ಮನೆ Latest News ನಾನು ಯಾವುದೇ ಕ್ರಾಂತಿ ಬಗ್ಗೆ, ಹಗಲು ಕನಸು ಬಗ್ಗೆ ಹೇಳಿಲ್ಲ; ಕೋಲಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ....

ನಾನು ಯಾವುದೇ ಕ್ರಾಂತಿ ಬಗ್ಗೆ, ಹಗಲು ಕನಸು ಬಗ್ಗೆ ಹೇಳಿಲ್ಲ; ಕೋಲಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ.

0

ಕೋಲಾರ; ನಾನು ಯಾವುದೇ ಕ್ರಾಂತಿ ಬಗ್ಗೆ, ಹಗಲು ಕನಸು ಬಗ್ಗೆ ಹೇಳಿಲ್ಲ  ಎಂದು ಕೋಲಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇನೆ. ಯಾವುದೇ ಪಕ್ಷ ಯಾವುದೇ ನಾಯಕರು ಏನ್ ತೀರ್ಮಾನ ಮಾಡುತ್ತಾರೋ ಎಂದು. ನಾವು ಯಾರೂ ಊಹೆ ಮಾಡಕ್ಕಾಗಲ್ಲ. ನಮ್ಮ ಪಕ್ಷದ ನಾಯಕರು ಮೈ ಮರೆಯದೆ ಕೆಲಸ‌ ಮಾಡುವಂತೆ ಕರೆ‌ ನೀಡಿದ್ದೇನೆ. ಏನೂ ಬೇಕಾದ್ರು ಆಗಬಹುದು ಎಂದು ಹೇಳಿದ್ದೆ ಹೊರತು. ಸರ್ಕಾರ 6 ತಿಂಗಳಲ್ಲಿ ಬೀಳುತ್ತೆ ಎಂದು ನಾನು ಹೇಳಿಲ್ಲ. ನಾನೂ ಊಹೆಯಲ್ಲೂ ಇಲ್ಲ ಹಾಗಂತ ಭ್ರಮೆಯಲ್ಲೂ ನಾನಿಲ್ಲ. ಮುಖ್ಯಮಂತ್ರಿ ಅವಕಾಶ ಸಿಕ್ಕಾಗ ಎಷ್ಟೆ ಬೇಕೋ ಅಷ್ಟು ಲೂಟಿ ಮಾಡಬೇಕು ಅನ್ನೋದೆ ಅವರ ಉದ್ದೇಶ ಎಂದಿದ್ದಾರೆ.

ನಿನ್ನೆ ನಡೆದ ೨೫ ನೇ ವರ್ಷದ ಕಾರ್ಯಕ್ರಮ ದಲ್ಲಿ ನಾನು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ.ಈಗಿನ ಸರ್ಕಾರ ೧೩೬ ಸ್ಥಾನ ಗೆದ್ರೂ ಸಹ ಗ್ಯಾರಂಟಿ ಘೋಷಣೆ ಮಾಡಿ ಅದನ್ನ ಬಿಟ್ಟು ಮುಂದೆ ಹೋಗಿಲ್ಲ.ಗ್ಯಾರಂಟಿಯಿಂದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರಾ, ಯಾವ ಪರಿಸ್ಥಿತಿ ರಾಜ್ಯದ ಜನ ಎದುರಿಸುತ್ತಿದ್ದಾರೆ. ಮೆಕ್ಕೆ ಜೋಳ ಬೆಲೆ ಸಿಗದೆ ರೈತರ ಪರಿಸ್ಥಿತಿ ಏನೂ, ಕೋಲಾರದ ರೈತರ‌ ಜೀವನ ಸುಧಾರಿಸಿದ್ಯಾ. ತೆರಿಗೆ ಅನ್ನೋದು ಹಲವಾರು ರೀತಿಯಲ್ಲಿ ದಾಖಲೆ ಪ್ರಕಾರ ಮಾಡಿದ್ದಾರೆ. ಏಳೂವರೆ ಲಕ್ಷ ಕೋಟಿಯಲ್ಲಿ ಐದುವರೆ ಕೋಟಿ ಸಾಲ ಇವರೆ ಮಾಡಿದ್ದು. ಇವರು ಸಿಎಂ ಆದಾಗ, ಆರ್ಥಿಕ ತಜ್ಞರಾಗಿ ಇಷ್ಟೋಂದು ಸಾಲ ಮಾಡಿದ್ದು.ಇವರ ಸಾಧನೆ ಏನೂ, ಜಾತಿ ಗಣತಿ ಕೂಡ ಅಷ್ಟಕ್ಕೆ ಅಷ್ಟೆ. ಎರಡುವರೆ ವರ್ಷ ಇವರೇನ್ ಮಾಡಿದ್ದು.೨ ತಿಂಗಳಾಯ್ತು ಜಾತಿ ಗಣತಿ ವಿಚಾರ ಬಂದು ಸದ್ದು ಗದ್ದಲ ಇಲ್ಲ.ಹೇಳೋದಕ್ಕೆ ಹೋದ್ರೆ ಜಾಸ್ಥಿ ವಿಚಾರನೆ ಇದೆ ಆದ್ರೆ ನಾನು ಹೇಳಲ್ಲ ಎಂದಿದ್ದಾರೆ.

