ನಾನು ಅನ್ವರ್ ಮಾಣಿಪ್ಪಾಡಿ ಅವರ ವರದಿ ಪೂರ್ಣ ಅಧ್ಯಯನ ಮಾಡಿಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ವಕ್ಫ್ ವಿಚಾರವಾಗಿ ಭೂಹಗರಣ ಆಗಿದೆ ಅಂತ ಅಧ್ಯಯನ ಮಾಡಿ ವರದಿ ಕೊಟ್ಟಿದ್ದರು. ಅನ್ವರ್ ಮಾಣಿಪ್ಪಾಡಿ ಅವರು ವರದಿ ಕೊಟ್ಟರು. ದೊಡ್ಡ ರಾಜಕಾರಣಿ ಗಳು ಅಂದ್ರೆ ಕಾಂಗ್ರೆಸ್ ಪಕ್ಷದ ಕೆಲವರು ಇದರಲ್ಲಿ ಇನ್ವಾಲ್ ಆಗಿದ್ದಾರೆ ಎಂದು ಆರೋಪ ಇತ್ತು. ನಾನೇ ಆಗ ವರದಿ ಸ್ವೀಕರಿಸಿದ್ದೆ, ನಾನೇ ಸಿಎಂ ಆಗಿದ್ದೆ. ಆದ್ರೆ ಆಗ ನಾನು ಸಿಎಂ ಸ್ಥಾನದಿಂದ ಕೆಳಗೆ ಇಳಿದೆ. ಈಗ ಇದರ ಕುರಿತು ತನಿಖೆ ಆಗಬೇಕು. ವರದಿ ಕುರಿತು ಚರ್ಚೆ ಆಗಬೇಕು, ಆಗ ಎಲ್ಲವೂ ಹೊರ ಬರುತ್ತದೆ ಎಂದಿದ್ದಾರೆ.
ಅನ್ವರ್ ಅವರು ನಮ್ಮ ಪಾರ್ಟಿಗೆ ಬಂದಿರಬಹುದು. ಆದ್ರೆ ಅವರು ಮಾಡಿರೋ ಆರೋಪ ಸುಳ್ಳು ಅಲ್ಲ. ಇದು ಗೋಲ್ಮಾಲ್ ಪ್ರಕರಣ, ಇದರಲ್ಲಿ ಹುನ್ನಾರ ನಡೆದಿದೆ. ವಿಜಯೇಂದ್ರ ಅವರ ವಿರುದ್ದ ಆರೋಪ ಕೇಳಿ ಬಂದಿದೆ, ಆದ್ರೆ ಇದು ಸುಳ್ಳು. ವಕ್ಫ್ ವಿಚಾರದ ಕುರಿತು ಎಲ್ಲರೂ ಮಾತಾಡ್ತಿದ್ದಾರೆ. ಅದೇ ಸಮುದಾಯದ ಓರ್ವ ಮಂತ್ರಿ ಇದನ್ನೆಲ್ಲಾ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು
ಇದು ಜಗತ್ಜಾಹಿರಾತು ಆಗಿದೆ. ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಇದರಲ್ಲಿ ಆಡಳಿತ ಪಕ್ಷದ ದೊಡ್ಡ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ. ಜನರಿಗೆ ನ್ಯಾಯ ಸಿಗೋವರಿಗೂ ಪಕ್ಷ ಮತ್ತು ನಾವು ಹೋರಾಟ ಮಾಡುತ್ತದೆ ಎಂದಿದ್ದಾರೆ.
ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸ್ವತಃ ಬಿಜೆಪಿಯೇ ತಿರಸ್ಕಾರ ಮಾಡಿದೆ: ಬೆಳಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಳಗಾವಿ; ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸ್ವತಃ ಬಿಜೆಪಿಯೇ ತಿರಸ್ಕಾರ ಮಾಡಿದೆ ಎಂದು ಬೆಳಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಣಿಪ್ಪಾಡಿ ಅವರ ವರದಿಯನ್ನು ಮಂಡನೆ ಮಾಡಿಲ್ಲ. ಇದಕ್ಕೆ ಉತ್ತರವನ್ನು ಬಿಜೆಪಿಯವರು ತಮ್ಮ ಸ್ವಂತ ಕಚೇರಿಯಲ್ಲಿ ಹುಡುಕಾಡಲಿ. ಈ ಗೊಂದಲವನ್ನು ಕಾಂಗ್ರೆಸ್ ಸೃಷ್ಟಿ ಮಾಡಿಲ್ಲ.ಈ ಆರೋಪ ಮಾಡಿದ್ದು ಬಿಜೆಪಿಯವರು ಎಂದಿದ್ದಾರೆ.
ಈಗ ಅವರೇ ಇದಕ್ಕೆ ಸ್ಪಷ್ಟನೆ ನೀಡಲಿ.ಮಾಣಿಪ್ಪಾಡಿ ಅವರು ಇವಾಗ ನಿಜ ಹೇಳುತ್ತಿದ್ದಾರಾ? ಇವಾಗ ನಿಜ ಹೇಳುತ್ತಿದ್ದಿದ್ದಾರಾ?. ಅವರ ನಾಯಕರ ವಿರುದ್ಧ ಮಾಣಿಪ್ಪಾಡಿ ಆರೋಪ ಮಾಡಿದರು .ಅವರನ್ನು ಯಾಕೆ ಉಚ್ಚಾಟನೆ ಮಾಡಿಲ್ಲ?.ಯಾಕೆ ಅವರ ಮೇಲೆ ಕ್ರಮ ಯಾಕೆ ಆಗಿಲ್ಲ.ನಮ್ಮ ಹತ್ತಿರ ಕೂಗಾಡಿದ್ರ ಹಾಗಲ್ಲ ಅವರ ಪಕ್ಷ ಕಚೇರಿಯಲ್ಲಿ ಉತ್ತರ ಹುಡುಕಲಿ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ 1,500 ಆರೋಪ ಹೇಳಿಕೆ ನಿಜ ಇರಬಹುದು.ಇದರಲ್ಲಿ ಒಟ್ಟು 4 ಲಕ್ಷ ಕೋಟಿ ಆರೋಪ ಕೇಳಿ ಬಂದಿದೆ. 1500 ಕೋಟಿ ಆರೋಪ ನಿಜ ಇರಬಹುದು ಎಂದಿದ್ದಾರೆ.
ಜೋಶಿ ಅವರಿಗೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಬಗ್ಗೆ ಮಾತನಾಡಲು ಸಮಯ ಇಲ್ಲ.ಇಂತಹ ತಪ್ಪು ವಿಚಾರ ಮಾತನಾಡುತ್ತಾರೆ. ಇಂತಹ ವಿಚಾರಕ್ಕೆ ಇಂದ್ರ ಚಂದ್ರ ಅಂತ ಕಥೆ ಕಟ್ತಾರೆ.ಅವರು ಕೇಂದ್ರ ಸಚಿವರು ಅವರ ಹೇಳಿಕೆ ನೀಜ ಇರಬಹುದು ಎಂದಿದ್ದಾರೆ.