ಬೆಂಗಳೂರು: ನಾನು ಸದ್ಯಕ್ಕೆ ದೆಹಲಿಗೆ ಹೋಗೋದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಕಬ್ಬು ದರ ನಿಗದಿ ಮಾಡೋದು, FRP ನಿಗದಿ ಮಾಡೋದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ 2024-25 ಮತ್ತು 2025-26ಕ್ಕೆ FRP, ದರ ನಿಗದಿ ಮಾಡಿದೆ. 3550 ರೂಪಾಯಿ ಕೇಂದ್ರ ನಿಗದಿ ಮಾಡಿದೆ. ಈಗ ನಮ್ಮ ರೈತರು ಹೆಚ್ಚು ಮಾಡಿಕೊಡಿ ಅಂತ ಕೇಳ್ತಿದ್ದಾರೆ. ಕಾರ್ಖಾನೆ ಅವರು ಜಾಸ್ತಿ ಕೊಡಬೇಕು. ಇಲ್ಲ ಸರ್ಕಾರ ಕೊಡಬೇಕು. ನಾವು ಹೇಳಿದ್ವಿ ಸರ್ಕಾರ ಕೊಡಲು ಬರೊಲ್ಲ ಅಂತ. ಆದರೂ ಕೂಡಾ ನಮ್ಮ ರೈತರ ಹಿತದೃಷ್ಟಿಯಿಂದ 50 ರೂ ಪ್ರತಿ ಟನ್ ಗೆ ಜಾಸ್ತಿ ಮಾಡ್ತೀವಿ ಅಂತ ಸಿಎಂ ಘೋಷಣೆ ಮಾಡಿದ್ದಾರೆ. 50 ರೂಪಾಯಿ ಮಾಲೀಕರು ಕೊಡಬೇಕು ಅಂತ ಆಗಿದೆ. ಅದಕ್ಕೆ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ 3300 ರೂಪಾಯಿ ಆಗುತ್ತದೆ. ಇದಲ್ಲದೆ ಜಾಸ್ತಿ ಮಾಡಿಕೊಡಿ ಅಂತ ಕೇಂದ್ರಕ್ಕೆ ಮನವಿ ಮಾಡ್ತಾರೆ.ಬೇರೆ ರಾಜ್ಯದಲ್ಲಿ ಶುಗರ್ ರಿಕವರಿ ದರದ ಮೇಲೆ ಮಾಡಿದ್ದಾರೆ. ಅದನ್ನ ಮಾಡಿಕೊಡಿ ಅಂತ ಪ್ರಧಾನಿಗಳನ್ನೇ ಕೇಳಬೇಕು.ಅದಕ್ಕೆ ಸಿಎಂ ಸಮಯ ಕೇಳಿದ್ರು. ಅದಕ್ಕೆ ಪಿಎಂ ಅವರು ಸಮಯ ಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡ್ತಾರೆ. ಕಬ್ಬು ಜೊತೆಗೆ ನೀರಾವರಿ, ಸುಪ್ರೀಂಕೋರ್ಟ್ ನಲ್ಲಿ ಮೇಕೆದಾಟಿಗೆ ಅನುಮತಿ ಕೊಟ್ಟಿದ್ದಾರೆ. ಅದರ ಬಗ್ಗೆಯೂ ಚರ್ಚೆ ಮಾಡಬಹುದು ಎಂದಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಸಂಪುಟ ಪುನರ್ ರಚನೆ ಬಗ್ಗೆ ಸಿಎಂ ಅವರನ್ನ ಕೇಳಿದ್ರೆ ಗೊತ್ತಾಗುತ್ತದೆ. ಸಿಎಂ ದೆಹಲಿಗೆ ಹೋಗಿದ್ದು ಗೊತ್ತು. ಹೋಗೋವಾಗ ನಾನು ಹೋಗಿ ಭೇಟಿಯಾಗಿ ಬಂದಿದ್ದೆ. ಹೋಗಿದ್ದು ಗೊತ್ತು ಆದ್ರೆ ಹೈಕಮಾಂಡ್ ಬಳಿ ಏನು ವಿದ್ಯಮಾನಗಳು, ಯಾರನ್ನ ಭೇಟಿ ಮಾಡಿದ್ರು ಅವೆಲ್ಲ ನನಗೆ ಗೊತ್ತಿಲ್ಲ. ಸಿಎಂ ಅವರನ್ನು ಕೇಳಿದ್ರೆ ಎಲ್ಲವನ್ನು ಹೇಳ್ತಾರೆ.15 ಜನರಿಗೆ ಅವಕಾಶ ಕೊಡೋ ವಿಚಾರ ಸಿಎಂ ಅವರೇ ಹೇಳಬೇಕು.ಸಂಪುಟ ಪುನರ್ ರಚನೆ ಮಾಡೋದು ಅಧಿಕಾರ ಸಿಎಂ ಮತ್ತು ಹೈಕಮಾಂಡ್ ಇದೆ. ನಾನು ಕೂಡಾ ಪೇಪರ್ ನಲ್ಲಿ ಓದಿದೆ ಸಂಪುಟ ಪುನರ್ ರಚನೆಗೆ ಅನುಮತಿ ಕೊಟ್ಟಿದ್ದಾರೆ ಅಂತಾ.ಅಷ್ಟು ಬಿಟ್ಟರೆ ನನಗೆ ಬೇರೇನು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ಜೊತೆ ಮಾತುಕತೆ ಆಗ್ತಿದೆ ಎಂಬ ಡಿಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಸಿಎಂ ಡಿಕೆಶಿವಕುಮಾರ್ ಹೇಳಿದ ಮೇಲೆ ಸರಿಯಾಯ್ತು ಅಲ್ಲವಾ. ಸಂಪುಟ ಪುನರ್ ರಚನೆ ಬಹಳ ದಿನದ ಬೇಡಿಕೆ. ಬಹಳ ಜನ ಮಂತ್ರಿಗಳು ಆಗಬೇಕು ಅಂತ ಅಪೇಕ್ಷೆ ಪಡುತ್ತಿದ್ದರು.ಈಗ ಅನುಮತಿ ಸಿಕ್ಕಿದೆ ಅಂತ ಆದರೆ ಸಿಎಂ ಅವರು ಮತ್ತು ಹೈಕಮಾಂಡ್ ಮಾಡುತ್ತಾರೆ. ಅದರಲ್ಲಿ ದೊಡ್ಡ ವಿಚಾರ ಏನು ಇಲ್ಲ ಎಂದಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಪುನರ್ ರಚನೆಗೆ ಹೈಕಮಾಂಡ್ ಅನುಮತಿ ಕೊಟ್ಟಿದ್ದಾರೆ ಅಂದರೆ ನಾಯಕತ್ವ ಬದಲಾವಣೆ ಇಲ್ಲ ಅಂತ ಅರ್ಥ. ಪುನರ್ ರಚನೆ ಅಂದಾಗ ನಾರ್ಮಲಿ ನಾಯಕತ್ವ ಬದಲಾವಣೆ ಆಗಲ್ಲ. ಸಂಪುಟ ಪುನರ್ ರಚನೆಗೆ ಒಪ್ಪಿಗೆ ಆಗಿದ್ದರೆ ನಾಯಕತ್ವ ಬದಲಾವಣೆ ಇಲ್ಲ ಅಂತ ಅರ್ಥ. ಅದೆಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡ್ತಾರೆ. ಸಮಯ, ಸಂಧರ್ಭ ನೋಡಿಕೊಂಡು ಹೈಕಮಾಂಡ್ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.











