ಬೆಂಗಳೂರು; ಹೆಣ್ಣು ಮಗಳಿಗೆ ಅವಾಚ್ಯ ಪದ ನಿಂದನೆ ದೇವರ ಕೆಲಸವಾ ಎಂದು ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸರ್ಕಾರದ ಕೆಲಸ ದೇವರ ಕೆಲಸ ಅಂತಾ ಹೇಳುತ್ತಾರೆ. ಹೆಣ್ಣುಮಗಳಿಗೆ ಅವಾಚ್ಯ ಪದ ನಿಂದನೆ ದೇವರ ಕೆಲಸವಾ?. ಕೆ.ಜಿ. ಹಳ್ಳಿ ಪ್ರಕರಣದಲ್ಲಿ ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಗೊತ್ತಿದೆ. ಮೈಸೂರಿನಲ್ಲಿ ಪೊಲೀಸರು ಆಸ್ಪತ್ರೆಯಲ್ಲಿದ್ದರೂ ನಿಮಗೆ ನೋವಾಗಿಲ್ಲ. ಆದರೆ ಕಲ್ಲು ಹೊಡೆದವರ ಪರ ನಿಂತಿದ್ದೀರಿ. ಇನ್ನೊಬ್ಬರು ಆರ್ ಎಸ್ ಎಸ್ ನವರು ಬಂದಿದ್ದರು ಅಂತಾ ಹೇಳಿದ್ದಾರೆ, ಅವರು ನಿಮ್ಹಾನ್ಸ್ ಆಸ್ಪತ್ರೆಯಿಂದ ಬಂದಿದ್ದರೋ ಗೊತ್ತಿಲ್ಲ. ಪೊಲೀಸರು ಗುರುತಿಸಿರುವ 60 ಜನರಲ್ಲಿ ಆರ್ ಎಸ್ ಎಸ್, ಬಿಜೆಪಿಯವರು ಎಷ್ಟು ಜನ ಅಂತಾ ಕಾಂಗ್ರೆಸ್ ನವರು ಹೇಳಬೇಕು ಎಂದರು.
ಪೊಲೀಸ್ ನವರದ್ದೇ ತಪ್ಪು ಅಂತಾದರೆ ಸ್ಟೇಷನ್ ನಲ್ಲಿ ಪೊಲೀಸರನ್ನು ಯಾಕೆ ಇಟ್ಟಿದ್ದೀರಿ?. ಯಾರು ಕಲ್ಲು ಹೊಡೆದಿದ್ದಾರೋ ಅವರಿಗೇ ಬಿಟ್ಟು ಬಿಡಿ.ಮುಸಲ್ಮಾನರೇ ಇರುವ ಪ್ರದೇಶ ಅಂತಾದರೆ ಇದೇನು ಪಾಕಿಸ್ತಾನವೇ?.ಸರ್ಕಾರ ಮೊದಲು ನೀಚ ಬುದ್ದಿಯನ್ನು ಬಿಡಬೇಕು.ದೇವರ ಕೆಲಸ ಮಾಡಲಿ, ದೆವ್ವದ ಕೆಲಸ ಮಾಡುವುದು ಬೇಡ ಎಂದರು.
ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ವಿಪಕ್ಷ ನಾಯಕರ ಪ್ರತಿಭಟನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆಕ್ರೋಶ
ಬೆಂಗಳೂರು; ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿವಿಧ ಕಡೆಗಳಲ್ಲಿ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಕರ್ತವ್ಯ ನಿರ್ವಹಿಸಲು ಭಯ ಮುಕ್ತ ವಾತಾವರಣ ನಿರ್ಮಿಸುವಂತೆ ಆಗ್ರಹಿಸಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ಲೇ ಕಾರ್ಡ್ ಹಿಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ರು. ಪ್ಲೇ ಕಾರ್ಡ್ ಹಿಡಿದುಕೊಂಡು ವಿಧಾನಸೌಧದ ಕಾರಿಡಾರ್ ಗಳಲ್ಲಿ ಹೆಜ್ಜೆ ಹಾಕಿ ಪೂರ್ವ ದ್ವಾರ ಮತ್ತು ಪಶ್ಚಿಮ ದ್ವಾರಗಳಲ್ಲಿ ಪ್ರತಿಭಟನೆ ಮಾಡಿದ್ರು.ವಿಧಾನಸೌಧದಲ್ಲಿರುವ ವಿಪಕ್ಷ ನಾಯಕರ ಕೊಠಡಿಯಿಂದ ಪ್ಲಕಾರ್ಡ್ ಹಿಡಿದುಕೊಂಡು ಗ್ರ್ಯಾಂಡ್ ಸ್ಟೆಪ್ಸ್ ಮತ್ತು ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಹಾಗೂ ಹೆಜ್ಜೆ ಹಾಕಿದ್ರು.
