ಬೆಂಗಳೂರು; ನಾನು ಯಾವ ಶಕ್ತಿ ಪ್ರದರ್ಶನ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಾಸಕರ ಡಿನ್ನರ್ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಯಾವ ಶಕ್ತಿ ಪ್ರದರ್ಶನ ಮಾಡಿಲ್ಲ.ರೆಸ್ಟ್ ಮಾಡಲು ಕೆಲವರು ಫಾರಿನ್ ಹೋಗ್ತಾರೆ. ಕೆಲವರು ದೆಹಲಿ ಹೋಗ್ತಾರೆ. ನಿನ್ನೆ ಸಭೆಗೂ ನನಗೂ ಸಂಬಂಧ ಇಲ್ಲ.ಕೆಲವರು ಅನೇಕ ಆಸೆ ಇಟ್ಟುಕೊಂಡಿರ್ತಾರೆ.ಮಂತ್ರಿಯಾಗಬೇಕು ಅಂತ ಕನಸು ಇರ್ತದೆ.ನಾನು, ಪರಮೇಶ್ವರ್ ಬಹಳ ಚಿಕ್ಕ ವಯಸ್ಸಲ್ಲೇ ಮಂತ್ರಿ ಆದೆವು. ದೆಹಲಿಯವರಿಗೆ ಮಾತಾಡ್ತೇನೆ.ನನಗೆ ಗೊತ್ತಿಲ್ಲ ಏನು ಸಭೆ ಮಾಡಿದ್ದಾರೆ ಎಂದಿದ್ದಾರೆ.
ವಿನಯ್ ಕುಲಕರ್ಣಿ ಗೆ ಜಾಮೀನು ವಿಚಾರದ ಬಗ್ಗೆ ಮಾತನಾಡಿದ ಅವರು ಯಾರೇ ಒಬ್ಬ ವ್ಯಕ್ತಿ ಗೆ ಕಿರುಕುಳ ಕೊಡೋದಕ್ಕೂ ಒಂದು ಲಿಮಿಟ್ ಇದೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರಾಜಕೀಯವಾಗಿ ಕ್ಲೋಸ್ ಆಗಿದ್ದ ಕೇಸ್ ಯಡಿಯೂರಪ್ಪ ಸರ್ಕಾರ ಸಿಬಿಐಗೆ ನೀಡಿತ್ತು, ತೊಂದ್ರೆ ಕೊಡುತ್ತಿದ್ದರು. ವರ್ಷ ಗಟ್ಟಲೇ ಚುನಾವಣೆ ಯಲ್ಲಿ ಊರಿಗೆ ಹೋಗಬಾರದು ಎಂದು ಆದೇಶ ಬಂದಿತ್ತು.ಅವಾಗ ಏನೂ ಮಾತಾಡದೇ ಕೋರ್ಟ್ ಗೆ ಗೌರವ ನೀಡಿದರು. ಇವತ್ತು ಏನು ಆಯ್ತು, ಇದು ಸರಿಯಿಲ್ಲ ಎಂದು ಬೇಲ್ ಕೊಟ್ಟಿದೆ.ನಾನು ಎಲ್ಲಾ ನೋಡುತ್ತಿದ್ದೇನೆ, ದಾಖಲೆ ಸಾಕ್ಷಿ ಸಲ್ಲಿಸಿ ತೊಂದ್ರೆ ಕೊಡುತ್ತಿದ್ದಾರೆ. ಕೊನೆಗೆ ಆದರೂ ನ್ಯಾಯ ಸಿಕ್ಕಿದೆ. ಆದರೆ ಅವರು ಅನುಭವಿಸಿದ ನೋವು ಜಾಸ್ತಿ, ಕುಟುಂಬ,, ಮಕ್ಕಳು ನೋವು ಅನುಭವಿಸಿದ್ದರು. ನಮ್ಮ ಪಕ್ಷ, ಕಾರ್ಯಕರ್ತ ರು ಕೂಡ ನೋವು ಅನುಭವಿಸಿದ್ದಾರೆ ನಾನು ಕೂಡ ಹಿಂದೆ ಅಂತಹ ಸಮಸ್ಯೆ ಅನುಭವಿಸಿದ್ದೆ. ದೇವರು ಅವರಿಗೆ ಶಕ್ತಿ ನೀಡಲಿ, ಕೋರ್ಟ್ ನ್ಯಾಯ ಕೊಟ್ಟಿದೆ, ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋಗಿ ಶಾಸಕರಿಂದ ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ದಯವಿಟ್ಟು ಬೇಡ ಅಂತ ನಾನು ಮನವಿ ಮಾಡುತ್ತೇನೆ.ನನ್ನ ಪರ ಮಾತಾಡೋದು ಬೇಡ.ನಿಮ್ಮ ನಿಮ್ಮ ಸಮಸ್ಯೆ ಇದ್ರೆ ಹೋಗಿ. ಮಂತ್ರಿ, ಅಧಿಕಾರ ಬೇಕು ಅಂದ್ರೆ ಹೋಗಿ, ಚೇರ್ಮನ್ ಬೇಕಾದರೇ ಹೋಗಿ. ನನ್ನ ವಿಚಾರಕ್ಕೆ ದೆಹಲಿಗೆ ಹೋಗೋದು ಬೇಡ ಅಂತ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.











