ಮನೆ Latest News ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಇಟ್ಕೊಂಡ್ರೆ ಬಿಜೆಪಿ ತಲೆತಲಾಂತದಿಂದಲೂ ವಿರೋಧ ಪಕ್ಷದಲ್ಲೇ ಇರುತ್ತೆ;...

ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಇಟ್ಕೊಂಡ್ರೆ ಬಿಜೆಪಿ ತಲೆತಲಾಂತದಿಂದಲೂ ವಿರೋಧ ಪಕ್ಷದಲ್ಲೇ ಇರುತ್ತೆ; ಸಚಿವ ಎಂ ಬಿ ಪಾಟೀಲ್‌ ಹೇಳಿಕೆ

0

ಬೆಂಗಳೂರು; ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಇಟ್ಕೊಂಡ್ರೆ ಬಿಜೆಪಿ ತಲೆತಲಾಂತದಿಂದಲೂ ವಿರೋಧ ಪಕ್ಷದಲ್ಲೇ ಇರುತ್ತೆ ಎಂದು ಸಚಿವ ಎಂ ಬಿ ಪಾಟೀಲ್‌ ಲೇವಡಿ ಮಾಡಿದ್ದಾರೆ.

ಉಪಲೋಕಾಯುಕ್ತ ವೀರಪ್ಪ ವರದಿ ಆಧರಿಸಿ ಕಾಂಗ್ರೆಸ್ ಸರ್ಕಾರದಲ್ಲಿ ೬೩% ಭ್ರಷ್ಟಾಚಾರ ಎಂದು ಆರ್ ಅಶೋಕ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಉಪಲೋಕಾಯುಕ್ತ ಅವರು ವರದಿ ಕೊಟ್ಟಿರೋ ಪ್ರಕಾರ ೨೦೧೯ ರಲ್ಲಿ ಆಗಿದ್ದು. ಆರ್ ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಇಂತವ್ರನ್ನ ವಿರೋಧ ಪಕ್ಷದ ನಾಯಕರನ್ನಾಗಿ ಇಟ್ಕೊಂಡ್ರೆ ಬಿಜೆಪಿ ತಲೆತಲಾಂತದಿಂದಲೂ ವಿರೋಧ ಪಕ್ಷದಲ್ಲೇ ಇರುತ್ತೆ. ೨೦೧೯ ರಲ್ಲಿ ಆಗಿದ್ದು.. ಆದ್ರೆ ಈ ವರದಿ ಯಾವ ವರ್ಷದ್ದು ಅನ್ನೋದು ಗೊತ್ತಿಲ್ಲ. ಯಾಕಂದ್ರೆ ಆರ್ ಅಶೋಕ್ ಅವರು ಶ್ಯಾಡೋ ಸಿಎಂ ಇದ್ದಂತೆ. ಈಗ ಅವರು ೨೦೧೯ ರಲ್ಲಿ ಆಗಿದ್ದು ಆದ್ರೆ ಈಗ ಈ ಸರ್ಕಾರದ್ದು ಅಂತ ಹೇಳ್ತಾರೆ. ಇದನ್ನ ಚೆಕ್ ಮಾಡಬೇಕಲ್ವೇ ವಿರೋಧ ಪಕ್ಷದ ನಾಯಕರು. ಇಷ್ಟು ನಗೆಪಾಟಲಿಗೆ ಗುರಿಯಾಗುವಂತಹದ್ದು ಅಷ್ಟೇ. ಬಿಜೆಪಿ ಅವರಿಗೆ ಎಷ್ಟು ಬೇಗ ವಿರೋಧ ಪಕ್ಷದ ನಾಯಕರನ್ನ ಬದಲಾವಣೆ ಮಾಡುತ್ತೀರಿ ಅಷ್ಟು ಒಳ್ಳೆಯದು.ಇಲ್ಲದಿದ್ರೆ ಬಿಜೆಪಿ ಅವರು ಶಾಶ್ವತ ವಾಗಿ ವಿರೋಧ ಪಕ್ಷದಲ್ಲೇ ಉಳಿಯುತ್ತೀರಾ ಎಂದು ಎಚ್ಚರಿಸಿದ್ದಾರೆ.ಅಲ್ಲದೇ ಪರೋಕ್ಷವಾಗಿ ಅಶೋಕ್ ಅವರು ವಿರೋಧ ಪಕ್ಷದ ನಾಯಕ ಆಗಲು ಅನರ್ಹ ಎಂದು ಹೇಳಿದ್ದಾರೆ. ಅಲ್ಲದೇ ನೇರವಾಗಿಯೇ ವಿಪಕ್ಷ ನಾಯಕನನ್ನ ಬದಲಾಯಿಸುವಂತೆ ಎಂಬಿ ಪಾಟೀಲ್ ಸಲಹೆ ಕೊಟ್ಟಿದ್ದಾರೆ.