ವಿಪಕ್ಷ ನಾಯಕರ ಕೊಠಡಿಯಿಂದ ಹೊರಟು ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಪ್ಲ ಕಾರ್ಡ್ ಪ್ರದರ್ಶನ ಮಾಡಿದ್ರು.ನಂತರ ನಡೆದುಕೊಂಡು ಬಂದು ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ವಿಪಕ್ಷ ನಾಯಕರಾದ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಪ್ರತಿಭಟನೆ ಮಾಡಿದ್ರು. ಈ ವೇಳೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಿಧಾನಸೌಧ ಮೌನ ಸೌಧ ಆಗಿದೆ. ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಸುರಕ್ಷತೆ ಇಲ್ಲ.ಮೈಸೂರಿನಲ್ಲಿ ದಾಂಧಲೆ ಮಾಡಿದ್ದಾರೆ. ಕಲ್ಲು ಹೊಡೆದವರು ಸಣ್ಣ ಹುಡುಗರು ಅಂತಾ ಒಬ್ಬ ಮಂತ್ರಿ ಹೇಳಿದ್ದಾರೆ.ಇನ್ನೊಬ್ಬ ಮಂತ್ರಿ ಪೊಲೀಸರು ನಾನ್ ಸೆನ್ಸ್ ಗಳು, ನಾಲಾಯಕ್ ಗಳು ಅಂತಾ ಹೇಳಿದ್ದಾರೆ. ಮಾಫಿಯಾ ಕೈಯಲ್ಲಿ ಸರ್ಕಾರ ಸಿಕ್ಕಿಹಾಕಿಕೊಂಡಿದೆ ಎಂದು ಆಕ್ರೋಶ ಹೊರ ಹಾಕಿದ್ರು.
ನೌಕರರ ಸಂಘದ ಅಧ್ಯಕ್ಷರೇ ಈ ಬಗ್ಗೆ ಕಮೆಂಟ್ ಮಾಡಿದರೆ ಏನೂ ಪ್ರಯೋಜನ ಇಲ್ಲ, ಬೀದಿಗೆ ಇಳಿದು ಹೋರಾಟ ಮಾಡಬೇಕು. ಮೈಸೂರಿನಲ್ಲಿ 500-600 ಜನ ಅಟ್ಯಾಕ್ ಮಾಡಿದರೂ ಇನ್ನೂ ಒಬ್ಬರನ್ನೂ ಬಂಧಿಸಿಲ್ಲ. ಸಿ.ಟಿ. ರವಿಯನ್ನು ರಾತ್ರೋ ರಾತ್ರಿ ಬಂಧಿಸಿ ಕಾಡಿಗೆ ತೆಗೆದುಕೊಂಡು ಹೋದ್ರಿ?.ಹಿಂದೂಗಳಿಗೆ ಒಂದು ಕಾನೂನು, ಮುಸ್ಲಿಮರಿಗೆ ಒಂದು ಕಾನೂನಾ? ಪೊಲೀಸರ ಆತ್ಮಸ್ಥೈರ್ಯ ಏನಾಗಬೇಕು?.ನಾವು ಇಂದು ಸಾಂಕೇತಿಕವಾಗಿ ಹೋರಾಟ ಮಾಡಿದ್ದೇವೆ.ನಾಳೆ ಹೋರಾಟ ಮಾಡಲು ಜಿಲ್ಲಾಧ್ಯಕ್ಷರಿಗೆ ಹೇಳಿದ್ದೇನೆ.ರಾಜ್ಯಾಧ್ಯಕ್ಷರು ಮತ್ತು ಇತರ ನಾಯಕರ ಜೊತೆಗೆ ದೊಡ್ಡ ಹೋರಾಟದ ಬಗ್ಗೆ ಬಗ್ಗೆ ಚರ್ಚೆ ಮಾಡುತ್ತೇವೆ.ಮೈಸೂರು ಘಟನೆಯಲ್ಲಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು.ಪೊಲೀಸರು ಕರ್ತವ್ಯ ನಿರ್ವಹಿಸಿದರೂ ಅವರ ಮೇಲೆ ಈ ಸರ್ಕಾರದ ದುರುಳ ದೃಷ್ಟಿ ಬೀಳುತ್ತದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯ ಘಟನೆಗಳ ಪಟ್ಟಿ ಬಿಡುಗಡೆ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ವಿಪಕ್ಷದಲ್ಲಿದ್ದಾಗ ಮಲಗಿದ್ರಾ? ಆಡಳಿತದಲ್ಲಿದ್ದಾಗ ಆಡಳಿತ ಪಕ್ಷದ ಕೆಲಸ ಮಾಡಿ, ವಿಪಕ್ಷದಲ್ಲಿದ್ದಾಗ ವಿಪಕ್ಷದ ಕೆಲಸ ಮಾಡಿ.ಡಬಲ್ ಆಕ್ಟಿಂಗ್ ಮಾಡಲು ಹೋಗಬೇಡಿ.ಗೃಹ ಸಚಿವರ ವೈಫಲ್ಯ ಎನ್ನುವುದರಲ್ಲಿ ಡೌಟ್ ಇಲ್ಲ ಎಂದರು.