ಮನೆ Latest News ನಾನು ಹುಟ್ಟು ಕಾಂಗ್ರೆಸ್ಸಿಗ, ಸಾಯುವುದು ಕಾಂಗ್ರೆಸ್ಸಿಗನಾಗಿ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ನಾನು ಹುಟ್ಟು ಕಾಂಗ್ರೆಸ್ಸಿಗ, ಸಾಯುವುದು ಕಾಂಗ್ರೆಸ್ಸಿಗನಾಗಿ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ನಾನು ಹುಟ್ಟು ಕಾಂಗ್ರೆಸ್ಸಿಗ, ಸಾಯುವುದು ಕಾಂಗ್ರೆಸ್ಸಿಗನಾಗಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಆರ್‌ಎಸ್ ಎಸ್ ಗೀತೆ ಹಾಡಿ ವಿವಾದಕ್ಕೀಡಾದ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ನಾನು ಏನು ಹೇಳಲು ಬಯಸಲ್ಲ. ಪಕ್ಷ ಇದೆ ಹೈಕಮಾಂಡ್ ಇದೆ ಅವರೇ ನೋಡಿಕೊಳ್ಳುತ್ತಾರೆ .ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಾರೆ . ಅದೆಲ್ಲವನ್ನು ನಾವು ವಿಶ್ಲೇಷಣೆ ಮಾಡಲು ಹೋಗಲ್ಲ. ಪಕ್ಷ ಇದೆ ಹೈಕಮಾಂಡ್ ಅಂತ ಯಾಕೆ ಇದೆ ಅವರು ಗಮನಿಸ್ತಾರೆ. ಯಾರ್ಯಾರಿಗೆ ಏನೇನು ಸೂಚನೆ ಕೊಡಬೇಕು ಕೊಡುತ್ತಾರೆ. ಶಿವಕುಮಾರ್ ಹೇಳಿದ್ದು ಹೈಕಮಾಂಡ್ಗೆ ತಪ್ಪು ಅನಿಸಿದರೆ ಅವರು ಹೇಳ್ತಾರೆ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದನ್ನ ಕೂಡ ನೋಡಬೇಕಲ್ಲ. ಅದು ತಪ್ಪಿಲ್ಲ ಅಂತ ಹೇಳಿದರೆ ಹೈಕಮಾಂಡ್ ಅವರು ಅವರಿಗೇ ಹೇಳುತ್ತಾರೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ನನ್ನ ಮೇಲೂ ಇಡಿ ಕೇಸ್ ಹಾಕಲಾಗಿತ್ತು. ರಾಜಕಾರಣ ಡಿಕೆಶಿದ ಮುಗಿತು ಎನ್ನುತ್ತಿದ್ದರು. ಸೋನಿಯಾ,ರಾಹುಲ್, ಖರ್ಗೆ ಯವ್ರು ನನ್ನಗೆ ಅಧ್ಯಕ್ಷರನ್ನಾಗಿ ಮಾಡಿದ್ರು. ಒಂದು ದಿನ ಸರಿಯಾಗಿ ನಿದ್ದೆ ಮಾಡದೆ ಪಕ್ಷ ಕಟ್ಟಿದ್ದೇನೆ. ತಿಹಾರ್ ಜೈಲಿನಿಂದ ಹೊರಬಂದೆ. ತಿಹಾರ್ ಜೈಲಿಗೆ ಕಳುಹಿಸಿದ ಇಡಿ ಕೇಸ್ ಏನಾಯ್ತು. ಕೇಸ್ ಡಿಸ್ಮಿಸ್ ಆಯ್ತು. ಕುರ್ಚಿ ನೂ ಕೊಟ್ಟಿರಲಿಲ್ಲ, ಅಲ್ಲೆ ಊಟ ಮಾಡಿಕೊಂಡು ಇರಬೇಕಿತ್ತು. ಅಸೆಂಬ್ಲಿಯಲ್ಲಿ ಅಶೋಕ್ ಗೆ ಎರಡು ಮಾತ್ ಹೇಳಿದೆ.ಅದನ್ನು ಕಟ್ ಮಾಡಿ ಪೇಸ್ಟ್ ಮಾಡಿ, ನ್ಯಾಷಿನಲ್ , ಇಂಟರ್ನ್ಯಾಷನಲ್ ಕಳುಹಿಸಿದ್ರು. ಬಿಹಾರದಲ್ಲೂ ನನ್ನ ಕೇಳಿದ್ರು.ಕೆಲವರು ಮೀಡಿಯಾದಲ್ಲಿ ಮಾತಾಡ್ತಿದ್ದಾರೆ.ಮೀಡಿಯಾದಲ್ಲಿ ಮಾತನಾಡುವುದಲ್ಲ. ಕೆಲವರು ಸಲಹೆ ಕೊಟ್ಟಿದ್ದಾರೆ ಓಕೆ. ಯಾರ ಮನಸ್ಸನ್ನು ನೋಯಿಸಲು ಸಾಧ್ಯವಿಲ್ಲ. ನಿಮಗೆ ಕ್ಷಮೆ ಬೇಕಿದ್ದರೆ..ನಾನು ಮಿಸ್ಟಿಕ್ ಮಾಡಿದ್ದೀನಿ ಅಂದರೆ. ತಪ್ಪು ಮಾಡದೆ ಇದ್ದರು ಕ್ಷಮೆ ಕೇಳುತ್ತೇನೆ. ನು ಹುಟ್ಟು ಕಾಂಗ್ರೆಸ್ಸಿಗ, ಸಾಯುವುದು ಕಾಂಗ್ರೆಸ್ಸಿಗನಾಗಿ. ಗಾಂಧಿ ಕುಟುಂಬದ ಮೇಲಿನ ನನ್ನ ನಿಷ್ಠೆ ಪ್ರಶ್ನೆ ಮಾಡುವಂತಿಲ್ಲ.ಮುಂದೆ ಕಮ್ಯುನಿಸ್ಟ್ ಬಗ್ಗೆಯೂ ಮಾತನಾಡುತ್ತೇನೆ. ನನ್ನ ಧರ್ಮವನ್ನು ನಾನು ಬಿಡಲು‌ ಸಾಧ್ಯವಿಲ್ಲ. ಕ್ರಿಶ್ಚಿಯನ್, ಇಸ್ಲಾಂ, ಜೈನ್ ಧರ್ಮ ಗಳಲ್ಲಿ ನಂಬಿಕೆ ಇದೆ. ನೀರು, ಬೆಳಕಿಗೂ ಬಣ್ಣ, ಜಾತಿ ಇಲ್ಲ. ನನ್ನ ಹೇಳಿಕೆ ಯನ್ನು ಕಟ್ ಪೇಸ್ಟ್ ಮಾಡಿ ಕಳುಹಿಸ್ತಿದ್ದೀರಿ. ಈ ಬಗ್ಗೆ ನನ್ನ ಯಾರು ಕೇಳಿಲ್ಲ.ನಾನು ಏನು ಎಂದು ಪಕ್ಷಕ್ಕೆ ಗೊತ್ತು. ಬೇಕಾದರೆ ಬಿಕೆ ಹರಿಪ್ರಸಾದ್ ಗೂ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ನನ್ನ ಧರ್ಮ ನಾನು ಬಿಡುವವನಲ್ಲ. ಕ್ರಿಶ್ವಿಯನ್,ಮುಸ್ಲಿಂ, ಜೈನರ ಬಗ್ಗೆ ನಂಬಿಕೆಯಿದೆ. ಧರ್ಮ ಯಾವುದಾದರೂ ಭಕ್ತಿ ಒಂದೇ . ಕರ್ಮ ಹಲವು ಆದರೂ ನಿಷ್ಟೇ ಒಂದೇ. ಸೂರ್ಯ,ಚಂದ್ರ,ಬೆಳಕಿಗೆ ಯಾವುದೇ ಭೇದವಿಲ್ಲ. ಪೈಗಂಬರ್ ತತ್ವದ ಬಗ್ಗೆ ನಿಷ್ಠೆ ಉಳ್ಳವನು. ಎಲ್ಲ ಶ್ಲೋಕಗಳನ್ನ ಇರುವಲ್ಲೇ ಹೇಳುವವನು.