ಟೆಂಡರ್ ನಲ್ಲಿ ಅವ್ಯವಹಾರ ಆಗಿದೆ ಎಂಬ ಮಂಜು ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ನೋಡಿಲ್ಲ, ತಿಳಿದುಕೊಳ್ಳುತ್ತೇನೆ. ಅದಕ್ಕೆ ಸ್ಪಷ್ಟೀಕರಣ ಕೊಡುತ್ತೇವೆ. ಅವ್ಯವಹಾರ ಆಗಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ತಿಮಿಂಗಲು ಇದ್ದಾವೆ, ಅವೆಲ್ಲಾ ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಾರು ಆರೋಪ ಮಾಡಿದ್ದಾರೆ ಅನ್ನೋದನ್ನ ಹೇಳಿದ್ರೆ ಒದ್ದು ಒಳಗೆ ಹಾಕುತ್ತೇನೆ. ಏನಾದರೂ ಇದ್ರೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಬೇಜವಾಬ್ದಾರಿಯಂತೆ ಆರೋಪ ಮಾಡಿದ್ರೆ ಮಾನನಷ್ಟ ಕ್ರಮ ತೆಗೆದುಕೊಳ್ಳುತ್ತೇವೆ. ಯಾವ ರೀತಿ ಕೆಎಸ್ ಡಿಎಲ್ ಬೆಳೆಯುತ್ತಿದೆ ಅನ್ನೋದು ನಿಮಗೆ ಗೊತ್ತು. ಟೆಂಡರ್ ನಲ್ಲಿ ಅವ್ಯವಹಾರ ಆಗಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಆರೋಪಕ್ಕೆ ನಾನು ಉತ್ತರ ಕೊಡುತ್ತೇವೆ. ಎಂಡಿ ಇದ್ದಾರೆ, ಎಂಡಿ ಕಡೆಯಿಂದ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ರಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಇಂಡಸ್ಟ್ರಿ ಡಿಪಾರ್ಟ್ಮೆಂಟ್ ಕುರಿತು ಚರ್ಚೆ ಮಾಡಿದ್ದೇವೆ.ಇದು ನಮ್ಮ ಬೀಲ್ಡಿಂಗ್ , ಇದು ರಾಜಕೀಯ ಚರ್ಚೆ ಗೆ ಮಾಡಿಲ್ಲ.ರಾಜಕೀಯ ಮಾಡೋದಾದ್ರೆ ಸಿಎಂ ಮನೆ ಇದೆ, ಡಿಸಿಎಂ ಮತ್ತು ನಮ್ಮ ಮನೆ ಇಡಿ. ಡಿಕೆ ಶಿವಕುಮಾರ್ ಅವರು ಇಲ್ಲಿ ಯಾಕೆ ಬಂದಿದ್ದಾರೆ ಅನ್ನೋದು ನಿಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಸಿಎಂ ಆಗಲು ಸಹಕಾರ ನೀಡಿ ಎಂದು ಡಿಕೆ ಶಿವಕುಮಾರ್ ನಿಮ್ಮನ್ನ ಕೇಳಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೇಳಿದ್ದಾರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ ಎಂ ಬಿ ಪಾಟೀಲ್. ನಮ್ಮ ಎಂಡಿ ಕೂಡ ಇದ್ದಾರೆ, ಅವರ ಮುಂದೆ ಮಾತಾಡೋಕೆ ಆಗುತ್ತಾ?. ಇಲಾಖೆಗೆ ಸಂಬಂಧಿಸಿದಂತೆ ಚರ್ಚೆ ಆಗಿದೆ ಅಷ್ಟೇ. ರಾಜಕಾರಣ ಮಾತಾಡುತ್ತೇವೆ, ಕೆಪಿಸಿಸಿ ಕಚೇರಿ ಅಥವಾ ಬೇರೆ ಕಡೆ ಮಾತಾಡುತ್ತೇವೆ. ಇಲ್ಲಿ ರಾಜಕೀಯ ಮಾಡೋಕೆ ಆಗುತ್ತಾ? ಎಂದಿದ್ದಾರೆ.

