ಮನೆ Latest News ಸಿಎಂ ಸೀಟು ಖಾಲಿ ಇಲ್ಲ ಎಂದ್ಮೇಲೆ ಬದಲಾವಣೆ ಎಲ್ಲಿಂದ? : ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಸಿಎಂ ಸೀಟು ಖಾಲಿ ಇಲ್ಲ ಎಂದ್ಮೇಲೆ ಬದಲಾವಣೆ ಎಲ್ಲಿಂದ? : ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

0

ಬೆಂಗಳೂರು: ಸಿಎಂ ಸೀಟು ಖಾಲಿ ಇಲ್ಲ ಎಂದ್ಮೇಲೆ ಬದಲಾವಣೆ ಎಲ್ಲಿಂದ? ಎಂದು  ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು ನಾಯಕತ್ವ ಬದಲಾವಣೆ ಅಭಿಪ್ರಾಯವನ್ನೇ ಪಡೆದುಕೊಂಡಿಲ್ಲ ಅಂದ ಮೇಲೆ ಬದಲಾವಣೆ ಎಲ್ಲಿದೆ? . ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ ನಾನಾಗಲೀ ಡಿ ಕೆ ಶಿವಕುಮಾರ್ ಆಗಲಿ ಹೈ ಕಮಾಂಡ್ ಮಾತಿಗೆ ಬದ್ದ ಎಂದಿದ್ದಾರೆ. ಶಿವಕುಮಾರ್ ಸಿಎಂ ಸೀಟು ಖಾಲಿ ಇಲ್ಲ ಅಂತ ಹೇಳಿದ್ದಾರೆ.ಹೀಗಂದ ಮೇಲೆ ಬದಲಾವಣೆ ಎಲ್ಲಿದೆ ? .ನಾವು ಪಕ್ಷದ ವಿಚಾರಗಳನ್ನ ಮಾಧ್ಯಮಗಳ ಮುಂದೆ ಮಾತನಾಡೋದು ಸರಿ ಅಲ್ಲ ಎಂದಿದ್ದಾರೆ.

ನಮ್ಮ ಹೈ ಕಮಾಂಡ್ ಗೆ ನಾವು ರಿಪೋರ್ಟ್ ಮಾಡಬೇಕು. ಅದನ್ನ ಬಿಟ್ಟು ನಾವು ಆರ್ ಎಸ್ ಎಸ್ ಗೆ ,ಸಂತೋಷ್ ಅವರಿಗೆ ರಿಪೋರ್ಟ್ ಕೊಡೋಕಾಗತ್ತಾ?  ಎಂದು ಪ್ರಶ್ನಿಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಇಡಿ ದಾಳಿ ವಿಚಾರದ ಬಗ್ಗೆ ಮಾತನಾಡಿ  ಇಡಿ,ಸಿಬಿಐ ಕೇಂದ್ರದ ಕೈ ಗೊಂಬೆ ಆಗಿವೆ.  ಈ ಸಂಸ್ಥೆಗಳನ್ನ ಪೊಲಿಟಿಕಲ್ ಟೂಲ್ ಆಗಿ ಮಾಡುತ್ತಿದ್ದಾರೆ. ದಾಳಿ ಆದ ಮೇಲೆ ಎಷ್ಟು ಕೇಸುಗಳಾಗಿವೆ ಅದನ್ನೂ ಹೇಳಬೇಕಲ್ಲ. ಬಿಜೆಪಿ, ಆರ್ ಎಸ್ ಎಸ್ ವಿರುದ್ಧ ಮಾತನಾಡಿದಾಗ ಈ ರೀತಿ ರೇಡ್ ಆಗೋದು ಸಹಜ . ಬಿಜೆಪಿ ನಾಯಕರ ಮೇಲೆ ಏಕೆ ಮಾಡಲ್ಲ. ಮೂಡಾ ಕೇಸ್ ನಲ್ಲಿ ಮನಿ ಲಾಂಡ್ರಿಂಗ್ ವ್ಯವಹಾರ ಇಲ್ಲದಿದ್ರೂ ಇಡಿ ಕೇಸ್  ಮಾಡಿಸಿದ್ದಾರೆ. ಇಲ್ಲೇ ಗೊತ್ತಾಗತ್ತಲ್ವಾ ಇದು ಎಂತ ರೇಡ್ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೀದಿ ನಾಯಿಗಳಿಗೆ ಬಿರಿಯಾನಿ ಕೊಡುವ ಯೋಜನೆ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರಿಯಾಂಕ ಖರ್ಗೆ ನಕ್ಕಿದ್ದಾರೆ.