ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ಹೆಚ್ ಡಿ ರೇವಣ್ಣ ಸೇರಿದಂತೆ ಇಬ್ಬರು ಮಕ್ಕಳು ಜೈಲುಪಾಲಾಗುವಂತಾಯಿತು. ಮಗ ಮಾಡಿದ ತಪ್ಪಿಗೆ ರೇವಣ್ಣ ಕೂಡ ಕಂಬಿ ಎಣಿಸುವಂತಾಯಿತು. ಇದೀಗ ಇಬ್ಬರೂ ಮಕ್ಕಳು ಜೈಲು ಸೇರಿದ್ದು ರೇವಣ್ಣ ಅವರ ಪರಿಸ್ಥಿತಿ ಹೇಳ ತೀರದಂತಾಗಿದೆ. ಇದರ ಮಧ್ಯೆ ರೇವಣ್ಣ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಇದೀಗ ಮಾಜಿ ಸಚಿವ ರೇವಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರಿಸಲಿದೆ ಎಂದು ಅವರು ತಿಳಿಸಿದ್ದಾರೆ.ಅಲ್ಲದೇ ನಾನು ಮಕ್ಕಳಾದ ಸೂರಜ್ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಪ್ರಕರಣಗಳ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಎರಡೂ ಪ್ರಕರಣಗಳು ಕೋರ್ಟ್ ನಲ್ಲಿವೆ. ನನಗೆ ಕಾನೂನು, ನ್ಯಾಯಾಂಗ ಹಾಗೂ ದೇವರ ಮೇಲೆ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಪ್ರೀತಂ ಗೌಡ ಷಡ್ಯಂತ್ರದ ಬಗ್ಗೆಯೂ ನಾನು ಮಾತನಾಡಲ್ಲ ಎಂದು ಇದೇ ವೇಳೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ಪ್ರೀತಂ ಗೌಡ ವಿರುದ್ದ ಎಫ್ ಐ ಆರ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅವರೆಲ್ಲಾ ದೊಡ್ಡವರು ಇದ್ದಾರೆ.ಅವರ ಬಗ್ಗೆ ಮಾತಾಡೋದಿಲ್ಲ.ನಾನು ಈಗ ಕೋರ್ಟ್ ವಿಷ್ಯ ಮಾತನಾಡಲ್ಲ. ಕೋರ್ಟ್ ನಲ್ಲಿ ಪ್ರಕರಣ ಇರುವಾಗ ನಾನು ಮಾತಾಡೋದಿಲ್ಲ.ನ್ಯಾಯಾಂಗ ಏನ್ ತೀರ್ಪು ಕೊಡುತ್ತೋ ಅದಕ್ಕೆ ಗೌರವ ನೀಡುತ್ತೇನೆ. ಅದರ ಬಗ್ಗೆ ಹೆಚ್ಚು ಮಾತಾಡೋದಿಲ್ಲ ಎಂದಿದ್ದಾರೆ.
ಇದೇ ವೇಳೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ರಿಯ್ಯಾಕ್ಟ್ ಮಾಡಿದ ಅವರು ಅದು ನನಗೆ ಗೊತ್ತಿಲ್ಲ. ದೊಡ್ಡವರ ವಿಷಯ ನನಗೆ ಗೊತ್ತಿಲ್ಲ. ಚಂದ್ರಶೇಖರ ಸ್ವಾಮೀಜಿಯನ್ನ ನಾನು ಕಣ್ಣಾರೆ ನೋಡಿದ್ದೇನೆ. ಅವರು ಯಾವ ಮಟ್ಟಕ್ಕೆ ಇದ್ರು ಅಂತಾ.ಮಾಜಿ ಪ್ರಧಾನಿ ದೇವೇಗೌಡ್ರು ಅವರಿಗೆ ಯಾವ ರೀತಿ ಸಹಾಯ ಮಾಡಿದ್ರು ಅನ್ನೋದು ಗೊತ್ತಿದೆ.ದೇವೇಗೌಡ್ರು ಬಗ್ಗೆ ರಾಜಣ್ಣ ಮಾತನಾಡಿದಾಗ ಎಲ್ಲೋಗಿದ್ರು..? ವೈಯುಕ್ತಿಕವಾಗಿ ಹೇಳಿದಾಗ ಮಾತಾಡಬಹುದಿತ್ತು. ಕರ್ಟಸಿಗಾದ್ರು ದೇವೇಗೌಡರ ಬಗ್ಗೆ ಸ್ವಾಮೀಜಿ ಮಾತಾಡಿದ್ರಾ?.ಚಂದ್ರಶೇಖರ ಸ್ವಾಮೀಜಿ ಅವರ ಮಠಕ್ಕೆ ದೇವೇಗೌಡ್ರು ಎಷ್ಟು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಯಾರನ್ನಾದ್ರು ಸಿಎಂ ಮಾಡಿಕೊಳ್ಳಿ ಅದು ನಮಗೆ ಗೊತ್ತಿಲ್ಲ.ದೇವೇಗೌಡ್ರ ಪರ ಮಾತಾಡಿ ಅಂತಾ ಹೇಳಲ್ಲ.ಒಬ್ಬ ಸಮಾಜದ ಮುಖಂಡರ ಬಗ್ಗೆ ಮಾತಾಡಿದಾಗ ಅವರ ಪರ ಮಾತಾಡಲಿಲ್ವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಡಿಕೆಶಿ ಸಿಎಂ ಆಗಬೇಕು ಎಂಬ ವಿಚಾರ ಅವರ ರಾಷ್ಟ್ರೀಯ ಪಕ್ಷಕ್ಕೆ ಸೇರಿದ್ದು. ಅವರು ಯಾರನ್ನಾದ್ರೂ ಸಿಎಂ ಮಾಡಿಕೊಳ್ಳಿ.ಸಿಎಂ ಹುದ್ದೆ ನಮ್ಮ ಹತ್ತಿರ ಇಲ್ಲಾ.ಅದು ಕಾಂಗ್ರೆಸ್ ಬಳಿ ಇದೆ ಅದೆಲ್ಲ ದೊಡ್ಡವರ ವಿಷಯವಾಗಿದೆ ಎಂದಿದ್ದಾರೆ..