ಬೆಂಗಳೂರು; ಕರ್ನಲ್ ಸೋಪಿಯಾ ಖುರೇಷಿ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಕರ್ನಲ್ ಸೋಪಿಯಾ ಖುರೇಷಿ ಬಗ್ಗೆ ಅವಹೇಳನ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಬೆಳಗಾವಿಯ ಸೊಸೆ. ಅವರ ಪತಿ ಬೆಳಗಾವಿ ಜಿಲ್ಲೆಯವರು. ನಿನ್ನೆ ಬೆಳಗಾವಿ ಎಸ್‌ಪಿ ಹೇಳಿಕೆ ನೀಡಿದ್ದಾರೆ. ಅವರು ಎಫ್‌ಐಆರ್ ದಾಖಲಿಸಿಕೊಂಡು ಕೇಸ್ ರಿಜಿಸ್ಟರ್ ಮಾಡ್ತಾರೆ. ಮುಂದೆ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ. ಕ್ರಮ ತೆಗೆದುಕೊಳ್ಳಲು ಸೂಚನೆ ಕೊಡಿ ಎಂದು ಕೇಳ್ತೇವೆ. ಇದು ಅವರಿಗಷ್ಟೇ ಮಾಡಿದ ಅವಮಾನ ಅಲ್ಲ. ರಾಜ್ಯಕ್ಕೆ, ದೇಶಕ್ಕೆ ಮಾಡಿದ ಅಪಮಾನ.ಇಂತಹ ಸಂದರ್ಭದಲ್ಲಿ ಕೀಳು ಮನಸ್ಥಿತಿ ಯಾರಿಗೂ ಬರಬಾರದು.ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವ ಸೂಚನೆ ಕೊಟ್ಟಿದ್ದೇವೆ ಎಂದರು.
ಕೇಂದ್ರದಿಂದ ಅನುದಾನ ತಾರತಮ್ಯ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಕೊಡಿ ಅಂತ ಕೇಳ್ತಿದ್ದೇವೆ. ಕೆಲವು ಸಲ ಅನುದಾನ ಬರಲು ವಿಳಂಬ ಆಗುತ್ತೆ. ಕೆಲವು ಕಾರಣಕ್ಕೆ ಅನುದಾನ ಬರುವುದೇ ಇಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ನಿನ್ನೆ ರಿವ್ಯೂವ್ ಮೀಟಿಂಗ್ ಮಾಡಿದ್ದಾರೆ. ಸಂಸದರಿಗೆಲ್ಲಾ ಮನವಿ ಮಾಡಿದ್ದಾರೆ. ಕೇಂದ್ರಕ್ಕೆ ಪತ್ರ ಬರೆದು ಹಣ ಬಿಡುಗಡೆಗೆ ಮನವಿ ಮಾಡಿ ಅಂತ ಹೇಳಿದ್ದಾರೆ. ತಕ್ಷಣಕ್ಕೆ ಕೇಂದ್ರದಿಂದ 5000 ಕೋಟಿ ಹಣ ಬರಬೇಕು. ರಾಜ್ಯ ಮತ್ತು ಕೇಂದ್ರದ ಅಡಿಯಲ್ಲಿ ನಾವು ಅನುದಾನ ತೆಗೆದುಕೊಳ್ಳಬೇಕು. ಕಳೆದ ಬಾರಿಯೂ ನಾವು ದೆಹಲಿಗೆ ಹೋಗಿ ಪ್ರತಿಭಟನೆ ಮಾಡೋ ಪರಿಸ್ಥಿತಿ ಬಂತು. ಕೇಂದ್ರ ಮತ್ತು ರಾಜ್ಯದ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಆ ರೀತಿ ಆಗಬಾರದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಕೆಲವು ನಿಯಮ ಇದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಮಗೆ ಕೊಡಬೇಕಾದ ಹಣ ಕೊಟ್ಟರೆ ನಾವು ಯಾಕೆ ಒತ್ತಾಯ ಮಾಡೋಕೆ ಹೋಗ್ತೀವಿ?. ಸರಿಯಾದ ಸಮಯಕ್ಕೆ ಆಗಲಿಲ್ಲ ಅಂದ್ರು ಸ್ವಲ್ಪ ಹಿಂದು-ಮುಂದು ಹಣ ಕೊಡಬೇಕು.ಹಣ ಬಿಡುಗಡೆಯಾದ್ರೆ ರಾಜ್ಯಗಳು ಅಭಿವೃದ್ಧಿ ಆಗುತ್ತೆ. ನಾನು ಕೂಡ ಅನುದಾನ ಕೊಡಿ ಅಂತ ಒತ್ತಾಯ ಮಾಡ್ತೇನೆ ಎಂದು ತಿಳಿಸಿದ್ರು.
