ಮನೆ Latest News ಹೆಚ್ಚಿನ ಕಮಿಷನ್ ಪಡೆಯೋದನ್ನು ಅವರು ಬಂದು ಪ್ರೂವ್ ಮಾಡಿದರೆ ನಾನು ರಿಸೈನ್ ಮಾಡ್ತೇನೆ; ಎನ್ ಎಸ್...

ಹೆಚ್ಚಿನ ಕಮಿಷನ್ ಪಡೆಯೋದನ್ನು ಅವರು ಬಂದು ಪ್ರೂವ್ ಮಾಡಿದರೆ ನಾನು ರಿಸೈನ್ ಮಾಡ್ತೇನೆ; ಎನ್ ಎಸ್ ಭೋಸರಾಜು ಹೇಳಿಕೆ

0

ಬೆಂಗಳೂರು; ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್  ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಎನ್ ಎಸ್ ಭೋಸರಾಜು ಪ್ರತಿಕ್ರಿಯಿಸಿದ್ದು ಮಂಜುನಾಥ್ ಸೇರಿ ಆರು ಮಂದಿ ಗುತ್ತಿಗೆದಾರರ ಪದಾಧಿಕಾರಿಗಳು ಭೇಟಿ ಮಾಡಿದ್ದರು.ನಾನು ಸಣ್ಣಪುಟ್ಟ ಬಿಲ್ ಕೂಡ ಸ್ಯಾಂಕ್ಷನ್ ಮಾಡಿ ಕ್ಲೋಸ್ ಮಾಡಿದ್ದೇವೆ.ಸಭೆ ನಡೆದಾಗ ನೀವೇ ಸರಿಯಾಗಿ ನಿಭಾಯಿಸುತ್ತಿದ್ದೀರಿ ಎಂದು ಹೇಳಿದ್ದರು. ಈ ವರ್ಷವೂ ಕೂಡ ೫೨೦ ಸಣ್ಣ ಸಣ್ಣ ಗುತ್ತಿಗೆದಾರರ ಬಿಲ್ ಪೇಮೆಂಟ್ ಮಾಡಿದ್ದೇವೆ.ಸಣ್ಣ ಸಣ್ಣ ಗುತ್ತಿಗೆದಾರರ ಮುಖ ಕೂಡ ನಾವು ನೋಡಿಲ್ಲ.ಆರ್ಥಿಕ ಇಲಾಖೆಯಿಂದ ಬಂದ ಎಲ್ಲ ಎಲ್ಓಸಿ ಪ್ರಕಾರವೇ ಹಣ ಬಿಡುಗಡೆ ಮಾಡ್ತಿದ್ದೇವೆ ಎಂದಿದ್ದಾರೆ.

ಹೆಚ್ಚಿನ ಕಮಿಷನ್ ಆರೋಪ ವಿಚಾರದ ಬಗ್ಗೆ ಮಾತನಾಡಿ ಅವರು ಬಂದು ಪ್ರೂವ್ ಮಾಡಿದರೆ ನಾನು ರಿಸೈನ್ ಮಾಡ್ತೇನೆ. ಮೊದಲು ನಮ್ಮ ಸ್ಪಷ್ಟನೆ ಕೇಳಲಿ ಆಮೇಲೆ ಆರೋಪ ಮಾಡಲಿ. ಸುಮ್ಮನೆ ವೇಗ್ ಆಗಿ ಆರೋಪ ಮಾಡಬಾರದು.ನನ್ನ ಇಲಾಖೆಯಲ್ಲಿ ೧೦೧% ಪಾರದರ್ಶಕತೆ ಇದೆ. ಬೇರೆಯವರ ಇಲಾಖೆ ಬಗ್ಗೆ ಗೊತ್ತಿಲ್ಲ. ಅವರನ್ನು ಸಭೆಗೆ ಕರೆಯಲು ಆಗಲೇ ನಾನು ಹೇಳಿದ್ದೇನೆ.ವ್ಯವಸ್ಥೆ ವಿರುದ್ದ ನಾನು ಹೋಗಿದ್ದರೆ ಆರೋಪ ಮಾಡಲಿ. ಎಲ್ಲರೂ ಬಂದಾಗ ಸಮಾಧಾನ ಮಾಡುವುದಕ್ಕೆ ಯಾರಾದರೂ ನಮ್ಮವರು ಮುಂದೆ ನಿಂತಿರಬಹುದು. ಆದರೆ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ಅಧಿಕಾರಿಗಳ ತಪ್ಪು ಕಂಡು ಬಂದಾಗ ನಾನು ಸಹಿಸಿಲ್ಲ. ಗುತ್ತಿಗೆದಾರರ ಬಗ್ಗೆ ನಾನು ಆರೋಪ ಮಾಡುವುದಿಲ್ಲ.ಆದರೆ ಅವರು ಸುಮ್ಮನೆ ವೇಗ್ ಆಗಿ ಮಾತಾಡಬಾರದು ಎಂದಿದ್ದಾರೆ.

