ಬೆಂಗಳೂರು; ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ರಾಜಕೀಯಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಇಬ್ಬರು ಸಿನಿಯರ್ ನಾಯಕರು ಇಷ್ಟು ಬಾಲಿಶವಾಗಿ ನಡೆದುಕೊಳ್ಳೋದು ನೋಡಿಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಹಲವಾರು ರಾಜಕೀಯ ಏಳು ಬೀಳು ಆಗಿವೆ. ಕರ್ನಾಟಕದ ಜನರು ಮೂರ್ಖರು ಅಲ್ಲ. ಇಷ್ಟೆಲ್ಲ ಆಗಿ ರಾಜಕೀಯ ಕುರ್ಚಿಗಾಗಿ ಬಳಸಿಕೊಂಡು ಈಗ ಏನು ನಡೆದಿಲ್ಲ ಅಂತಾ ಹೀಗೆ ಮಾಡೊದು ಹೇಗೆ. ಕರ್ನಾಟಕದ ಜನರ ಭಾವನೆಗಳು ಕೂಡ ಇದಾವೆ ಅದಕ್ಕೆ ಗೌರವ ಇಲ್ಲ.. ಭೇಟಿ ಮಾಡಿದ ಬಳಿಕ ಹೈಕಮಾಂಡ್ ಹೇಳಿದಾಗೆ ಕೇಳ್ತಿವಿ ಅಂತಾರೆ. ಇದಕ್ಕೆ ಯಾಕೆ ಸೇರಬೇಕು. ಇದರಿಂದ ಪರಸ್ಪರ ಒಪ್ಪಂದ ಆಗಿಲ್ಲ ಅಂತಾ ಆಯ್ತಲ್ವಾ? ರೈತರು ಸಂಕಷ್ಟ ಇದಾರೆ,ಶಿಕ್ಷಣ ಹಾಳಾಗಿದೆ ಮೂರು ಬಾರಿ ಎಸ್ ಎಸ್ ಎಲ್ ಸಿಸಿ ಪರೀಕ್ಷೆ ಕೊಡಲಾಗಿದೆ ಇದು ಹೇಗೆ.ಅಭಿವೃದ್ಧಿ ಸಂಪೂರ್ಣ ನಿಂತಿದೆ ಸಿಎಂ ಗೆ ಇದು ಗೊತ್ತಿಲ್ಲ.ಓಬಿಸಿ ಅಭಿವೃದ್ಧಿ ಮಾಡ್ತಿವಿ ಅಂತಾರೆ ಎಸ್ ಸಿ ಎಸ್ ಟಿ ಹಣ ಖರ್ಚು ಮಾಡಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಡೆತಿದೆ ಪೈಪೋಟಿ ಇದೆ. ದೊಡ್ಡದಾಗಿ ಭ್ರಷ್ಟಾಚಾರ ಇದೆ. ಇದೆಲ್ಲ ಕಾಂಗ್ರೆಸ್ ಹೈಕಮಾಂಡ್ ವೀಕ್ ಇದೆ ಅಂತಾ ತೋರಿಸುತ್ತೆ. ಇದು ಬರೀ ಇಂಟರ್ ವೇಲ್ ಫಿಚ್ಚರ್ ಅಭಿ ಬಾಕಿ ಹೈ ಅದು ಕೇಲವೇ ದಿನಗಳಲ್ಲಿ ಬಿಡುಗಡೆ ಆಗುತ್ತೆ. ಏನ್ ಬೇಕಾದರೂ ಆಗಬಹುದು ಈ ಬೆಳವಣಿಗೆ ನೋಡೊದಾದ್ರೆ. ಸಿಎಂ ಮೊದಲ ಸುತ್ತಿನಲ್ಲಿ ಐದು ವರ್ಷ ನಾನೇ ಸಿಎಂ ಅಂದ್ರು ಸಿದ್ದರಾಮಯ್ಯ. ಎರಡನೇ ಸುತ್ತಿನಲ್ಲಿ ಗ್ರೌಂಡ್ ನಲ್ಲಿ ಮೇಕಪ್ ಮಾಡಿಕೊಂಡಿದ್ದಾರಂತೆ. ಮೂರನೇ ಸುತ್ತು ನೋಡಬೇಕು. ಜನರಿಗೆ ಯಾವಾಗ ಸರ್ಕಾರ ತೊಲುಗುತ್ತೋ ಅಂತಾ ಕಾದಿದ್ದಾರೆ.ರಾಜಕೀಯ ಆಡಳಿತ ಪಕ್ಷದ ನಿರ್ಧಾರ ಮೇಲೆ ಆಗುತ್ತೆ. ಅವಿಶ್ವಾಸ ಮಂಡಿಸಲು ಪ್ರಬಲ ಕಾರಣ ಇದೆ. ಮತ್ತೆ ಯಾಕೆ 140 ಇದ್ದರು ಜಗಳ ಆಡ್ತಿರಾ,ಸುಮ್ಮನೆ ಮತ್ತೆ ಯಾಕೆ ಕಿತ್ತಾಡ್ತಿರಾ. ಎಲ್ಲಾ ಅವಿಶ್ವಾಸ ನಿರ್ಣಯ ಯಶಸ್ಸು ಆಗುತ್ತೆ ಅಂತಾ ಅಲ್ಲ. ಆಡಳಿತ ಸರಿಯಲ್ಲ ಅಂದಾಗ ವಿಪಕ್ಷ ನಾಯಕರು ತಿರ್ಮಾನ ಮಾಡ್ತಾರೆ. ಸ್ಥಿರವಾಗಿರುವ ಸರ್ಕಾರ ಗಟ್ಟಿಯಾದ ನಾಯಕತ್ವ ಇದ್ದಾಗ ಹೈಕಮಾಂಡ್ ನೋಡುತ್ತೆ. ಅದು ಇಲ್ಲದೆ ಇದ್ದಾಗ ಹೈಕಮಾಂಡ್ ಸ್ಟ್ರಾಂಗ್ ಆಗಿರುತ್ತೆ. ರೆಬೆಲ್ ತಂಡ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಅಂದಿದ್ದಾರೆ.











