ಬೆಂಗಳೂರು; ಯಡಿಯೂರಪ್ಪ ವಿಜಯೇಂದ್ರ ಟೀಕೆ ಮಾಡಿದ್ರೆ ಪಕ್ಷ ಟೀಕೆ ಮಾಡಿದಂತೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ.ಪಕ್ಷಕ್ಕಿಂತ ದೇಶ ಮುಖ್ಯ.ಪಕ್ಷಕ್ಕಿಂತ ಯಾರೂ ಮುಖ್ಯರಲ್ಲ.ಯುವ ನಾಯಕತ್ವ ಮತ್ತು ಮುಂದಿನ 20ವರ್ಷದ ನಾಯಕತ್ವಕ್ಕಾಗಿ ವಿಜಯೇಂದ್ರನ ಅಧ್ಯಕ್ಷ ಮಾಡಿದ್ದು.ಯಡಿಯೂರಪ್ಪ ವಿಜಯೇಂದ್ರ ಟೀಕೆ ಮಾಡಿದ್ರೆ ಪಕ್ಷ ಟೀಕೆ ಮಾಡಿದಂತೆ ಎಂದಿದ್ದಾರೆ.
ಮೈಸೂರಿನ ಉದಯಗಿರಿ ಗಲಾಟೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅಲ್ಪಸಂಖ್ಯಾತ ಗೂಂಡಾಗಳು ಬಂದು ದಾರಿಯಲ್ಲಿ ಗಲಾಟೆ ಮಾಡ್ತಾರೆ.ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ.ಸಾಕಷ್ಟು ವಿಚಾರಗಳಿದ ಕಾಂಗ್ರೆಸ್ ಟೇಕ್ ಆಪ್ ಮಾಡಿಲ್ಲ.ಕಾಂಗ್ರೆಸ್‌ನ ಕೆಲವರು ನಮಗೆ ಸ್ನೇಹಿತರಿದ್ದಾರೆ.ಬಣ ಸಂಘರ್ಷದಿಂದ ಏನೂ ಆಚೆ ಬರ್ತಿಲ್ಲ ಎಂದು ಅವರೇ ಹೇಳಿದ್ದಾರೆ.ಜನರಂತೂ ಸಾಕಷ್ಟು ಬೇಸರ ಗೊಂಡಿದ್ದಾರೆ.ರಾಷ್ಟ್ರೀಯ ನಾಯಕರು ಎಲ್ಲರ ಹೇಳಿಕೆ ಗಮನಿಸ್ತಾರೆ.ಯಾವ ಸಂಧರ್ಭದಲ್ಲಿ ಕ್ರಮ ತೆಗೆದು ಕೊಳ್ಳಬೇಕು ನೋಡ್ತಾರೆ.ನೊಟೀಸ್ ಏನೂ ಅಲ್ಲಾ ಎಂದು ಕೆಲವರು ಮಾತಾಡಿದ್ದಾರೆ .ಆದರೆ ಇದು ಗಂಭೀರವಾಗಿದೆ .ನಾವು ನಾಳೆ ಸಭೆ ಮಾಡಬೇಕು ಎಂದಿದ್ದೆವು.ಅಧ್ಯಕ್ಷರು ಮತ್ತು ಯಡಿಯೂರಪ್ಪನವರು ಸೂಚನೆ ಕೊಟ್ಟಿದ್ದಾರೆ.ನಾಳೆಯ ಸಭೆಯನ್ನ ರದ್ದು ಮಾಡಿದ್ದೇವೆ. ನಮ್ಮ ಉದ್ದೇಶ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಇಂದಾಗಬೇಕು.ರಾಜ್ಯಾಧ್ಯಕ್ಷರ ಹೆಗಲಿಗೆ ಹೆಗಲನ್ನ ಕೊಟ್ಟು ಸಂಘಟನೆಗೆ ಕೈ ಜೋಡಿಸಬೇಕು.ರಾಷ್ಟ್ರೀಯ ನಾಯಕರ ತೀರ್ಮಾನ ಪ್ರಶ್ನೆ ಮಾಡುವ ಹಕ್ಕು ನಮ್ಮದಿಲ್ಲ.ಯಾವ ಕಾರಣಕ್ಕೆ ಚಿಕ್ಕಬಳ್ಳಾಪುರ ಅಧ್ಯಕ್ಷರ ಆಯ್ಕೆಗೆ ತಡೆ ಒಡ್ಡಿದ್ದಾರೋ ಗೊತ್ತಿಲ್ಲ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ರಾಜ್ಯಾಧ್ಯಕ್ಷರ ಪಾತ್ರವಿಲ್ಲ ಎಂದಿದ್ದಾರೆ.
ನಮಗೆ ವಿಶ್ವಾಸ ಇದೆ, ರಾಜ್ಯಾಧ್ಯಕ್ಷ ಬಗ್ಗೆ ವರಿಷ್ಠರಿಗೆ ವಿಜಯೇಂದ್ರ ಕೆಲಸದ ಬಗ್ಗೆ ಮಾಹಿತಿ ಇದೆ.ಅವರನ್ನೇ ಮತ್ತೆ ಮುಂದುವರೆಸುತ್ತಾರೆ ಎನ್ನೋ ವಿಶ್ವಾಸ ಇದೆ.ಇನ್ನೇನಿದ್ದರೂ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸಭೆ.ಯಾರನ್ನೂ ರಾಜ್ಯಾಧ್ಯಕ್ಷರು ಆಯ್ಕೆ ಮಾಡಿರೋದಲ್ಲ.ಇನ್ನೊಂದು ವಾರದಲ್ಲಿ ಆತಂರಿಕ ಸಂಘರ್ಷ ಅಂತ್ಯವಾಗುತ್ತೆ.ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಇರಲಿದೆ.ನಾಳೆಯ ಸಭೆ ಅಧ್ಯಕ್ಷರ ಸೂಚನೆ ಮೇರೆಗೆ ರದ್ದು ಮಾಡಿದ್ದೇವೆ ಎಂದರು.