ಬೆಂಗಳೂರು: ಗೃಹ ಬಳಕೆಯ ಬುಕ್ ಮಾಡಿದ 26ನೇ ದಿನದ ಸಂಜೆಯೊಳಗೆ ಸಿಲಿಂಡರ್ ಕೊಡಬೇಕೆಂದು ಸೂಚಿಸಿದ್ದೇನೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ವಾಣಿಜ್ಯ ಸಿಲಿಂಡರ್ ನಲ್ಲಿ ಸುಧಾರಣೆ ಆಗಿದೆ. ಆಟೋ ಗ್ಯಾಸ್ ನಲ್ಲಿ ಸುಧಾರಣೆ ಆಗಿಲ್ಲ. ನಾವೂ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ರಾಜ್ಯದಿಂದ ಆಟೋ ಚಾಲಕರಿಗೆ ಎಷ್ಟುಸಹಾಯ ಮಾಡಬಹುದು ಅನ್ನೋ ವಿಚಾರವಾಗಿ ಸಭೆ ನಡೆಸಿದ್ದೇವೆ. ಕೇಂದ್ರ ಜವಾಬ್ದಾರಿಯಿಂದ ನಿರ್ವಹಣೆ ಮಾಡಿಲ್ಲ. ಬೆಂಗಳೂರಿನಲ್ಲಿ 1.60 ಆಟೋ ಬಂಕ್ ಏಜೆನ್ಸಿಗಳಿವೆ. ಆದಷ್ಟು ಬೇಗ ಆಟೋ ಗ್ಯಾಸ್ ಗೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಆಟೋ ಗ್ಯಾಸ್ ಬಳಕೆ ಆಗುತ್ತಿದೆ. ಇದು ಕೇಂದ್ರದ ವಿಫಲತೆ. ಸಾಮಾನ್ಯ ಜನರ ಪರವಾಗಿ ಸಂಸ್ಥೆಗಳು ಭಾಗಿಯಾಗಬೇಕು. ವಾಣಿಜ್ಯ ಸಿಲಿಂಡರ್ ಸುಧಾರಣೆ ಆಗಿದೆ. ಆಸ್ಪತ್ರೆ, ಶಾಲೆ, ಏರ್ಪೋರ್ಟ್ ಗೆ ಸಿಲಿಂಡರ್ ಸಿಗ್ತಿದೆ. ಕೂಡಲೇ ಕ್ರಮ ತೆಗೆದುಕೊಂಡು ಕೇಂದ್ರ ಸಮಸ್ಯೆ ಬಗೆಹರಿಸಬೇಕು. ಗೃಹ ಬಳಕೆದು 26ನೇ ದಿನ ಸಿಲಿಂಡರ್ ಸಿಗುವಂತೆ ಮಾಡಬೇಕು ಅಂತ ತಿಳಿಸಿದ್ದೇನೆ. ಮೊದಲು ಒಂದು ವಾರಕ್ಕೆ ಸಿಲಿಂಡರ್ ಕೊಡ್ತಿದ್ದೆವು. ಈಗ 26ನೇ ದಿನಕ್ಕೆ ಬುಕ್ ಮಾಡಿದ ನಂತರೆ ಸಿಲಿಂಡರ್ ವಿತರಣೆ ಆಗ್ತಿದೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಗೃಹ ಬಳಕೆಯ ಸಿಲಿಂಡರ್ ಗೆ ಮುಂಗಡ ಬುಕ್ಕಿಂಗ್ ಬೇಡ. ಬುಕ್ ಮಾಡಿದ 26ನೇ ದಿನದ ಸಂಜೆಯೊಳಗೆ ಸಿಲಿಂಡರ್ ಕೊಡಬೇಕೆಂದು ಸೂಚಿಸಿದ್ದೇನೆ. ಆಗ ಎಲ್ಲೂ ಕ್ಯೂ ಇರಲ್ಲ. ಆಟೋ ಗ್ಯಾಸ್ ನ್ನ 3 ಲಕ್ಷ ಜನ ಬಳಕೆ ಮಾಡ್ತಿದ್ದಾರೆ. 3 ಸಾವಿರ ಕೊಡುವವರು 5 ಸಾವಿರ ಮೆಟ್ರಿಕ್ ಟನ್ ನಷ್ಟು ಕೊಡಲಾಗ್ತಿದೆ. ಸದ್ಯ ಖಾಸಗಿ ಗ್ಯಾಸ್ ಬಂಕ್ ಬಂದ್ ಹಿನ್ನೆಲೆ ನಾವು ಪೂರೈಕೆ ಮಾಡಲು ಕಷ್ಟ ಆಗ್ತಿದೆ. ಸದ್ಯ ಅಗತ್ಯಕ್ಕಿಂತ ನಾವು ಹೆಚ್ಚಳವಾಗಿ ಕೊಡ್ತಿದ್ದೇವೆ . ದರ ಏರಿಕೆಗೆ ಕೇಂದ್ರ ಕಡಿವಾಣ ಹಾಕಬೇಕು. 65% ಖಾಸಗಿ ಬಂಕ್ ಗಳಿವೆ. ನಿನ್ನೆ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹ ಪತ್ರ ಬರೆದಿದ್ದಾರೆ. ಕೇಂದ್ರ ವಿಫಲವಾಗಿದೆ ಎಂದಿದ್ದಾರೆ.
