ಬೆಂಗಳೂರು; ನನಗೆ ಜಿಬಿಎ ಗೆಲ್ಲಬೇಕಷ್ಟೇ, ನನಗೆ ಹೆಚ್ಚಿನ ಸೀಟ್ ಬೇಕಷ್ಟೇ ಎಂದು ಜಿಬಿಎ ಟಿಕೇಟ್ ಅರ್ಜಿ ಹಾಕಿದವರ ಜೊತೆಗಿನ ಸಭೆಯಲ್ಲಿ ಡಿಕೆಶಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಜಿಬಿಎ ಟಿಕೇಟ್ ಅರ್ಜಿ ಹಾಕಿದವರ ಜೊತೆಗೆ ಡಿಸಿಎಂ ಡಿಕೆಶಿ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ನನಗೆ ಜಿಬಿಎ ಗೆಲ್ಲಬೇಕಷ್ಟೇ, ನನಗೆ ಹೆಚ್ಚಿನ ಸೀಟ್ ಬೇಕಷ್ಟೇ. ಐದು ಜನರ ಕಮಿಟಿ ಮಾಡಿದ್ದೇನೆ ಮಾಜಿ ಮೇಯರ್ ಗಳದ್ದು. ಪ್ರಣಾಳಿಕೆ ಕೂಡ ಮಾಡುತ್ತೇವೆ. ಅಧಿಕೃತವಾಗಿ ಯಾರು ಓಟರ್ ಲಿಸ್ಟ್ ಸರ್ವೆ ಮಾಡಿಸಿದ್ದಾರೆ ಅವರನ್ನೆಲ್ಲ ಕರೆಯುತ್ತೇನೆ. ಎಸ್ಐಆರ್ ದೊಡ್ಡ ಡೇಂಜರ್ ಅದು. ಯಾರ್ ಯಾರು ಮತ ಹಾಕಬೇಕು ಅಂತಿದ್ದಾರೆ ಅವರು ಮತ್ತೆ ಹೊಸದಾಗಿ ಅರ್ಜಿ ಕೊಡಬೇಕು. ಓಟಿನ ಜೊತೆಗೆ ನಾನು ಇಲ್ಲಿಯೇ ಇದ್ದೆನೆ ಎಂಬುದನ್ನು ಓಟರ್ ಲಿಸ್ಟ್ ನಲ್ಲಿ ಪ್ರೂವ್ ಮಾಡಬೇಕು. ಈಗ ಮ್ಯಾಪಿಂಗ್ ನಡೆಯುತ್ತಿದೆ. ೪೨% ಮಾತ್ರ ಬೆಂಗಳೂರಲ್ಲಿ ಮ್ಯಾಪಿಂಗ್ ಆಗಿದೆ. ಮ್ಯಾಪಿಂಗ್ ಬಳಿಕ ಮತ್ತೆ ದಾಖಲೆ ಕೇಳ್ತಾರೆ. ಎಸ್ಐಆರ್ ಬಹಳ ದೊಡ್ಡ ಡೇಂಜರ್ ಎಂದಿದ್ದಾರೆ.
