ಬೆಂಗಳೂರು; ಬಿಜೆಪಿ ಶಾಸಕರಿಗೂ ಕೂಡ ತಾರತಮ್ಯ ಮಾಡದೇ 25 ಕೋಟಿ ಹಣ ನೀಡಿದ್ದೇನೆ, ಅವ್ರ ಕೆಲಸ ಮಾಡಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು ನಾವು ಸಮಸ್ಯೆಗಳನ್ನು ಬಗೆಹರಿಸಲು ಇದ್ದೇವೆ. ಅವರು ರಾಜಕೀಯ ಮಾಡೋಕೆ ಇದ್ದಾರೆ. ಆದ್ರೆ ನಾವು ಇದ್ದೇವೆ, ಸಿಎಂ ಕೂಡ ರಸ್ತೆ ಗುಂಡಿ ಮುಚ್ಚಲು ಸೂಚಿಸಿದ್ದಾರೆ. ಯಾವುದೇ ಗುಂಡಿಗಳು ಇರಬಾರದು.ಯಾರು ಕೂಡ ರಸ್ತೆ ಗುಂಡಿಯನ್ನು ಮಾಡೋದಿಲ್ಲ, ಬಯಸೋದೂ ಇಲ್ಲ.ಹೆಚ್ಚು ಮಳೆ ಹಾಗೂ ಟ್ರಾಫಿಕ್ ನಿಂದ ರಸ್ತೆ ಗುಂಡಿ ಆಗುತ್ತೆ. 7 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿ ಮುಚ್ಚಿದ್ದೇವೆ. ಇನ್ನೂ ಐದು ಸಾವಿರ ರಸ್ತೆ ಗುಂಡಿ ಬಾಕಿ ಇವೆ. ಪೊಲೀಸರಿಗೂ ಹಾಗೂ ಸಾರ್ವಜನಿಕರಿಗೂ ರಸ್ತೆ ಗುಂಡಿ ಬಗ್ಗೆ ಮಾಹಿತಿ ಕೊಡಲು ತಿಳಿಸಿದ್ದೇವೆ. ರಾಜಕೀಯ ಮಾಡೋವ್ರು ರಾಜಕೀಯ ಮಾಡಲಿ, ನಾವು ಏನೂ ಹೇಳೋದಕ್ಕೆ ಆಗಲ್ಲ. ಬಿಜೆಪಿ ಶಾಸಕರಿಗೂ ಕೂಡ ತಾರತಮ್ಯ ಮಾಡದೇ 25 ಕೋಟಿ ಹಣ ನೀಡಿದ್ದೇನೆ, ಅವ್ರ ಕೆಲಸ ಮಾಡಲಿ ಎಂದಿದ್ದಾರೆ.
ರಸ್ತೆಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧ. ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಜಕೀಯ ಮಾಡುವವರು ಮಾಡಲಿ. ಯಾರೂ ಸಹ ಉದ್ದೇಶಪೂರ್ವಕವಾಗಿ ರಸ್ತೆಗುಂಡಿಗಳನ್ನು ಮಾಡುವುದಿಲ್ಲ.ಅತಿಯಾದ ಮಳೆ ಬಿದ್ದ ಕಾರಣಕ್ಕೆ ಗುಂಡಿಗಳಾಗಿವೆ. 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ.
ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚಲು ಬಾಕಿಯಿದೆ. ಈ ಕಾರಣಕ್ಕೆ ಪೊಲೀಸ್ ಕಮಿಷನರ್ ಅವರಿಂದ ವರದಿ ಕೇಳಲಾಗಿದೆ. ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹ ರಸ್ತೆಗುಂಡಿಗಳು ಕಂಡರೆ ಗಮನಕ್ಕೆ ತರುವ ವ್ಯವಸ್ಥೆ ರೂಪಿಸಲಾಗಿದೆ. ಬಿಜೆಪಿ ಶಾಸಕರು ಗುಂಡಿ ಮುಚ್ಚಿಲ್ಲ ಯಾಕೆ?. “ಬಿಜೆಪಿಯವರು ರಸ್ತೆ ತಡೆಯದರೂ ಮಾಡಲಿ, ಬೇರೆ ಏನಾದರೂ ಮಾಡಲಿ. ಪ್ರತಿಯೊಬ್ಬ ಬಿಜೆಪಿ ಶಾಸಕನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗಿದೆ. ನನ್ನ ಅನುದಾನದಲ್ಲೂ ಯಾವುದೇ ತಾರತಮ್ಯ ಇಲ್ಲದೆ ನಗರದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದರೂ ಏಕೆ ರಸ್ತೆಗುಂಡಿಗಳನ್ನು ಮುಚ್ಚಿಸಿಲ್ಲ. ಅವರುಗಳು ಮೊದಲು ತಮ್ಮ ಪಾಲಿನ ಕೆಲಸ ಮಾಡಲಿ. ಅನಂತರ ರಾಜಕೀಯ ಮಾಡಲಿ.
ನಾವು ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಾವು ರಾಜಕೀಯ ಮಾಡುವುದು ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.











