ತುಮಕೂರು: ನಾನು ಚಾಮರಾಜನಗರದಿಂದ ಸ್ಪರ್ಧೆ ಮಾಡಲ್ಲ ಎಂದು ತುಮಕೂರಿನಲ್ಲಿ ನಿಖಿಲ್ ಕುಮಾರ್ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಚಾಮರಾಜನಗರದಲ್ಲಿ ಸ್ಪರ್ಧಿಸುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಕ್ಲಿಯರ್ ಕಟ್ ಆಗಿ ಹೇಳುತ್ತೇನೆ ಗೊಂದಲ ಮಾಡೊದು ಬೇಡ. ಚಾಮರಾಜನಗರದಲ್ಲಿ ಗುರುತಿಸಿಕೊಂಡು ಹಲವಾರು ವರ್ಷದಿಂದ ದುಡಿದಿರುವ ವ್ಯಕ್ತಿಗಳಿರುತ್ತಾರೆ. ಯಾವುದ್ಯಾವೋದು ಕ್ಷೇತ್ರಕ್ಕೆ ಮೂಗು ತೂರಿಸುವ ವ್ಯಕ್ತಿತ್ವ ನನ್ನದಲ್ಲ. ನಾನು ಸ್ವಾಭಿಮಾನಿ. ಅರ್ಥ ಆಯ್ತಲ್ಲಾ. ಸುದ್ದಿಯಾಗಬೇಕೆಂದು ನಿಖಿಲ್ ಕುಮಾರಸ್ವಾಮಿ ಹೆಸರು ತರುವುದು ಬೇಡ ಎಂದಿದ್ದಾರೆ.
ಪಕ್ಷ ೨೫ ವರ್ಷ ಪೂರೈಸಿದೆ.ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಹೊರತು, ಚಾಮರಾಜನಗರ ಆಗಿಲಿ ಯಾವುದೇ ಕ್ಷೇತ್ರದಲ್ಲಾಗಲಿ ನಿಲ್ಲಬೇಕೆಂಬ ಯೋಚನೆ ಕನಸು-ಮನಸಿನಲ್ಲೂ ಇಲ್ಲ.ನಿಖಿಲ್ ಕುಮಾರಸ್ವಾಮಿ ಎಲ್ಲಿ ನಿಲ್ಲುತ್ತಾರೆಂದು ಫಿಕ್ಸ್ ಆದರೆ ಕಾಣದೆ ಇರುವ ಕೈಗಳು ಕೆಲಸ ಶುರು ಮಾಡುತ್ತವೆ. ಎಲ್ಲಿ ನಿಲ್ಲಬೇಕು.. ಯಾವಾಗ ನಿಲ್ಲಬೇಕೆಂದು ಜನ ತೀರ್ಮಾನ ಮಾಡುತ್ತಾರೆ. ಅದು ಜನರಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯ ಮಟ್ಟದ ಎರಡು ಪಕ್ಷಗಳ ವರಿಷ್ಟರ ನಡುವೆ ಈ ವರೆಗೂ ಚರ್ಚೆಗೆ ಬಂದಿಲ್ಲ. ಅವರು ಕಾರ್ಯಕರ್ತರ ಉರುದುಂಬಿಸೊ ನಿಟ್ಟಿನಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ. ನಾವು ಸಭೆಗಳನ್ನು ಮಾಡುತಿದ್ದೇವೆ. ಗ್ರೇಟರ್ ಬೆಂಗಳೂರು ಚುನಾವಣೆ ಜೂನ್ ಒಳಗೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ನಿಟ್ಟಿನಲ್ಲಿ ಈ ವರ್ಷ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಆಗಬೇಕು ಎಂದು ಹೈಕೊರ್ಟ್ ಹೇಳಿದೆ. ಈ ಹಿನ್ನಲೆ ಇದು ವಿಶೇಷವಾಗಿ ಕಾರ್ಯಕರ್ತರಿಗೆ ಮೀಸಲಿಟ್ಟಿರುವ ಚುನಾವಣೆ. ಎಂಪಿ ಹಾಗೂ ಎಂಎಲ್ಎ ಚುನಾವಣೆಗಳಲ್ಲಿ ನಮಗಾಗಿ ದುಡಿದಿರುತ್ತಾರೆ. ಈಗ ನಮ್ಮ ಕಾರ್ಯಕರ್ತರ ಗುರುತಿಸಿ ಅಧಿಕಾರ ಕೊಡಿಸುವ ಚುನಾವಣೆ. ಇದು ಇನ್ನು ಚರ್ಚೆಗೆ ಬಂದಿಲ್ಲ ನೋಡೊಣ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳ ಟ್ರಾಪ್ ವಿಚಾರದ ಬಗ್ಗೆ ಮಾತನಾಡಿದ ಅವರು ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ದೊಟ್ಟವಾದ ಹೆಜ್ಜೆ ಇಟ್ಟಿದ್ದಾರೆ. ನಾವೆಲ್ಲರೂ ಕೂಡ ಮೆಚ್ಚಿಕೊಳ್ಳಬೇಕಾದ್ದೇ. ಒಂದು ವಾರವೂ ಕಳೆದಿಲ್ಲ. ಅಬಕಾರಿ ಇಲಾಖೆಯಲ್ಲಿ ಬಾರ್ ಲೈಸೆನ್ಸ್ ವಿಚಾರವಾಗಿ ದೊಡ್ಡ ಮಟ್ಟಿಗೆ. ಸಿಎಲ್೭ ಲೈಸೆನ್ಸ್ ಕುರಿತಾಗಿ ಏನಾನಗಿದೆ ಎಂಬ ಕುರಿತಾಗಿ. ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷರು ಅಸಹಾಯಕತೆಯನ್ನು ಹೊರ ಹಾಕಿದ್ದಾರೆ. ಅವರು ಮುಖ್ಯಮಂತ್ರಿಗಳ ಸ್ವಕ್ಷೇತ್ರಕ್ಕೆ ಸೇರುವ ವ್ಯಕ್ತಿ. ವರುಣ ವಿಧಾನಸಭಾ ಕ್ಷೇತ್ರದ ಮತದಾರ.ಅವರು ಹೇಳುತ್ತಾರೆ ೨೦೧೩-೧೬ರ ನಡುವೆ ಅವತ್ತು ಇದ್ದಂತಹ ಸಿದ್ದರಾಮಣ್ಣನೇ ಬೇರೆ.ಇವತ್ತು ಇರುವಂತ ಸಿದ್ದರಾಮಣ್ಣನೇ ಬೇರೆ.ಹತ್ತಾರು ಬಾರಿ ಹೋಗಿ ಹೇಳಿದ್ದೇವೆ.ಅಬಕಾರಿ ಇಲಾಖೆಯಲ್ಲಿ ನಿರಂತರವಾಗಿ ಒಂದು ರೀತಿ ಎಲ್ಲಾದಕ್ಕೂ ಪ್ರೈಸ್ ಫಿಕ್ಸೇಷನ್ ಆಗಿದೆ ಎಂದು.