ಬೆಂಗಳೂರು: ನನಗೆ ಶೋಕಾಸ್ ನೋಟೀಸ್ ಕೊಡಲಾಗಿತ್ತು ಅದಕ್ಕೆ ಶಿಸ್ತು ಸಮಿತಿ ಅಧ್ಯಕ್ಷರಿಗೆ ಉತ್ತರ ಕೊಟ್ಟಿದ್ದೇನೆ ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ಕೊಟ್ಟಿಲ್ಲ.ಯಡಿಯೂರಪ್ಪ ವಿರುದ್ಧ ಮಾತಾಡಿದಾಗ ನಾನು ಹೇಳಿಕೆ ನೀಡಿದ್ದೇನೆ. ಪಕ್ಷದ ನಾಯಕರ ವಿರುದ್ಧ ಯಾವತ್ತೂ ಹೇಳಿಕೆ ನೀಡಿಲ್ಲ. ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತಂದವರು. ಅದಕ್ಕೆ ಅವರ ಪರವಾಗಿ ಹೇಳಿಕೆ ನೀಡಿದ್ದೇನೆ. ಯಡಿಯೂರಪ್ಪ ಅವರಿಗೆ ಅಪಮಾನ ಮಾಡಿದ್ದಕ್ಕಾಗಿ ಹೇಳಿಕೆ ನೀಡಿದ್ದೆ. ೨೦೦೦ ಕೋಟಿ ರೂ ಕೊಟ್ಟರೆ ಸಿಎಂ ಆಗಬಹುದು ಎಂಬ ಹೇಳಿಕೆ ಬಂದಿರುವುದರಿಂದ ಮಾತಾಡಿದ್ದೇನೆ. ಕಾರ್ಯಕರ್ತರ ಭಾವನೆಗೆ ತಕ್ಕಂತೆ ಮಾತಾಡಿದ್ದೇನೆ. ಅನಿವಾರ್ಯವಾಗಿ ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಹೇಳಿಕೆ ನೀಡಿದ್ದೇನೆ. ಅಧಿಕಾರಕ್ಕೆ ನಾನು ರಾಜಕೀಯಕ್ಕೆ ಬಂದಿದ್ದೇನೆ.ಹಿರಿಯರ ಆದರ್ಶದ ಮೇಲೆ ರಾಜಕಾರಣ ಮಾಡಿದ್ದೇನೆ ಎಂದ್ರು.
ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ: ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆ
ಬೆಂಗಳೂರು: ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಯತ್ನಾಳ್ ಉಚ್ಛಾಟನೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಯತ್ನಾಳ್ ಉಚ್ಛಾಟನೆ ಅನೇಕ ಹಿಂದೂ ಸಂಘಟನೆಗಳಿಗೆ, ರಾಜಕೀಯ ಅಭಿಮಾನಿಗಳಿಗೆ ನೋವು ತಂದಿದೆ. ಹಾಗಂತ ನಾವು ಹೈಕಮಾಂಡ್ ನಿರ್ಧಾರದ ವಿರುದ್ಧ ಇಲ್ಲ. ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಬಿ.ಪಿ. ಹರೀಶ್ ಇಂದು ಸಂಜೆಯೊಳಗೆ ಉತ್ತರ ಕೊಡುತ್ತಾರೆ.ನಾವು ಬಿಜೆಪಿ ತೊರೆಯುವುದಾಗಲೀ, ಹೊಸ ಪಕ್ಷ ಕಟ್ಟುವುದಾಗಲೀ ಇಲ್ಲ ಎಂದು ಈಗಾಗಲೇ ರಮೇಶ್ ಜಾರಕಿಹೊಳಿ ವರಿಷ್ಠರಿಗೆ ಹೇಳಿದ್ದಾರೆ ಎಂದಿದ್ದಾರೆ.
ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಇದನ್ನ ಹೈಕಮಾಂಡ್ ನವರೂ ಗಮನಿಸಿದ್ದಾರೆ.ಈ ನಿಟ್ಟಿನಲ್ಲಿ ಹೈಕಮಾಂಡ್ ನವರು ತೀರ್ಮಾನಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತಾರೆ. ಯತ್ನಾಳ್ ಉಚ್ಛಾಟನೆ ನಿರ್ಧಾರವನ್ನು ಹೈಕಮಾಂಡ್ ಮರು ಪರಿಶೀಲಿಸಲಿ ಎನ್ನುವುದು ನಮ್ಮ ಮನವಿ ಎಂದಿದ್ದಾರೆ. ನಮ್ಮ ಹಿಂದಿನ ಹೋರಾಟ ಮುಂದುವರೆಸಿಕೊಂಡು ಹೋಗುತ್ತೇವೆ. ಯತ್ನಾಳ್ ಅವರನ್ನು ಮತ್ತೆ ಬಿಜೆಪಿ ಪಕ್ಷಕ್ಕೆ ತರುವ ಕೆಲಸ ಮಾಡುತ್ತೇವೆ. ಈ ನಿಟ್ಟಿನಲ್ಲಿ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಪ್ರಯತ್ನ ಮಾಡುತ್ತೇವೆ ಎಂದರು.
ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಆಗಿದೆ ಇದು. ತಪ್ಪಾಗಿದೆ ಎಂದು ಅದನ್ನು ತಿದ್ದಿಕೊಂಡು ನಾವು ಹೋಗುತ್ತೇವೆ. ಪಕ್ಷ ಯಾವ ರೀತಿ ಆದೇಶ ಕೊಡುತ್ತದೋ ಅದೇ ರೀತಿಯಲ್ಲಿ ನಡೆಯುತ್ತೇವೆ. ನಮ್ಮ ಹೋರಾಟಕ್ಕೆ ಕಹಿ ಘಟನೆ ಅಂದರೆ ಯತ್ನಾಳ್ ಉಚ್ಛಾಟನೆ ಎಂದಿದ್ದಾರೆ. ನಿಜವಾಗಿಯೂ ಇದು ನಮಗೆ ಹಿನ್ನಡೆ. ಎಲ್ಲೋ ತಪ್ಪಿನ ಮಾಹಿತಿ ಗಳಿಂದ ಈ ರೀತಿ ಆಗಿರಬಹುದು. ನಾವು ಎಲ್ಲರೂ ಹೋಗಿ ಹೈಕಮಾಂಡ್ ನಾಯಕರ ಭೇಟಿ ಮಾಡುತ್ತೇವೆ. ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ರನ್ನು ಮೊದಲು ಉಚ್ಚಾಟನೆ ಮಾಡಬೇಕಿತ್ತು. ಇಡೀ ಕರ್ನಾಟಕ ಯತ್ನಾಳ್ ಪರ ಇದೆ, ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದು ಯಡಿಯೂರಪ್ಪ ವಿರುದ್ಧವಾಗಿಯೂ ಅಲ್ಲ. ಯಾರೋ ಒಬ್ಬರ ಪರವಾಗಿಯೂ ಹೋರಾಟ ಅಲ್ಲ. ಪಕ್ಷ ಸಂಘಟನೆಗಾಗಿ ನಮ್ಮ ಹೋರಾಟ ಇದೆ ಎಂದಿದ್ದಾರೆ.











