ಹಾಸನ; ರಸ್ತೆ ಸರಿಯಿಲ್ಲ ಎಂದರೆ ಉದ್ಯಮಿಗಳಿಗೆ ನಿಂದನೆ ಭಾಗ್ಯ ಕೊಟ್ಟ ಸರ್ಕಾರ ಇದು ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಸ್ತೆ ಸರಿಯಿಲ್ಲ ಎಂದರೆ ಉದ್ಯಮಿಗಳಿಗೆ ನಿಂದನೆ ಭಾಗ್ಯ ಕೊಟ್ಟ ಸರ್ಕಾರ ಇದು. ರಸ್ತೆ ಸರಿ ಇಲ್ಲ ಎಂದರೆ ಡಿಕೆಶಿ ಹೇಳ್ತಾರೆ ಬೆಂಗಳೂರಿನಿಂದ ಎಲ್ಲವನ್ನು ಪಡೆದಿದ್ದೀರ ತೆಗಳ ಬೇಡಿ ಎಂದು ನೀತಿ ಪಾಠ ಹೇಳ್ತಾರೆ. ನೀವೇನು ಬಿಜೆಪಿ ಅವರಾ ಅಂತಾರೆ ಪ್ರಶ್ನೆ ಮಾಡಿದ್ರೆ ಧಮ್ಕಿ ಹಾಕೊ ಪ್ರವೃತ್ತಿ ಸಿಎಂ ಡಿಸಿಎಂಗೆ ಇದೆ.ಮೊಹನ್ ದಾಸ್ ಪೈ ಕಿರಣ್ ಮಜುಂದಾರ್, ಇನ್ಫೋಸಿಸ್ ಅವರಿಗೆ ದಮ್ಕಿ ಹಾಕ್ತಿರಾ.ಅವರು ಏನಾದ್ರು ಕಾಂಗ್ರೆಸ್ ಪಕ್ಷ ದಿಂದ ಏನಾದ್ರು ನೆರವು ಪಡೆದಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ಜನರ ತೆರಿಗೆಯಿಂದ ಸಹಾಯ ಆಗಿದೆ. ಅವರು ಸರ್ಕಾರಕ್ಕೆ ಹೇಳ್ತಾ ಇದ್ದಾರೆ. ಅವರು ಬೆಂಗಳೂರು ಜನರ ಬಗ್ಗೆ ಏನು ಮಾತಾಡಿಲ್ಲ.ಬರಿ ನಿಮ್ಮ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ ಅಷ್ಟೇ. ಬ್ರಾಂಡ್ ಬೆಂಗಳೂರು ಎಂದು ಖ್ಯಾತಿ ಆಗಲು ಕಾರಣ ಬೆಂಗಳೂರು ಜನತೆ. ಸಿಎಂ ಡಿಸಿಎಂ, ಪ್ರಿಯಾಂಕ್ ಖರ್ಗೆ ಅಲ್ಲ. ಈ ಮೂರು ಜನರು ಬೆಂಗಳೂರಿನ ಜನರೇ ಅಲ್ಲ. ಅವರು ಟ್ಯಾಕ್ಸ್ ಕಟ್ಟಿದಾರೆ ಕೇಳೋಕೆ ಹಕ್ಕಿದೆ. ಹಣ ಇಲ್ಲ ಪಾಪರ್ ಅಗಿದ್ರೆ ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಬೆಂಗಳೂರಿನಿಂದ ಪಡೆದಿಲ್ವಾ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಅವರು ಕೇಳಾರೆ ಇದರಲ್ಲಿ ತಪ್ಪು ಏನಿದೆ.ನೀವು ಕೇಳಿದ್ರಲ್ಲ ಹಾಗೇ ಅವರು ಕೇಳ್ತಾ ಇದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕೂಡ ಅವರು ಹತ್ತು ಟ್ವೀಟ್ ಮಾಡಿದ್ದಾರೆ.ಆಗ ನಾವು ಸಭೆ ಕರೆದು ಚರ್ಚೆ ಮಾಡಿ ಕೂಡಲೆ ಹಣ ಬಿಡುಗಡೆ ಮಾಡಿದ್ದೆವು. ನೀವು ಹಣ ಬಿಡುಗಡೆ ಮಾಡಲು ಹಣ ಇಲ್ಲ ಪಾಪರ್ ಆಗಿದ್ದೀರಾ. ನಿಮಗೆ ಸಂಬಳ ಕೊಡಲೇ ಹಣ ಉಲ್ಲ ನೌಕರರು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ. ಡಿಸಿಎಂ ಹೇಳೋ ಪ್ರಕಾರ ಈಗಾಗಲೆ 30. ಸಾವಿರ ಗುಂಡಿ ಮುಚ್ಚಲಾಗಿದೆ ಅಂತೀರಾ. ಎರಡು ಸಾವಿರ ಕೋಟಿ ಹಣ ಖರ್ಚು ಮಾಡಿದಿನಿ ಅಂತೀರಾ. ಈ ಗುಂಡಿಯಲ್ಲಿ ಹಣ ಕರಗಿ ಹೋಯ್ತ ಎಂದಿದ್ದಾರೆ.
