ಬೆಂಗಳೂರು; ಬಿಜೆಪಿಯವರಿಗೆ ಧರ್ಮದ ಮೇಲೆ ಅವರಿಗೆ ನಂಬಿಕೆ ಇದ್ರೆ ಅವರು ಅವರ ಮಕ್ಕಳನ್ನ ಮುಂದೆ ಬಿಟ್ಟು ಹೋರಾಟ ಮಾಡಲಿ ಎಂದು CWC ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಕರಾವಳಿ ಭಾಗವನ್ನು ಬಿಜೆಪಿ ಹಿಂದುತ್ವದ ಪ್ರಯೋಗಶಾಲೆ ಮಾಡಿಕೊಂಡಿತ್ತು. ಆದ್ರೆ ಸಿಎಂ ಕರಾವಳಿಗೆ ದಿಟ್ಟ ಅಧಿಕಾರಿಗಳನ್ನ ನೇಮಕ ಮಾಡಿದ ಬಳಿಕ ಕೋಮುಗಲಭೆ ಜೀರೋಗೆ ಬಂದಿದೆ. ಕರಾವಳಿಯಲ್ಲಿ ಯಾರು ಸಹ ಪ್ರಚೋದನಕಾರಿ ಹೇಳಿಕೆ ದ್ವೇಷ ಭಾಷಣ ಮಾಡುತ್ತಿಲ್ಲ.ಈಗ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹೀಗಾಗಿ ಕರಾವಳಿ ಭಾಗದಿಂದ ಮೈಸೂರು ಭಾಗದ ಕಡೆ ಬಂದಿದ್ದಾರೆ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಧರ್ಮಾಧಾರಿತ ರಾಜಕಾರಣ ಮಾಡುತ್ತಿದ್ದಾರೆ. ಧರ್ಮದ ಮೇಲೆ ಅವರಿಗೆ ನಂಬಿಕೆ ಇದ್ರೆ ಅವರು ಅವರ ಮಕ್ಕಳನ್ನ ಮುಂದೆ ಬಿಟ್ಟು ಹೋರಾಟ ಮಾಡಲಿ. ಬೇರೆಯವರ ಮಕ್ಕಳನ್ನ ಬಾವಿಗೆ ತಳ್ಳಿ ಧರ್ಮಧಾರಿತ ರಾಜಕಾರಣ ಮಾಡುವುದು ಸರಿಯಲ್ಲ ಎಂದಿದ್ದಾರೆ
ಬಿಜೆಪಿಯವರು ಕರಾವಳಿಯಲ್ಲಿ ನಿರುದ್ಯೋಗಿಗಳಾಗಿದ್ದಾರೆ.ಹೀಗಾಗಿ ಮೈಸೂರು ಭಾಗಕ್ಕೆ ಬಂದಿದ್ದಾರೆ.ಹಣ ಕೊಟ್ಟು ಹೋರಾಟಕ್ಕೆ ಕರೆಯಿಸಿದ ಬಗ್ಗೆ ಮಹಿಳೆಯರೊಬ್ಬರು ಹೇಳಿದ್ದಾರೆ. ಶೂದ್ರರನ್ನು ಹಿಂದುಳಿದವರನ್ನು ಹೋರಾಟಕ್ಕೆ ಮುಂದೆ ಬಿಡ್ತಾರೆ.ಹಣ & ಹೆಂಡ ಕೊಟ್ಟು ಧರ್ಮವನ್ನ ಪಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತೆ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ದ ಕೇಸ್ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಆದ ಪರಿಸ್ಥಿತಿ ರಾಜ್ಯಕ್ಕೆ ಬರುತ್ತದೆ ಎಂದು ಯತ್ನಾಳ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನೇಪಾಳ ಪರಿಸ್ಥಿತಿ ರಾಜ್ಯಕ್ಕಲ್ಲ. ಕೇಂದ್ರ ಸರ್ಕಾರಕ್ಕೆ ಬರಬಹುದು. ಸುಳ್ಳು ಹೇಳತಾರೆ ಆದ್ರೆ ಮೀತಿ ಇರಬೇಕು . ನೇಪಾಳ, ಪಾಕಿಸ್ತಾನ ಮಾಲ್ಡೀವ್ ನ ಪರಿಸ್ಥಿತಿ ಕೇಂದ್ರ ಸರ್ಕಾರದ ವಿರುದ್ದವೂ ಬರಬಹುದು. ಯತ್ನಾಳ ಒಳ್ಳೆಯ ಭವಿಷ್ಯಕಾರರು ಜೋತಿಷ್ಯ ಹೇಳುತ್ತಿದ್ದಾರೆ.ಮೋದಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ.GST ಇಂದ ಜನಸಾಮಾನ್ಯರಿಗೆ ಲಾಭ ಇಲ್ಲ ಎಂದು ಹೇಳಿದ್ದಾರೆ.
ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಮಹಾರಾಷ್ಟ್ರ ಸಿಎಂ ಶಿವಾಜಿಗೆ ಮಾಡಿದಷ್ಟು ಅಪಮಾನ ಬೇರೆ ಯಾರು ಮಾಡಿಲ್ಲ. ಅವರು ಮಹಾರಾಷ್ಟ್ರ ನೋಡಿಕೊಳ್ಳಲಿ. ರಾಜ್ಯದ ವಿಚಾರ ಅವರಿಗೆ ಬೇಡ. ಶಿವಾಜಿನಗರದ ಚರ್ಚ್ ಶಿವಾಜಿಯಷ್ಟೇ ಹಳೆಯದು. ಹೀಗಾಗಿ ಚರ್ಚ್ ಹೆಸರನ್ನು ಮೆಟ್ರೋ ಸ್ಟೇಷನ್ ಗೆ ಇಡುವುದರಲ್ಲಿ ತಪ್ಪೇನಿಲ್ಲ ಎಂದ ಅವರು ಬ್ಯಾಲೆಟ್ ಪೇಪರ್ ವಿಚಾರದ ಬಗ್ಗೆ ಮಾತನಾಡಿ ಸ್ಥಳೀಯ ಸಂಸ್ಥೆ ಚುನಾವಣೆ ನಡಿಸೋ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಸಂಪೂರ್ಣವಾಗಿ ರಾಜ್ಯ ಸರ್ಕಾರ ನಿರ್ಧಾರ ತಗೆದುಕೊಳಲಿ.ಕೆಳಮಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ, EVM ಎಷ್ಟು ಸರಿ ನಡೆಸೋಕೆ ಆಗುತ್ತೋ ಇಲ್ಲವೋ ಅದು ಬೇರೆ ಪ್ರಶ್ನೆನೇ .ಬ್ಯಾಲೆಟ್ ಪೇಪರ್ ನಿಂದ ನಿಷ್ಪಕ್ಷಪತವಾದ ಚುನಾವಣೆ ನಡಿಯತ್ತೆ ಅಂತ ತೋರಿಸಿಕೊಡುತ್ತೇವೆ ಇಡಿ ರಾಷ್ಟ್ರಕ್ಕೆ . ಯಾಕೆಂದರೆ ಎಲ್ಲ ರಾಜ್ಯದಲ್ಲೂ ವೋಟ್ ಚೋರಿ ನಾವೂ ನೋಡಿದೀವಿ . ಬಿಹಾರ್ ನಲ್ಲಿ ಅಯ್ತು, ಹರಿಯಾಣದಲ್ಲೂ ಇದೆ .ಮೋದಿ ನಿಲ್ಲುವ ಬನಾರಸ್ ನಲ್ಲಿ ಕೂಡ ಮಾಡಿದ್ದಾರೆ, ನಮ್ಮ ಪ್ರದೇಶ ಕಮಿಟ್ಟಿ KPCC ಅಧ್ಯಕ್ಷರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ .ಬ್ಯಾಲೆಟ್ ಪೇಪರ್ ಬಂದಿರೋದು ಸ್ವಾಗತಕರ .ಬಿಜೆಪಿ ಅವರಿಗೆ ನಡುಕ ಹುಟ್ಟಿದೆ ಎಂದರು.