ಇದರಲ್ಲಿ ಯಾರು ರಾಜಕಾರಣ ಮಾಡಬೇಡಿ.ಕಟ್ ಪೇಸ್ಟ್ ಮಾಡಿ ನೀವು ಮಾಡಬೇಡಿ. ನಾನು ನನ್ನ ಡ್ಯೂಟಿ ಮಾಡ್ತೇನೆ. ಮಾಧ್ಯಮದವರು ನನ್ನನ್ನ ಬೆಳೆಸಿದ್ದೀರ. ಟೀಕೆಯನ್ನೂ ಮಾಡಿದ್ದೀರ. ನಮ್ಮ ತಪ್ಪುಗಳನ್ನ ಎತ್ತಿ ತೋರಿಸಿದ್ದೀರ. ಇದಕ್ಕೆ ನಾನು ತೆರೆ ಎಳೆಯುವ ಕೆಲಸ ಮಾಡ್ತೇನೆ ಎಂದು ಆರ್ ಎಸ್ ಎಸ್ ಗೀತೆ ವಿವಾದಕ್ಕೆ ಡಿಕೆಶಿ ತೆರೆ ಎಳೆದಿದ್ದಾರೆ.

ರಾಹುಲ್ ಗಾಂಧಿ ಕೇಳಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನ್ನನ್ನ ಯಾರೂ ಕೇಳಿಲ್ಲ. ಅವರು ಬೇರೆಯವರಿಂದ ತಿಳಿದುಕೊಂಡಿರಬಹುದು. ಪಕ್ಷದಲ್ಲು ಸೀನಿಯರ್ಸ್ ಲೀಡರ್ಸ್ ಇದ್ದಾರೆ. ಅವರು ನನ್ನನ್ನ ಗೈಡ್ ಮಾಡ್ತಿದ್ದಾರೆ. ನಾನೇನು ಆರ್ ಎಸ್ ಎಸ್ ಹೊಗಳಿದ್ದೇನಾ?. ಗೀತೆಯಲ್ಲಿ ಏನಿದೆ ಹೇಳಿದ್ದೆ. ನಾನು ಹಿಂದೆ ಪಾಂಚಜನ್ಯ ಅಂತ ಹೆಸರಟ್ಟಿದ್ದೆ. ಎಸ್ ಎಂ ಕೃಷ್ಣರ ಕಾಲದಲ್ಲಿ ಹೇಳಿದ್ದೆ. ಆಗ ಸೋನಿಯಾ ಗಾಂಧಿ ಕೇಳಿದ್ದರು. ನಾನು ಅವರಿಗೆ ಸಾರಾಂಶ ಹೇಳಿದ್ದೆ. ಈಗ ನೀವು ಟಿವಿಯವರು ಒಂದೊಂದು ರೀತಿ ಇಲ್ವಾ. ಮಾತುಬಿಡದ ಮಂಜುನಾಥ ಕಾಸು ಬಿಡದ ತಿಮ್ಮಪ್ಪ. ನಾನೊಬ್ಬ ಸೆಕ್ಯುಲರ್ ಮನುಷ್ಯ. ನನಗೆ ಜಾತಿಯ ಬಗ್ಗೆ ನಂಬಿಕೆ ಇಲ್ಲ. ಮಾನವ ಧರ್ಮಕ್ಕೆ ಜಯವಾಗಲಿ.ಇದು ನಮ್ಮ‌ ಗಂಗಾಧರ ಅಜ್ಜನವರ ಮಾತು ಎಂದು ತಿಳಿಸಿದ್ದಾರೆ.

ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ  ಅವರು ಯಾರಿಗೆ ಅಡ್ವೈಸ್ ಕೊಡಬೇಕೋ ಕೊಡಲಿ. ನಾನು ಎಲ್ಲರಿಗೂ ವಿಶ್ ಮಾಡ್ತೇನೆ ಎಂದು ರಾಜಣ್ಣ ಹೇಳಿಕೆಗೆ ಡಿಕೆಶಿ ಸೈಲೆಂಟ್ ಆಗಿದ್ದಾರೆ.