ದೌರ್ಜನ್ಯ, ದಬ್ಬಾಳಿಕೆ ಆಗ್ತಾಯಿದೆ, ಆರ್ಥಿಕವಾಗಿ ಹೊರೆ ಆಗುತ್ತಿದೆ. ಇದರಿಂದ ದಯವಿಟ್ಟು ನಮ್ಮನ್ನು ಮುಕ್ತರನ್ನಾಗಿ ಮಾಡಿ ಎಂದು ಅಧಿಕಾರಿ, ಮಂತ್ರಿಗಳಿಗೆ ವಾರ್ನ್ ಮಾಡಿ ಎಂದು. ಆದರೇ ಸರ್ಕಾರ ಆ ರೀತಿಯ ಪರಿಸ್ಥಿತಿಯಲ್ಲಿ ಇಲ್ಲ. ಭ್ರಷ್ಟಾಚಾರ ಎನ್ನುವುದು ಅವೆಲ್ಲವನ್ನು ಜೀರ್ಣಿಸಿಕೊಂಡು ಮೆಟ್ಟಿ ನಿಲ್ಲಿತಿವಿ ಎಂಬ ಮನಸ್ತಿತಿಯಲ್ಲಿ ಕಾಂಗ್ರೇಸ್ ನವರು ಇದ್ದಾರೆ ಅದು ಬಹಳ ದಿನ ನಡೆಯೊದಿಲ್ಲ ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರ ವಿಚಾರದ ಬಗ್ಗೆ ಮಾತನಾಡಿದ ಅವರು ದೊಡ್ಡ ಗುತ್ತಿಗೆದಾರರಿರಲಿ, ಮಧ್ಯಮ ಗುತ್ತಿಗೆದಾರರೆಂದು ಗುರುತಿಸಿಕೊಂಡಿದ್ದಾರೆ.ಎಲ್ಲೊ ಒಂದು ಕಡೆ ಅವರ ಮನೆಯವರ ವಡವೆ ಎಲ್ಲವನ್ನು ಅಡ ಇಟ್ಟು ಕೆಲಸ ಮಾಡಿರುತ್ತಾರೆ.ಬಿಲ್ ಇನ್ನು ರೀಲಿಸ್ ಆಗಿಲ್ಲ ಅನ್ನೊದು ಹೊಸ ವಿಚಾರವಲ್ಲ.ಒಂದು ವರ್ಷದಿಂದ ಮಾತನಾಡುತಿದ್ದೇವೆ.ಒಂದು ಕಡೆ, ಎರಡು ತಿಂಗಳ ಗ್ಯಾರೆಂಟಿ ಯೋಜನೆ. ಅದು ಎಲ್ಲಿಗೆ ಹೊಯ್ತು ಅಂತ ಗೊತ್ತಿಲ್ಲ.ಅದನ್ನು ಉತ್ತರ ಕೊಡಕೆ ರೆಡಿ ಇಲ್ಲ.ಮತ್ತೊಂದು ಕಡೆ ಸದನ ನಡೆಯ ಬೇಕಾದರೇ ಸದಸ್ಯರೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೂ ಉತ್ತರ ಇಲ್ಲ.ರಾಜ್ಯ ಸರ್ಕಾರ ಕೊಡಬೇಕಾದ ಐದು ಕೆಜಿ ಸಹ ಸಮರ್ಪಕವಾಗಿ ಕೊಡಲು ಆಗುತ್ತಿಲ್ಲ.ಈ ದುಡ್ಡು ಎಲ್ಲಿಗೆ ಹೊಗುತ್ತಿದೆ.ಹಣ ಟೋಟಲಿ ಮಿಸ್ ಯೂಟಿಲೈಸ್ ಆಗುತ್ತಿದೆ. ಮಾತನಾಡುತ್ತಾ ಹೊದರೇ ಬೆಟ್ಟದಷ್ಟು ಸುದ್ದಿಗಳಿವೆ.ಎಲ್ಲದಕ್ಕೂ ಹೊರಾಟ ಮಾಡುತ್ತೇವೆ.ಅತಿ ಶೀಘ್ರದಲ್ಲೇ ಅನೇಕ ಜಿಲ್ಲೆಗಳಲ್ಲಿ ಸಾಮಾವೇಶ ಹಮ್ಮಿಕೊಳ್ಳಬೇಕೆಂಬ ಕಾರಣ. ರಾಜ್ಯ ಸರ್ಕಾರದ ವೈಫಲ್ಯತೆಗಳು, ಭ್ರಷ್ಟಾಚಾರ, ಹಗರಣ ಜೊತೆಗೆ ದುರಾಡಳಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.