ದಿಶಾ ಸಭೆಗೆ ಸಂಸದರು ಗೈರು ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ಲ ಅದು ಸ್ವಾಭಾವಿಕ, ಅವರ ಕೆಲಸ ಕಾರ್ಯ ಇದ್ರೆ ಬಂದಿರಲ್ಲ.ನಾವು ಅವರಿಗೆ ಗೌರವ ಕೊಡುತ್ತೇವೆ, ಅವರು ಯಾಕೆ ಗೈರಾಗಿದ್ದಾರೋ ಗೊತ್ತಿಲ್ಲ. ಸರ್ಕಾರದ ವತಿಯಿಂದ, ಸಿಎಂ ಅವರು ಗೌರವ ಕೊಡುತ್ತಾರೆ. ಅದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದ ಅವರು ಗ್ರೇಟರ್ ಬೆಂಗಳೂರು ಜಾರಿ ವಿಚಾರದ ಬಗ್ಗೆ ಮಾತನಾಡಿ ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ತಂದವರು ಡಿಕೆ ಶಿವಕುಮಾರ್ ಅವರು. ಡಿಕೆ ಶಿವಕುಮಾರ್ ಅವರಿಗೆ ನಾನು ಹುಟ್ಟು ಹಬ್ಬದ ಶುಭಾಶಯ ಕೋರುತ್ತೇನೆ. ಅವರ ಈ ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ಯಶಸ್ವಿ ಆಗಲಿ. ಇದು ಬೆಂಗಳೂರಿಗೆ ಹೊಸ ರೀತಿಯಲ್ಲಿ ಆಗುತ್ತದೆ.ಪ್ರಪಂಚದಲ್ಲಿ ದೊಡ್ಡ ದೊಡ್ಡ ಪಟ್ಟಣಗಳು ಹೇಗಿವೆ ಅಂತ ನೋಡಿದ್ದೇವೆ.ಈ ಕಾನ್ಸೆಪ್ಟ್ ಯಾವ ರೀತಿ ಕೆಲಸ ಮಾಡುತ್ತದೆ ನೋಡೋಣ. ಸ್ವಲ್ಪ ದಿನಗಳಲ್ಲಿ ಫಲಿತಾಂಶ ಗೊತ್ತಾಗುತ್ತದೆ, ನೂನ್ಯತೆಗಳಿದ್ರೆ ಸರಿಪಡಿಸೋಣ.ಆಡಳಿತ ವಿಕೇಂದ್ರೀಕರಣ ಜೊತೆಗೆ ಕಾರ್ಯಕ್ರಮ, ಯೋಜನೆಗಳಿಗೆ ಫೋಕಸ್ ಮಾಡಲು ಸಾಧ್ಯವಾಗುತ್ತದೆ. ಒಬ್ಬರೆ ಅಧಿಕಾರಿಯಿದ್ರೆ ಫೋಕಸ್ ಮಾಡಲು ಕಷ್ಟ ಆಗುತ್ತದೆ. ಹೀಗಾಗಿ ಅಧಿಕಾರಿಗಳು ಜಾಸ್ತಿ ಆದ್ರೆ ಸುಲಭವಾಗುತ್ತದೆ ಎಂದರು.
ಮೇ 20ಕ್ಕೆ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಮೇ 20 ಕ್ಕೆ ಬಹಳ ದೊಡ್ಡ ಕಾರ್ಯಕ್ರಮ ಮಾಡ್ತಿದ್ದೇವೆ. ಮುಖ್ಯವಾಗಿ ಇದು ಕಂದಾಯ ಇಲಾಖೆಯ ಕಾರ್ಯಕ್ರಮ. ಕಂದಾಯ ಇಲಾಖೆಯಿಂದ ಜನರಿಗೆ ಹಕ್ಕು ಪತ್ರ ಕೊಡ್ತಿದ್ದೇವೆ. ಕೃಷ್ಣಬೈರೇಗೌಡರು ಸುಮಾರು 50 ಸಾವಿರ ಜನರಿಗೆ ಹಕ್ಕು ಪತ್ರ ಕೊಡುವ ಕಾರ್ಯಕ್ರಮ ಮಾಡ್ತಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮ.ಕಾರ್ಯಕ್ರಮಕ್ಕೆ ನಮ್ಮ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬರ್ತಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಲ್ಲರೂ ಬರ್ತಾರೆ. ಸಾಧನಾ ಸಮಾವೇಶ ಅಂತಲ್ಲ, ಇದೊಂದು ಸರ್ಕಾರದ ಕಾರ್ಯಕ್ರಮ. ಸರ್ಕಾರಕ್ಕೆ ಎರಡು ವರ್ಷ ಆಗಿದೆ. ಸರ್ಕಾರದ ಸಾಧನಾ ಸಮಾವೇಶ ಬೇರೆ ಮಾಡ್ತೇವೆ .ಸಾಧನಾ ಸಮಾವೇಶ ಕಾರ್ಯಕ್ರಮ ಇನ್ನೊಂದು ಮಾಡುತ್ತೇವೆ ಎಂದು ತಿಳಿಸಿದ್ರು.