ಒಕ್ಕಲಿಗ ಶಾಸಕರ ದೆಹಲಿ ಪೆರೆಡ್ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಯಾವ ವಿವಾರಕ್ಕೆ ಹೋಗಿದ್ರು ನನಗೆ ಗೊತ್ತಿಲ್ಲ. ಇಲ್ಲಿ ಪ್ರಾಧಾನ್ಯತೆ ಒಕ್ಕಲಿಗ ಮುಖ್ಯವಲ್ಲ. ಇಲ್ಲಿ ಸರ್ಕಾರ ನಡೆಯುತ್ತಿರುವುದು ೭ ಕೋಟಿ ಜನರ ಪರವಾಗಿ. ಮೈತ್ರಿ ಎಲ್ಲಾ ಚುನಾವಣೆಗಳಲ್ಲೂ ಸಾಧ್ಯ ಇಲ್ಲ, ಕೆಲವು ಸ್ಥಳೀಯ ಚುನಾವಣೆಗಳಲ್ಲಿ ಸಾಧ್ಯ ಇಲ್ಲ.ವಿಧಾನಸಭೆ, ಲೋಕಸಭೆ ಚುನಾವಣೆ ಬಂದಾಗ ಮೈತ್ರಿ ಧರ್ಮ ಇರುತ್ತೆ. ರಾಜ್ಯ ರಾಜಕಾರಣಕ್ಕೆ ಜನ ಬಯಸಿದಾಗ ಜನ ಕರೆದುಕೊಂಡು ಬರುತ್ತಾರೆ.ಬಿಹಾರ ಚುನಾವಣೆ ನಡೆದಿರುವುದೆ ಬೇರೆ ರೀತಿಯಲ್ಲಿ.ನಿತೀಶ್ ಕುಮಾರ್ ೨೦ ವರ್ಷಗಳಿಂದ ಜನ ಸಂಪರ್ಕದಲ್ಲಿದ್ದಾರೆ.ಅಲ್ಲಿಯ ಚುನಾವಣೆಯ ಪ್ಯಾಟರ್ನ್ ಬೇರೆ, ರಾಜ್ಯದ ಪ್ಯಾಟರ್ನೆ ಬೇರೆ. ಕಾಂಗ್ರೆಸ್ ಪಕ್ಷ ಸಿಎಂ ಸ್ಥಾನದ ಪೈಪೋಟಿ ನಡೆಯುತ್ತಿದೆ.ಅದು ಬಿಟ್ರೆ ರಾಜ್ಯದಲ್ಲಿ ಸಿಎಂ ಆಗಿ ಎಷ್ಟು ಲೂಟಿ ಮಾಡಬೇಕು ಅನ್ನೋದಷ್ಟೆ ಕಾಂಗ್ರೆಸ್ ಲೆಕ್ಕಾಚಾರ.ಎತ್ತಿನಹೊಳೆ ಯೋಜನೆ ಆರಂಭವಾಗಿ ೧೦ ವರ್ಷಗಳೆ ಆಯ್ತು ಆದರೂ ನೀರು ಬಂದಿಲ್ಲ.ಇದರಲ್ಲಿ ನಾನು ಬೋಳಿಸಿಕೊಳ್ಳೊದು ಇಲ್ಲ, ಅವರು ಬೋಳಿಸೋದು ಇಲ್ಲ.ಎರಡು ವರ್ಷ ಎರಡು ವರ್ಷ ಎಂದೆ ಹೇಳಿಕೊಂಡೆ  ಬರುತ್ತಿದ್ದಾರೆ. ೨೦೧೩ ರಲ್ಲಿ ಇಲ್ಲಿ ಮದುವೆಗೆ ಬಂದ ವೇಳೆ ನಾನು ಹೇಳಿದ್ದೆ ಈಗಲೂ ಅದನ್ನೆ ಹೇಳುತ್ತೇನೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.