ಮನೆ Latest News ನಂದಿನಿ ಹಾಲನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು

ನಂದಿನಿ ಹಾಲನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು

0

ಬೆಂಗಳೂರು: ನಂದಿನಿ ಹಾಲನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲಾಗುವುದು ಕೆಎಂಎಫ್ ಎಚ್ಚರಿಕೆ ನೀಡಿದೆ.

ಎರಡು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಏರಿಕೆ ಮಾಡಿ ಕೆಎಂಎಫ್ ಆದೇಶ ಮಾಡಿತ್ತು .ಅದರ ಬೆನ್ನಲ್ಲೇ ಬೆಲೆ ಏರಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಏರಿಕೆಯಾಗಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ನಂದಿನಿ ಹಾಲನ್ನು ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಕೆಎಂಎಫ್ ಎಚ್ಚರಿಸಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಹಾಲನ್ನು ಮಾರಾಟ ಮಾಡಲಾಗುತ್ತದೆ ಎಂಬ ಆರೋಪ ಬಂದ ಹಿನ್ನೆಲೆ ಕೆಎಂಎಫ್ ಈ ಎಚ್ಚರಿಕೆ ನೀಡಿದೆ.

ನಂದಿನಿ ಹಾಲಿನ ಬೆಲೆ ಏರಿಕೆ

ಇನ್ನು ಮೊನ್ನೆ ಪ್ರತಿ ಲೀಟರ್ ಹಾಲಿನ ದರವನ್ನು 2.10 ರೂ ಏರಿಕೆ ಮಾಡಿ ಕೆಎಂಎಫ್ ಆದೇಶ ಹೊರಡಿಸಿತ್ತು.ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾಹಿತಿ ನೀಡಿದ್ದರು.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸಾವಿರ ಎಂಎಲ್ ಹಾಲಿನ ೨.೧೦ ಪೈಸೆ ದರ ಹೆಚ್ಚಳವಾಗಿದೆ. ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿದಿನ ರಾಜ್ಯದಲ್ಲಿ ೯೮ ಲಕ್ಷ ೧೭ಸಾವಿರ ಲೀ ಸಂಗ್ರಹವಾಗ್ತಿದೆ. ಸದ್ಯದಲ್ಲೇ  ಒಂದು ಕೋಟಿ ಲೀಟರ್ ಸಂಗ್ರಹ ಗುರಿ ಮುಟ್ಟಲಿದ್ದೇವೆ ಎಂದ್ರು.

ಇನ್ನು ರಾಜ್ಯ ಈ ರೀತಿ ದಾಖಲೆ ನಿರ್ಮಿಸೋದಕ್ಕೆ  ರಾಜ್ಯದ ೨೭ ಲಕ್ಷ ಹಾಲು ಉತ್ಪಾದಕರು ಕಾರಣ. ಸದ್ಯ  ಶೇಖರಣೆಯಲ್ಲಿ ೩೦ ಲಕ್ಷ ಲೀಟರ್ ಹಾಲನ್ನು ಪೌಡರ್ ಗೆ ಕಳುಹಿಸುತ್ತಿದ್ದೇವೆ.ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ ಎಂದಿದ್ದಾರೆ. ೨೭ ಲಕ್ಷ ಹಾಲು ಉತ್ಪಾದಕರು ಹಾಗೂ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ಇದೆಲ್ಲಾ ಮಾಡುತ್ತಿದ್ದೇವೆ. ಇಬ್ಬರು ಕೂಡ ನಮಗೆ ಎರಡು ಕಣ್ಣು ಇದ್ದ ಹಾಗೇ. ಸದ್ಯ ಲೀಟರ್ ಗೆ ದ್ಯ ಗ್ರಾಹಕರಿಗೆ ೪೨ ರೂ ಇದೆ. ಆದರೆ ನಾಳೆಯಿಂದ 44 ರೂಪಾಯಿ ಆಗಲಿದೆ . ಆದರೆ  ಪ್ರತೀ ಹಾಲಿನ ಪ್ಯಾಕೆಟ್ ನಲ್ಲೂ 50ml ಜಾಸ್ತಿ ಹಾಲು ಇರಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ  ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲೂ 550 ml ಇರಲಿದೆ ಎಂದು ಅವರು ಇದೆ ವೇಳೆ ತಿಳಿಸಿದ್ದರು.

ಪರಿಷ್ಕೃತ ಹಾಲಿನ ದರ ಹೀಗಿದೆ..

ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ

ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ

ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ

ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ

ಶುಭಂ ಹಾಲು 48ರಿಂದ 50 ರೂ

ಸಮೃದ್ದಿ ಹಾಲು 51ರಿಂದ 53ರೂ

ಶುಭಂ (ಟೋನ್ಡ್ ಹಾಲು) 49ರಿಂದ 51ರೂ

ಸಂತೃಪ್ತಿ ಹಾಲು 55 ರಿಂದ 57 ರೂ

ಶುಭಂ ಗೋಲ್ಡ್ ಹಾಲು 49ರಿಂದ 51ರೂ

ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