ಕೆ ಆರ್ ಪೇಟೆ ಶಾಸಕ ಮಂಜು ಕಿಕ್ ಬ್ಯಾಕ್ ಆರೋಪಕ್ಕೆ ಸಿಟ್ಟಾದ ಸಚಿವ ಎಂಬಿ ಪಾಟೀಲ್  ಮಂಜುರವರ ಆರೋಪವನ್ನು ತಿಳಿದು ಅದಕ್ಕೆ ಸ್ಪಷ್ಟೀಕರಣ ಕೊಡ್ತೀವಿ. KSDIL ನಲ್ಲಿ ಏನಾದರೂ ಅವ್ಯವಹಾರ ಆಗಿದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮ ತಗೊಳ್ತೇವೆ.ಇದು ಮಾಡಾಳ್ ವಿರೂಪಾಕ್ಷ ನವರ ಸರ್ಕಾರ ಅಲ್ಲ, ಇದು ನಮ್ಮ ಸರ್ಕಾರ. ಅದಕ್ಕೆ ಸಿಎಸ್ ನಾಡಗೌಡ್ರು ಅಧ್ಯಕ್ಷರಾಗಿದ್ದಾರೆ. KSDIL ಯಾವ ರೀತಿ ಬೆಳೆದಿದೆ ಎಂದು ಗೊತ್ತಿದೆ. ಅದನ್ನು ಹಾಳು ಮಾಡಬೇಕೆಂದು ಕೆಲವರು ಪ್ರಯತ್ನ ಮಾಡಿದ್ದಾರೆ. ಕಿಕ್ ಬ್ಯಾಕ್ ಅಂತಾ ಸಚಿವರ ಹೆಸರು ತಗೊಂಡು ಹೇಳಿದ್ರೆ ಅವನನ್ನು ಒದ್ದು ಒಳಗೆ ಹಾಕ್ತೀನಿ. ಅಲ್ಲಿ ಎಂಡಿ ಇರುತ್ತಾರೆ, ಏನೇ ಆದರೂ ಅವ್ರು ನಿರ್ಧಾರ ತಗೊಳ್ತಾರೆ. ಸಚಿವರು ತನಕ ಏನು ಬರೋದಿಲ್ಲ. ಏನಾದರೂ ಇದ್ದರೆ ಅದಕ್ಕೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಆದರೆ ಸುಖಾ ಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ಅವರು ಆರೋಪಕ್ಕೂ ತಕ್ಕ ಉತ್ತರ ಕೊಡುತ್ತೇವೆ. ಸುಳ್ಳು ಆಪಾದನೆ ಮಾಡಿದ್ರೆ ಅವನ ವಿರುದ್ಧ ಮಾನನಷ್ಟ ಮೊಕದ್ದಮೆ, ಹಾಗೂ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಅವರ ಆರೋಪದಲ್ಲಿ ಸತ್ಯ ಇದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತಗೊಳ್ತೇವೆ. ಯಾರೇ ಅಧಿಕಾರಿಗಳು ಇರಬಹುದು, ಸುಡುಗಾಡು ಇರಬಹುದು. ಆದರೆ ಸುಮ್ಮ ಸುಮ್ಮನೆ ಆರೋಪ ಮಾಡಿದ್ರೆ ಯಾವುದೋ ಕಾರಣಕ್ಕೂ ಬಿಡುವುದಿಲ್ಲ. ಅವರ ಆರೋಪಕ್ಕೆ ನಾಳೆ ನಾಡಿದ್ದು ಎಂಡಿಯಿಂದಲೇ ಉತ್ತರ  ಕೊಡಿಸುತ್ತೇವೆ ಅಂದಿದ್ದಾರೆ.

ಡಿಸಿಎಂ ಡಿಕೆಶಿ ಜೊತೆಗೆ ಸಚಿವ ಎಂಬಿ ಪಾಟೀಲ್ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಇಂಡಸ್ಟ್ರೀಸ್ ಬಗ್ಗೆ ಅಷ್ಟೇ ಚರ್ಚೆ ಮಾಡಿದ್ದೇವೆ. ಇದು KIADB ಬಿಲ್ಡಿಂಗ್‌, ಇಲ್ಲಿ ರಾಜಕಾರಣ ಚರ್ಚೆ ಮಾಡೋಕೆ ಆಗುತ್ತಾ..?. ರಾಜಕಾರಣ ಮಾತಾಡ್ತೀವಿ ಅಂದರೆ, ಕೆಪಿಸಿಸಿಯಲ್ಲಿ ಮಾತಾಡ್ತೀವಿ, ಸಿದ್ದರಾಮಯ್ಯ ಮನೆಯಲ್ಲಿ ಮಾತಾಡ್ತೀವಿ, ಡಿಕೆ ಶಿವಕುಮಾರ್ ಮನೆಯಲ್ಲಿ ಮಾತಾಡ್ತೀವಿ. ಸತೀಶ್ ಜಾರಕಿಹೊಳಿ ಜೊತೆ ಡಿಸಿಎಂ ಡಿಕೆಶಿ ಭೇಟಿ ತಪ್ಪೇನಿದೆ.?. ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಒಬ್ಬ ಸೀನಿಯರ್ ಲೀಡರ್. ಅವರ ಜೊತೆ ಚರ್ಚೆ ಮಾಡದೇ ಬೇರೆಯವರ ಜೊತೆ ಚರ್ಚೆ ಮಾಡೋಕೆ ಆಗುತ್ತಾ..?. ಎಂದಿದ್ದಾರೆ.