ಎಲ್ಲೆಲ್ಲಿ ವಾರ್ಡ್ ನಲ್ಲಿ ಬಿಎಲ್ಎ ಇದ್ದಾರೆ ಅವರನ್ನು ಕರೆದುಕೊಂಡು ಹೋಗಿ ಸರ್ವೆ ಮಾಡಬೇಕು. ಯಾರು ಕರೆಕ್ಟ್ ಆಗಿ ಸರ್ವೆ ಮಾಡಿಲ್ಲ ಅವರನ್ನು ಸಸ್ಪೆಂಡ್ ಮಾಡಿಸುತ್ತೇನೆ. ಬಿಎಲ್ಓಗಳು ಯಾರು ಸಹಕಾರ ಕೊಡಲ್ಲ ಅವರಿಗೆ ರಿಪೇರಿ ಮಾಡುತ್ತೇನೆ. ಈಗಾಗಲೇ ಇಲೆಕ್ಷನ್ ಕಮಿಷನ್ ಗೆ ದೂರು ಕೊಟ್ಟಿದ್ದೇವೆ. ಯಾರು ARO ಇದ್ದಾರೆ ಅಲ್ಲಿಗೆ ಹೋಗಿ ಗಲಾಟೆ ಮಾಡಿ ಪ್ರತಿಭಟನೆ ಮಾಡಿ .ಕಾಂಗ್ರೆಸ್ ಸರಕಾರ ಇದೆ ಯಾರು ಏನು ಅಂದುಕೊಳ್ತಾರೋ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಮರ್ಯಾದೆ ನೀವೆ ಕಾಪಾಡಿಕೊಳ್ಳಿ. ನನ್ನ ಮನೆಯಲ್ಲಿ ನಾವು ಐದು ಜನರಿದ್ದೇವೆ. ಇಬ್ಬರನ್ನು ಒಂದು ಬೂತ್ ಗೆ ಹಾಕ್ತಾರೆ, ಮತ್ತೆ ಮೂರು ಜನರನ್ನು ಇನ್ನೊಂದು ಬೂತ್ ಗೆ ಹಾಕ್ತಾರೆ. ಹೀಗೇ ಕಳೆದ ವರ್ಷ ಆಗಿ ಚಿಲುಮೆ ಕೇಸ್ ಅಗಿ ನಮಗೆ ಬೆಂಗಳೂರಲ್ಲಿ ಹೆಚ್ಚಿನ ಸ್ಥಾನ ಬರಲಿಲ್ಲ. ಅಪಾರ್ಟ್ಮೆಂಟ್ ನವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಅವರು ಓಟೂ ಹಾಕಲ್ಲ, ನಮಗೆ ಆ ಓಟೂ ಬರಲ್ಲ. ಸ್ಟೇಟ್ ಇಲೆಕ್ಷನ್ ಕಮಿಷನ್ ಗೂ ಸೆಂಟ್ರಲ್ ಇಲೆಕ್ಷನ್ ಕಮಿಷನ್ ಗೂ ವ್ಯತ್ಯಾಸ ಇದೆ. ವಿಧಾನಸಭೆಯಲ್ಲಿ ಕೂಡ ಎಸ್ಐಆರ್ ಬಗ್ಗೆ ಚರ್ಚಿಸುತ್ತೇವೆ. ಗ್ಯಾರಂಟಿ ಕಮಿಟಿಗಳು ಆ್ಯಕ್ಟಿವ್ ಆಗಿ ಕೆಲಸ ಮಾಡಿ. ಬಸ್ ನಲ್ಲಿ ಓಡಾಡುವ ಮಹಿಳೆಯರಿಗೆ ಐಡಿ ಕಾರ್ಡ್ ಕೊಡುತ್ತೇವೆ. ಯಾಕಂದ್ರೆ ಶಕ್ತಿ ಯೋಜನೆಯಲ್ಲಿ ಓಡಾಡುವ ಮಹಿಳೆಯರಿಗೆ ನಾವು ಉಚಿತವಾಗಿ ಕೊಡ್ತಾ ಇರೋದು ಗೊತ್ತಾಗ್ತಿಲ್ಲ. ಇದರ ಬೆಲೆ ಗೌರವ ಕೂಡ ಇಲ್ಲ ಹಾಗಾಗಿದೆ.ಬಿಜೆಪಿಯವರು ಗ್ಯಾರಂಟಿ ಪರಿಷ್ಕರಣೆ ಕೂಡ ಮಾಡಿ ಅಂತ ಹೇಳ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇನ್ನು ಇದೇ ವೇಳೆ ಈ ಹಿಂದಿನ ಐಟಿ ರೇಡ್ ಪ್ರಕರಣ ನೆನಪಿಸಿಕೊಂಡ ಡಿ ಕೆ ಶಿವಕುಮಾರ್ ಈ ಹಿಂದೆ ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಿದ್ರು.