ಬಿಜೆಪಿ ಅವಧಿಯ ಬಾಕಿ ಹಣ ಪಾವತಿ ವಿಚಾರದ ಬಗ್ಗೆ ಮಾತನಾಡಿದ ಅವರು ನಿಮ್ಮ ಸರ್ಕಾರ ಇದ್ದಾಗ ಮಾಡಿಎ್ದ ಸಾಲವನ್ನು ನಾವು ಎರಡು ವರ್ಷ ತೀರಿಸಿದ್ವಿ. ನಿಮಗೆ ತಾಕತ್ ಇದ್ದರೆ ಎಷ್ಟು ಸಾಲ ಮಾಡಿದ್ರು. ನೀವು ಸಾಲ ಮಾಡಿಲ್ವಾ ಬಿಡುಗಡೆ ಮಾಡಿ.ನಾವು ಸಾವಿರ ಕೋಟಿ ಸಾಲ ಮಾಡಿದ್ರೆ ನೀವು ಲಕ್ಷ ಲಕ್ಷ ಕೋಟಿ ಸಾಲ ಮಾಡಿದ್ದೀರಾ. ಅಭಿವೃದ್ಧಿ ಗೆ ಹಣ ಇಲ್ಲ ಅಂತಾ ಶಾಸಕರು ಬಡಿದುಕೊಳ್ತಾ ಇದಾರೆ. ಕಾಂಗ್ರೆಸ್ ಶಾಸಕರೇ ಹೇಳ್ತಾ ಇದಾರೆ.ಎಐ ಕಂಪನಿ ಆಂದ್ರಾಗೆ ಹೋಯ್ತು. ಪ್ರಿಯಾಂಕ್ ಖರ್ಗೆ ಮಾತೆತ್ತಿದರೆ ಆರ್ ಎಸ್ ಎಸ್ ಅಂತಾರೆ. ನಾನೇ ಅಷ್ಟು ಸಲ ಹೇಳಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಸಾವಿರಾರು ಕೋಟಿ ಬಂಡವಾಳ ಹೋಯ್ತಲ್ಲ ನಾಚಿಕೆ ಆಗಲ್ವಾ ನಿಮಗೆ ಎಂದು ಗುಡುಗಿದ ಅವರು ಇವರನ್ನೆಲ್ಲಾ ಓಡಿಸಿ ಏನು ಮಾಡ್ತಿರಾ. ಆದಾಯ ಬರ್ತಾ ಇರೋದೆ ಇವರಿಂದ. ಎಲ್ಲರನ್ನೂ ಓಡಿಸಿ ಮರುಭೂಮಿ ಮಾಡ್ತೀರಾ.ಯುವ ನಿಧಿ ಎನ್ನೋದು ಬೋಗಸ್ ಎಂದಿದ್ದಾರೆ.











