಂದರೆ ನಮ್ಮ ಸ್ವಾಗತ; ಬೆಂಗಳೂರಿನಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ

0

ಬೆಂಗಳೂರು:  ಎಂಎಲ್ ಸಿ ಸ್ಥಾನಕ್ಕೆ ಸಿ ಪಿ ಯೋಗೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಅಂತಾ ಹೇಳಲಾಗಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ ಯೋಗೇಶ್ವರ್ ಪಕ್ಷಕ್ಕೆ ಬಂದರೆ ನಮ್ಮ ಸ್ವಾಗತ ಇದೆ.ಯಾರೇ ಆದರೂ ಪಕ್ಷಕ್ಕೆ ಬರಬಹುದು.ಪಕ್ಷದ ಬೆಳವಣಿಗೆ ಕಾರಣಕ್ಕೆ ಯಾವುದೇ ತ್ಯಾಗಕ್ಕೆ ಸಿದ್ಧವಾಗಿದ್ದೇವೆ.ಕುಮಾರಸ್ವಾಮಿ ಯಾವಾಗಲೂ ಹಿಟ್ ರನ್ ಮಾಡೋದ್ರಲ್ಲಿ ನಿಸ್ಸೀಮರು.ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಲಿ ಅಂತಾ ಅವರೇ ಹೇಳ್ತಾರೆ.ಸುಮ್ಮನೆ ಉಡಾಫೆ ಮಾತುಗಳನ್ನ ನಿಲ್ಲಿಸಬೇಕು.ಇದು ರಾಜಕೀಯ ಚದುರಂಗದಾಟ.ಅವರು ಸಿಎಂ, ಡಿಸಿಎಂ ವರ್ಚಸ್ಸನ್ನ ಹಾಳು ಮಾಡುತ್ತಿಲ್ಲವಾ ? ಎಂದಿದ್ದಾರೆ.

ಅವರಿಗೆ ಬೆಳ್ಳಿ ತಟ್ಟೆ ಇಟ್ಟು ಚಿನ್ನದ ಸ್ಪೂನ್ ಕೊಟ್ಟು ವರ್ಚಸ್ಸು ಕೊಡಲು ಆಗುತ್ತಾ ?.ದಿನ ಬೆಳಗಾದರೆ ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಲು ಮಾತನ್ನಾಡುತ್ತಿಲ್ಲವಾ?ಜನರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಹೀಗೆ ಹೇಳ್ತಿದಾರೆ.ಯೋಗೇಶ್ವರ್ ನಮ್ಮ ಪಕ್ಷಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಪ್ರಭಾವಿ ನಾಯಕ ಬಂದರೆ ಸ್ವಾಗತ.ಹಾಗಂತ ನಾವೇನು ವೀಕ್ ಆಗಿಲ್ಲ.ಈಗಾಗಲೇ ಚುನಾವಣಾ ಕೆಲಸಗಳನ್ನು ಪರಿಣಾಮಕಾರಿಯಾಗಿ ನಡೆಸಿದ್ದೇವೆ. ಯೋಗೇಶ್ವರ್ ಬರೋದು ಬಿಡೋದು ಅವರಿಗೆ ಸೇರಿದ್ದು.ಕೋನ ಸ್ಪರ್ಧೆಯಾದರೂ ನಾವು ಕೂದಲೆಳೆ ಅಂತರದಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.

ಶತ್ರುಗಳನ್ನ ನೋಡಿಯೇ ರಾಜಕಾರಣ ಮಾಡೋದು ಸಹಜ.ವಿರೋಧಿಯನ್ನ ಹಣಿಯೋದೆ ರಾಜಕೀಯ ತಂತ್ರಗಾರಿಕೆ.ಅದನ್ನ ನಾವು ಮಾಡುತ್ತಿದ್ದೇವೆ.ಜೆಡಿಎಸ್ ರಾಷ್ಟ್ರೀಯ ಪಕ್ಷ ಅಲ್ಲವಾ ?.ಯಾಕೆ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.ನಾವೂ ಕೂಡ ಸಂದರ್ಭ ನೋಡಿ ಅಭ್ಯರ್ಥಿ ಘೋಷಿಸುತ್ತೇವೆ.ನಾವು ಯಾರಿಗೋ ಹೆದರಿಕೊಂಡು ಕೂತಿಲ್ಲ.ಪಕ್ಷ ಯಾರನ್ನ ಅಭ್ಯರ್ಥಿ ಮಾಡುತ್ತೋ ಅದೇ ಅಂತಿಮ.ರಘುನಂದನ್ ರಾಮಣ್ಣಗೆ ಸಿದ್ದವಾಗಿರುವಂತೆ ಸೂಚಿಸಿದ್ದೇವೆ ಎಂದ್ರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ  ಸಿ.ಪಿ. ಯೋಗೇಶ್ವರ್ ರಾಜೀನಾಮೆ