ಆಗ ಕೂಡ ನಾನು ನೋಡಿಕೊಂಡಿದ್ದೆ. ಆಗ ಏನೇನು ನೋವು ಅನುಭವಿಸಿದೆ ಗೊತ್ತಿದೆ.ಆಗ ನನ್ನ ಮೇಲೆ ವಿನಯ್ ಮೇಲೆ ರೇಡ್ ಆಯ್ತು. ಈಗ ಒಡಿಸ್ಸಾ ಶಾಸಕರಿಗೆ ಆಮಿಷ ನೀಡಿದವರಿಗೆ ಏನೆನು ರಿಪೇರಿ ಮಾಡಬೇಕು ಮಾಡಿದ್ದೇವೆ ಎಂದ ಅವರು ಒಡಿಸ್ಸಾ ಕಾಂಗ್ರೆಸ್ ಎಮ್ ಎಲ್ ಎ ಗಳು ಎಐಸಿಸಿ ಅದ್ಯಕ್ಷರನ್ನ ಭೇಟಿ ಮಾಡಬೇಕಂತ ಆಸೆ ಪಟ್ಟರು. ಕಾಂಗ್ರೆಸ್ ಅಧ್ಯಕ್ಷರು ಬೆಂಗಳೂರಿನಲ್ಲಿದ್ರು. ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅವರತ್ರ ಫೋಟೊ ತಗೊಂಡು ಹೊರಟಿದ್ದಾರೆ. ಅಷ್ಟು ಬಿಟ್ರೆ ಏನಿಲ್ಲಾ ಅವರು ನಾಳೆ ಬೆಳಗ್ಗೆ ಹೊರಡ್ತಾರೆ ಎಂದಿದ್ದಾರೆ.
ಇಂದಿನ ಘಟನೆ ಬಗ್ಗೆ ಮನವರಿಕೆ ಮಾಡಿದ್ದಾರಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನೆಲ್ಲಾ ತಿಳಿಸಿದ್ದಾರೆ, ಚೆಕ್ ಪೊಲೀಸ್ ನವರಿಗೆ ಕೊಡ್ತಾರೆ. ಕೆಲವರು ಮಹಜರು ಮಾಡೋಕೆ ಹೋಗ್ತಾರೆ. ಯಾರೊ ಒಬ್ಬ ನಾಟಕ ಆಡ್ತಿದ್ದಾನೆ, ಅದೆಲ್ಲಾ ಇದೆ ಎಂದರು. ಒಬ್ಬೊಬ್ಬರಿಗೆ ಐದು ಕೋಟಿ ಆಫರ್ ಇದೆ ಎಂಬ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅದು ದೂರಿನಲ್ಲಿ ಎಲ್ಲವನ್ನ ಬರೆದು ಕೊಟ್ಟಿದ್ದಾರೆ. ಆಫರ್ ಮಾಡೋಕೆ ನಾಲ್ಕು ಜನ ಬಂದಿದ್ರು. ಇಬ್ಬರು ತಪ್ಪಿಸಿಕೊಂಡಿದ್ದಾರೆ, ಇಬ್ಬರು ಸಿಕ್ಕಿದ್ದಾರೆ. ಅವರನ್ನ ಪತ್ತೆ ಹಚ್ಚುತ್ತಿದ್ದಾರೆ, ಇಬ್ಬರನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡ್ತಾರೆ ಎಂದು ಹೇಳಿದ ಅವರು ಮತ್ತೆ ಟಾಸ್ಕ್, ರಿಸ್ಕ್ ತೆಗೆದುಕೊಳ್ತಿದ್ದಿರಾ ಎಂಬ ವಿಚಾರಕ್ಕೆ ಉತ್ತರಿಸಿ ಏನಿಲ್ಲಾ ಎಂದಿದ್ದಾರೆ.
ನಿರ್ಮಾಲಾನಂದ ಶ್ರೀಗಳ ಬಗ್ಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅದರ ಬಗ್ಗೆ ಗೊತ್ತಿಲ್ಲಾ, ನಾನೇನು ಮಾತನಾಡೊಲ್ಲ. ಆ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.











