ಮನೆ Latest News ಬೆಂಗಳೂರು: ನಾನು ಕೇಂದ್ರ ರಾಜಕೀಯಕ್ಕೆ ಹೋಗೋದಿಲ್ಲ‌; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ನಾನು ಕೇಂದ್ರ ರಾಜಕೀಯಕ್ಕೆ ಹೋಗೋದಿಲ್ಲ‌; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

0

ಬೆಂಗಳೂರು: ನಾನು ಕೇಂದ್ರ ರಾಜಕೀಯಕ್ಕೆ ಹೋಗೋದಿಲ್ಲ‌ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ರಾಜಕೀಯಕ್ಕೆ ಹೋಗೋದಿಲ್ಲ‌ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಒಂಭತ್ತು ಚುನಾವಣೆ ಗೆದ್ದಿದ್ದೇನೆ. ಎಂಪಿಗೆ ನಾನು ನಿಲ್ಲಲ್ಲ ಅಂತ ತೀರ್ಮಾನ ಮಾಡಿದ್ದೀನಿ. ಕೇಂದ್ರಕ್ಕೆ ಹೋಗ್ತೀರಾ ಅನ್ನೋ ಚರ್ಚೆ ನಡೀತಿದೆಯಲ್ಲ ನಿಮ್ಮ ಪಾರ್ಟಿಯಲ್ಲಿ ಎಂದುಈ ವೇಳೆ ಅಶೋಕ್ ಕಾಲೆಳೆದಿದ್ದಾರೆ.

ಅಶೋಕ್ ಮಾತಿಗೆ ಸಿಎಂ ಉತ್ತರಿಸಿ, ನಾನು ಇಲ್ಲಿರೋದು ಇಷ್ಟ ಇಲ್ವಾ? ನನ್ನನ್ನು ಇಲ್ಲಿಂದ ಕಳಿಸಬೇಕು ಅನ್ಕೊಂಡಿದ್ದೀರಾ?.ಈ ಹಿಂದೆ ನಮಗೆ ಸಂಸತ್ ಗೆ ಹೋಗಬೇಕು ಅನ್ನೋ ಒಲವು ಇತ್ತು. ಈಗ ಅದು ಇಲ್ಲ, ಎರಡು ಸಲ ನನ್ನ ಜನ ರಿಜೆಕ್ಟ್ ಮಾಡಿದ್ದಾರೆ. ನನಗೆ ಈಗ ಸಂಸತ್ ಗೆ ಹೋಗುವ ಆಸೆ ಇಲ್ಲ. ಎಲ್ಲರಿಗೂ ಸಂಸತ್ ಪ್ರವೇಶ ಮಾಡುವ ಆಸೆ ಇರುತ್ತೆ, ಆಸೆ ತಪ್ಪೇನಿಲ್ಲ, ಆಸೆ ಇರಬೇಕು, ದುರಾಸೆ ಇರಬಾರದು. ಆದ್ರೆ ನನಗೆ ಆ ಆಸೆ ಈಗ ಸಂಸತ್ ಗೆ ಹೋಗುವ ಆಸೆ ಇಲ್ಲ ಎಂದಿದ್ದಾರೆ.

ಇನ್ನು ಸಿಎಂ ಮಾತಿನ ಬಳಿಕ ಮಾತನಾಡಿದ ಅವರು ನಮ್ಮ ಸಿಎಂ ಕೆಲವು ಬುದ್ಧಿವಾದ ಹೇಳಿದ್ದಾರೆ.ಒಳಗೂ ಕರೆದು ನಮಗೆ ಹೇಳಿದ್ದಾರೆ.ನಾನು ಎಂಟು ಚುನಾವಣೆ ಗೆದ್ದಿದ್ದೇನೆ.ಎಸ್ಸೆಂಕೆ, ಬಂಗಾರಪ್ಪ, ಕೆ ಎಚ್ ರಂಗನಾಥ್, ಕೆ ಎಚ್ ಪಾಟೀಲ್, ಬಸವಲಿಂಗಪ್ಪ ಇಂಥವರೆಲ್ಲರ ಜತೆ ಕೆಲಸ ಮಾಡಿದ್ದೇನೆ. ನನಗೂ ಬಿಸಿ ರಕ್ತ ಇದೆ.ಆ ಬಿಸಿ ರಕ್ತ ಎಲ್ಲಿ ಬಳಸಬೇಕೋ ಅಲ್ಲಿ ಬಳಸ್ತೇನೆ.ಮನುಷ್ಯ ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯಾದಾಗ ನೋವಾಗುತ್ತೆ. ಜಾರ್ಜ್ ಹಿರಿಯರು, ಅವರಿಗೆ ಅಸಮರ್ಥ ಅಂದಿದ್ದು ಸರಿಯಲ್ಲ. ಜಾರ್ಜ್ ನಮ್ಮ ನಾಯಕರು, ಅವರು ಯೂತ್ ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದಾಗ, ನಾನು ತಾಲ್ಲೂಕು ಯೂತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಆಗಿದ್ದೆ.ಅವರಿಗೆ ಅವಮಾನ ಆದರೆ ನಾನು ಸಹಿಸಲ್ಲ. ನಾನು ರಾಂಗ್ ಆಗಿ ಮಾತಾಡಿರಬಹುದು, ಆದರೆ ನಾನೂ ಮನುಷ್ಯನ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ ಇನ್ನೊಬ್ಬರಿಗೆ ನೋವುಂಟು ಮಾಡದೇ ಮಾತಾಡಲಿ ಸದಸ್ಯರು.ಗ್ಯಾಲರಿಯಲ್ಲಿ ವಿದ್ಯಾರ್ಥಿಗಳು ಬಂದು ಕೂತಿದ್ದಾರೆ. ನಮ್ಮ ನಡವಳಿಕೆ ಗಮನಿಸ್ತಿರ್ತಾರೆ. ಟೀಕೆ ಮಾಡಿ, ಆದರೆ ಪದಪ್ರಯೋಗ ವೇಳೆ ಎಚ್ಚರ ಇರಲಿ, ವಿಷಯಾಂತರ ಮಾಡಬೇಡಿ. ಎರಡೂ ಕಡೆಯವರಿಗೂ ನನ್ನ ಮನವಿ ಇದು. ಟೀಕೆ ಮಾಡಿ, ಆದ್ರೆ ತಪ್ಪು ಪದ ಬಳಕೆ ಬೇಡ, ರಚನಾತ್ಮಕ ಟೀಕೆ ಮಾಡಿ. ನೀವು ಪ್ರಶ್ನೆ ಮಾಡಿ ಸರ್ಕಾರಕ್ಕೆ, ವಸ್ತುಸ್ಥಿತಿ ಹೇಳ್ತೀವಿ ನಾವು. ಇಲ್ಲಿ ಯಾರೂ ಬೃಹಸ್ಪತಿಗಳಲ್ಲ, ಎಲ್ಲರೂ ಕಲಿಯೋರೇ .ಹೊಸ ಸದಸ್ಯರಿಗೆ ಹಿರಿಯರು ಮಾದರಿಯಾಗಿರಬೇಕು ಎಂದು ಹೇಳಿದ್ದಾರೆ..