ನಮ್ಮ ಪತ್ರಕ್ಕೆ ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. ಆದ್ರೆ ವಾಣಿಜ್ಯ ಸಿಲಿಂಡರ್ ಹೆಚ್ಚಳ ಆಗಿದೆ. ಎಲ್ಲಾ ವ್ಯವಹಾರ ಕೇಂದ್ರ ಸರ್ಕಾರದ್ದೇ. ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಮಾಡುವುದೊಂದೇ ಪರಿಹಾರ. ಕೇಂದ್ರಕ್ಕೆ ಎರಡು ವಿಚಾರ ತಿಳಿಸಿದ್ದೇವೆ. ಆಟೋ ಚಾಲಕರು ಗ್ಯಾಸ್ ಇಲ್ಲದೆ ಸಮಸ್ಯೆ ಆಗಿದೆ. ಕೇಂದ್ರ ಸರ್ಕಾರವೇ ಆಟೋ ಚಾಲಕರಿಗೆ ಪರಿಹಾರ ಕೊಡಬೇಕು. ದರ ಏರಿಕೆ ಬಗ್ಗೆ ಕೇಂದ್ರ ಮಧ್ಯ ಪ್ರವೇಶ ಮಾಡ್ಬೇಕು. ಹೋಂ ಮಿನಿಸ್ಟರ್ ಗೂ ಬಂಕ್ ಮುಂದೆ ಭದ್ರತೆ ನೀಡಲು ಮನವಿ ಮಾಡಿದ್ದೇನೆ. ದರ ಏರಿಕೆ ಮಾಡಿದ್ರೆ ಸೀಜ್ ಮಾಡಲು ಸಲಹೆ ನೀಡಿದ್ದೇನೆ. 29 ಎಫ್ ಐಆರ್ ಆಗಿದೆ. ಸಿಲಿಂಡರ್ ಗಳನ್ನ ಸೀಜ್ ಮಾಡಲಾಗಿದೆ. ಕೇಂದ್ರದ ಗಮನ ಸೆಳೆದಿದ್ದೇವೆ. 3-4 ಸಿಲಿಂಡರ್ ಸಾವಿರ ಕೊಡ್ತಿದ್ದೇವೆ.ಒಟ್ಟಾರೆ 10 ಸಾವಿರ ಸಿಲಿಂಡರ್ ಪೂರೈಕೆ ಆದ್ರೆ ಕಷ್ಟ ಪರಿಹಾರ ಆಗಲಿದೆ. ಇನ್ನೂ 6 ಸಾವಿರ ಸಿಲಿಂಡರ್ ಹೆಚ್ಚುವರಿ ಮಾಡ್ಬೇಕು ಎಂದು ತಿಳಿಸಿದ್ದಾರೆ.
ಇನ್ನು ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ವಾಸ್ತವವಾಗಿ ಮಾತನಾಡುತ್ತೇನೆ. ಕೇಂದ್ರದ ಪಾತ್ರ ಹೆಚ್ಚಿದೆ. 26ನೇ ದಿನದಂದು ಬಂದಿಲ್ಲ ಅಂದ್ರೆ ಕ್ಯೂ ನಿಲ್ತಾರೆ. 46ನೇ ದಿನ ಗ್ರಾಮಾಂತರ ಭಾಗದಲ್ಲಿ ಸಿಲಿಂಡರ್ ಸಿಗಬೇಕು. ಸರಬರಾಜುದಾರರು ಸಹಕರಿಸಬೇಕು. ಕಾಳಚಂತೆಗೆ ಕಳುಹಿಸಬಾರದು, ದರ ದುಬಾರಿ ಮಾಡಬಾರದು. ಕೊರೊನಾವನ್ನ ನಾವು ಹೇಗೆ ನಿಭಾಯಿಸಿದ್ವಿ?. ಆ ರೀತಿ ಕೇಂದ್ರ ಮಾಡಬೇಕು, ಇದು ನಾವು ಮಾಡುವ ಕೆಲಸವಲ್ಲ. ಆಟೋ ಚಾಲಕರಿಗೆ ನೆರವು ನೀಡುವ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಕಾಳಸಂತೆಯಲ್ಲಿ ಗ್ಯಾಸ್ ಮಾರಾಟಕ್ಕೆ ಸರ್ಕಾರದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. 1429 ವಿಶೇಷ ತಂಡ ದಾಳಿ ನಡೆಸಿದೆ. 29 ಎಫ್ ಐ ಆರ್ ದಾಖಲಾಗಿದೆ. 22 ಮಂದಿಯನ್ನು ಬಂಧಿಸಿ 1694 ಸಿಲೆಂಡರ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ,