ಇನ್ನು ಈ ಬಗ್ಗೆ  ಬೆಂಗಳೂರಿನಲ್ಲಿ ಶಾಸಕ ಮಹೇಶ್ ತೆಂಗಿನಕಾಯಿ ಪ್ರತಿಕ್ರಿಯಿಸಿದ್ದು ಗುತ್ತಿಗೆದಾರ ಸಂಘದವರು ಗುರುತರವಾದ ಆರೋಪ ಮಾಡಿದ್ದಾರೆ.ಹಿಂದೆ ನಮ್ಮ‌ ಸರ್ಕಾರ ಇದ್ದಾಗ ಸಾಕ್ಷಿ ಇಲ್ಲದೇ ಆರೋಪ ಮಾಡಿ ಸರ್ಕಾರ ಇಳಿಸಿದರು.ಈಗ ರಾಯರೆಡ್ಡಿ ನಂಬರ್ ಒನ್ ಭ್ರಷ್ಟ ಸರ್ಕಾರ ಅಂತ ಹೇಳಿದ್ದಾರೆ.ಕೆಂಪಣ್ಣ ಅವರಿಂದ ಆರೋಪ ಮಾಡಿಸಿದ್ದ ಕಾಂಗ್ರೆಸ್ ಇಂದು ಅದೇ ಗುತ್ತಿಗೆದಾರರಿಂದ ಆರೋಪ ಎದುರಿಸುತ್ತಿದ್ದಾರೆ.ಅನೇಕ ವಿಷಯ ಬಹಿರಂಗಪಡಿಸಬೇಕು.ಬಿಜೆಪಿಯಿಂದ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ. ಸದನದಲ್ಲಿ ಹೋರಾಟ ಮಾಡಲು ಹೋದರೆ, ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಿದ್ದಾರೆ‌. ರಾಯರೆಡ್ಡಿ ಸ್ಪಷ್ಟವಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಒಪ್ಪಿಕೊಳ್ಳಬೇಕು.ಮಂತ್ರಿಗಳೂ ಭ್ರಷ್ಟಾಚಾರ ಕಡಿಮೆ ಮಾಡಬೇಕು ಎಂದಿದ್ದಾರೆ.

ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಗಂಭೀರ ಆರೋಪ

ಚಿತ್ರದುರ್ಗ; ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಸರ್ಕಾರಕ್ಕಿಂತ ಈಗ ಕಮಿಷನ್ ಹಾವಳಿ ಹೆಚ್ಚಳ ಆಗಿದೆ. ಸ್ಪೆಷಲ್‌‌ ಎಲ್‌ಓಸಿ ಕೊಡಿಸಲು ಬ್ರೋಕರ್ ಗಳು ಹೆಚ್ಚಿದ್ದಾರೆ ಎಂದು  ಸಿಎಂ, ಡಿಕೆಶಿ , ಸತೀಶ್ ಜಾರಕಿಹೊಳಿ,  ಬೋಸರಾಜ್‌ಗೆ ಪತ್ರ ಬರೆದಿದ್ದಾರೆ.

ಮಧ್ಯವರ್ತಿಗಳು ಅಂದ್ರೆ ಕಾಣದ ಕೈಗಳು ವ್ಯವಸ್ಥೆಯನ್ನ ಹಾಳು ಮಾಡ್ತಿವೆ. ಬ್ರೋಕರ್ ಗಳಿಂದ ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆ ಆಗುತ್ತಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಲು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗುತ್ತಿಗೆದಾರರ ಸಭೆ ಕರೆದು ನ್ಯಾಯ ಒದಗಿಸುವಂತೆ ಮಂಜುನಾಥ ಪತ್ರ ಬರೆದಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ. ಗುತ್ತಿಗೆದಾರರ ಬಾಕಿ ಹಣ ಶೀಘ್ರಗತಿಯಲ್ಲಿ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಗುತ್ತಿಗೆದಾರರ ಸಂಘದಿಂದ ಪತ್ರ ಬರೆದಿರೋ ವಿಚಾರದ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದು ಅವರ ದೂರು ಪರಿಶೀಲನೆ ಮಾಡೋಣ. ಯಾರು ಮಧ್ಯವರ್ತಿ ಅಂತ ನಿರ್ದಿಷ್ಟ ವಾಗಿ ಹೇಳಬೇಕು. ಅವರು ಏನು ದೂರು ಕೊಟ್ಟಿದ್ದಾರೆ ಅಂತ ನೋಡಬೇಕು. ನೇರ ಅಂತ ಹೇಳಿದ್ರೆ ಯಾರು ಏನು ಅಂತ ಹೇಳಬೇಕು. ಯಾವ ಪ್ರಕರಣದಲ್ಲಿ ಎಲ್ಲಿ ಹಸ್ತಕ್ಷೇಪ ಅಂತ ಹೇಳಬೇಕು ಅಲ್ವೇ.ಕೋವಿಡ್ ನಲ್ಲಿ ಭ್ರಷ್ಟಾಚಾರ ನಡೆದಿದೆ.ನಿರ್ದಿಷ್ಟ ವಾಗಿ ಹೇಳಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.