ಬೆಂಗಳೂರು:  ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ಯಾರೋ ಅನ್ನೋ ಬಗ್ಗೆ ತೆರೆಯಲ್ಲಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಎನ್ ಡಿ ಎ ಟಿಕೆಟ್ ಆಕಾಂಕ್ಷಿಯಾಗಿದ್ದ  ಬಿಜೆಪಿ ಎಂಎಲ್ ಸಿ ಸಿ ಪಿ ಯೋಗೇಶ್ವರ್  ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು ವಿಧಾನಪರಿಷತ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಸೇವೆ ಪರಿಗಣಿಸಿ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ.ಜೆಡಿಎಸ್​ನಿಂದ ಸ್ಪರ್ಧೆಗೆ ಕಾರ್ಯಕರ್ತರ ಅಪಸ್ವರ, ಗೊಂದಲವಿತ್ತು.ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇನೆ.ಹೆಚ್.ಡಿ.ಕುಮಾರಸ್ವಾಮಿ ಮನಸ್ಸು ಮಾಡಿದರೆ ಈಗಲೂ ಅವಕಾಶವಿದೆ ಮುಂದೆ ಏನಾಗುತ್ತೋ ನೋಡೋಣ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಇನ್ನು  ಸಿ ಪಿ ಯೋಗೇಶ್ವರ್ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರು ಹಲವು ಬಾರಿ ಸ್ವಾಭಿಮಾನದ ವಿಚಾರ ಮೇಲೆತ್ತಿದ್ದಾರೆ.ಹಲವು ಸಂದರ್ಭ ಅವರು‌ ಸ್ವಾಭಿಮಾನದ ಮೇಲೆ ಚುನಾವಣೆ ನಡೆಸಿದ್ದರು. ಅವರ ಭವಿಷ್ಯಕ್ಕಾಗಿ‌ ನಿರ್ಧಾರ ಮಾಡಿದ್ದಾರೆ.ವೈಯುಕ್ತಿಕವಾಗಿ ಯೋಗೇಶ್ವರ್ ಸ್ನೇಹಿತರು. ಪಕ್ಷಕ್ಕೆ ಬರುವ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್  ಮಾತನಾಡಿ ಯೋಗೇಶ್ವರ್ ನಡೆ ಅಚ್ಚರಿ ಮೂಡಿಸಿದೆ.ಅವರು ಯಾವ ದೃಷ್ಟಿಯಿಂದ ಹೋಗುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ.ಯೋಗೇಶ್ವರ್ ಗೆ ಟಿಕೆಟ್ ಕೊಡುವುದೇ ಇಲ್ಲ ಎಂಬ ಸ್ಥಿತಿ ಏನೂ ಇಲ್ಲ.ಇನ್ನೂ ಚರ್ಚೆ ನಡೆಯುತ್ತಿದೆಮೂಲತಃ ಅದು ಜೆಡಿಎಸ್ ಕ್ಷೇತ್ರ. ಹೀಗಾಗಿ ಕುಮಾರಸ್ವಾಮಿ ತೀರ್ಮಾನ ಪ್ರಮುಖ ಆಗುತ್ತದೆ.ನಾನು, ಅಶ್ವಥ್ ನಾರಾಯಣ ಇದನ್ನು ಯೋಗೇಶ್ವರ್ ಗೆ ಮನದಟ್ಟು ಮಾಡಿದ್ದೇವೆ.ಅಶ್ವಥ್ ನಾರಾಯಣಗೆ ಯೋಗೇಶ್ವರ್  ಅವರನ್ನು ಸಂಪರ್ಕ ಮಾಡಲು ಹೇಳಿದ್ದೇನೆ.ಇನ್ನೂ ನಾಲ್ಕು ದಿನ ಸಮಯ ಇದೆ. ತಪ್ಪು ನಿರ್ಧಾರ ತೆಗೆದುಕೊಳ್ಳಲ್ಲ ಎಂಬ ವಿಶ್ವಾಸ ಇದೆ.ನಾನು ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರ ಜೊತೆಯೂ ಮಾತಾಡುತ್ತೇನೆ.ಚಿಹ್ನೆ ಯಾವುದು ಅಂತಾ ಮಾತಾಡೋಣ ಎಂದು ಕುಮಾರಸ್ವಾಮಿ ಮುಕ್ತವಾಗಿ ಮಾತಾಡಿದ್ದಾರೆ. ಇದನ್ನು ಯೋಗೇಶ್ವರ್ ಗಮನಕ್ಕೆ ಕೂಡಾ ತಂದಿದ್ದೇವೆ.ಯೋಗೇಶ್ವರ್ ಆತುರ ಬಿದ್ದರು ಅನ್ನಿಸುತ್ತದೆ.ಎಂಎಲ್ಸಿ ಆಗಿರುವಾಗ ಎಂಎಲ್ ಎ ಯಾಕೆ ಎಂದು ಜನ ಕೇಳಬಹುದು ಎಂಬ ಕಾರಣಕ್ಕೆ ರಾಜೀನಾಮೆ ಕೊಡಲು ಹೋಗಿರಬಹುದು. ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಮುಂದಿನ ಯೋಗೇಶ್ವರ್ ರಾಜಕೀಯ ನಡೆ ಏನಾಗುತ್ತದೆ ಗೊತ್ತಿಲ್ಲ.ಯೋಗೇಶ್ವರ್ ಜೊತೆ ಬಿಜೆಪಿ ಕೇಂದ್ರದ ನಾಯಕರು ಮಾತಾಡುತ್ತಾರೆ.ಅಭ್ಯರ್ಥಿ ಯಾರು ಅಂತಾ ಕುಮಾರಸ್ವಾಮಿಯವರನ್ನು ಬಿಟ್ಟು ನಾವು ತೀರ್ಮಾನ ಮಾಡಲು ಆಗಲ್ಲ.ಈ ಗೊಂದಲದಿಂದ ಮೈತ್ರಿ ಮೇಲೆ ಏನೂ ಪರಿಣಾಮ ಆಗಲ್ಲ. ಯೋಗೇಶ್ವರ್ ಜೊತೆ ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.ಈ ಬಗ್ಗೆ ನಾನು ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ ಎಂದಿದ್ದಾರೆ.