ಮೈಸೂರು : ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಿ ನ್ಯಾಯಾಂಗ ಬಂಧನ ಹಿನ್ನೆಲೆ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಸೂರಜ್ ರೇವಣ್ಣ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣ ಅವರನ್ನು ತಾಯಿ ಭವಾನಿ ರೇವಣ್ಣ ಅವರು ಜೈಲಿನಲ್ಲಿ ಭೇಟಿಯಾಗಿರುವ ಬಗ್ಗೆ ಹೆಚ್ ಡಿ ರೇವಣ್ಣ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದ ಹೊಳೆನರಸೀಪುರದಲ್ಲಿ ಪ್ರತಿಕ್ರಿಯಿಸಿದ ಅವರು ನಾನು ಪ್ರಜ್ವಲ್ ಭೇಟಿಗೆ ಜೈಲಿಗೆ ಹೋಗಲ್ಲ ಎಂದಿದ್ದಾರೆ.
ಭವಾನಿ ರೇವಣ್ಣ ಪ್ರಜ್ವರ್ ರೇವಣ್ಣ ಅವರ ತಾಯಿಯಾಗಿ ಮಗನನ್ನು ನೋಡಲು ಹೋಗಿದ್ದಾರೆ. ತಾಯಿ ಆಗಿ ಅದು ಅವರ ಕರ್ತವ್ಯ. ಆದರೆ ನಾನು ಜೈಲಿಗೆ ಹೋಗೋದಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಅಲ್ಲದೇ ಭವಾನಿ ರೇವಣ್ಣ ಪ್ರಜ್ವಲ್ ರೇವಣ್ಣ ಅವರ ಬಳಿ ಏನು ಮಾತನಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಮಾತ್ರ ಹೋಗಲ್ಲ. ಹೋದರೆ ನಾನು ಪ್ರಜ್ವಲ್ ಗೆ ಏನೋ ಹೇಳಿ ಕೊಡಲು ಹೋಗಿದ್ದೇನೆ ಅನ್ನೋ ಅರ್ಥ ಹುಟ್ಟಿಕೊಳ್ಳುತ್ತೆ. ಹಾಗಾಗಿ ನಾನು ಹೋಗಲ್ಲ ಎಂದಿದ್ದಾರೆ.
ಇನ್ನು ನಮ್ಮ ಕುಟುಂಬದ ಮೇಲಿರುವ ಕೇಸ್ಗಳ ವಿಚಾರಣೆ ಕೋರ್ಟ್ನಲ್ಲಿದೆ. ಪ್ರಕರಣಗಳು ಕೋರ್ಟ್ನಲ್ಲಿ ಇರುವಾಗ ನಾನು ಮಾತನಾಡುವುದು ಸರಿಯಲ್ಲ. ಹಾಗಾಗಿ ನಾನು ಈಗ ಏನೂ ಮಾತನಾಡಲ್ಲ. ನನಗೆ ದೇವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ರೇವಣ್ಣ ಹೇಳಿದ್ದಾರೆ.ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರ ಬರುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.
ಮೊನ್ನೆ ಪ್ರಜ್ವಲ್ ರೇವಣ್ಣ ಅವರು ಎಸ್ ಐಟಿ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ರೇವಣ್ಣ ಅವರು ಎಸ್ ಐಟಿ ಕಚೇರಿಗೆ ತೆರಳಿ ಮನೆಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ಊಟ ಹಾಗೂ ಬಟ್ಟೆಯನ್ನು ಕೊಟ್ಟು ಬಂದಿದ್ದರು. ಅಂದು ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿದ ರೇವಣ್ಣ ಹಿಂದೆ ಬಾಗಿಲಿನಿಂದಲೇ ಬಟ್ಟೆ ನೀಡಿ ತೆರಳಿದ್ದರು. ಇಬ್ಬರೂ ಮಕ್ಕಳು ಕೂಡ ಅರೆಸ್ಟ್ ಆಗಿರೋದು ರೇವಣ್ಣ ಅವರಿಗೆ ಅರಗಿಸಿಕೊಳ್ಳಲಾಗದ ನೋವು ನೀಡಿದೆ.