ಮನೆ Latest News ಪಕ್ಷದಲ್ಲಿ ಸಂಘಟನೆಗೆ ಸರ್ಕಾರದ ಗೌರವ ಹೆಚ್ಚಿಸಲಿಕ್ಕೆ ಏನೆಲ್ಲಾ ಮಾಡಬಹುದು ಅದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿದ್ದೇನೆ;...

ಪಕ್ಷದಲ್ಲಿ ಸಂಘಟನೆಗೆ ಸರ್ಕಾರದ ಗೌರವ ಹೆಚ್ಚಿಸಲಿಕ್ಕೆ ಏನೆಲ್ಲಾ ಮಾಡಬಹುದು ಅದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿದ್ದೇನೆ; ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿಕೆ

0

ತುಮಕೂರು: ಪಕ್ಷದಲ್ಲಿ ಸಂಘಟನೆಗೆ ಸರ್ಕಾರದ ಗೌರವ ಹೆಚ್ಚಿಸಲಿಕ್ಕೆ ಏನೆಲ್ಲಾ ಮಾಡಬಹುದು ಅದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೆಹಲಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಪಕ್ಷದಲ್ಲಿ ಸಂಘಟನೆಗೆ ಸರ್ಕಾರದ ಗೌರವ ಹೆಚ್ಚಿಸಲಿಕ್ಕೆ ಏನೆಲ್ಲಾ ಮಾಡಬಹುದು. ಅದನ್ನು ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ. ನಮ್ಮಲ್ಲಿ ಏನ್ ಚರ್ಚೆ ಆಗಿದೆ ಅದು ಸಾರ್ವತ್ರಿಕವಾಗಿ ಚರ್ಚೆಗಳು ಆಗುವುದಿಲ್ಲ ಎಂದಿದ್ದಾರೆ.

ಮಾಗಡಿ ಶಾಸಕ ಬಾಲಕೃಷ್ಣ ಬರ್ತಡೇ ಡಿನ್ನೆರ್ ಮೀಟಿಂಗ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಡಿನ್ನರ್ ಮೀಟಿಂಗ್ ಗೆ ನನ್ನ ಕರೆದಿಲ್ಲ  ಕರೆದಿದ್ರೆ ಹೋಗ್ತಿದ್ದೆ. ಊಟಕ್ಕೆ ಕರೆದರೆ ಹೋಗಲು ಏನಂತೆ ಎಂದ ಅವರು ಡಿ ಕೆ ಬೆಂಬಲಿಗರಿಗೆ ಮಾತ್ರ ಕರೆದಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಾವಗಡ ಎಂಎಲ್ಎ ವೆಂಕಟೇಶ್  ಹೋಗಿದಾರೆ, ಅವರೇನು ಡಿಕೆ ಶಿವಕುಮಾರ್ ಬೆಂಬಲಿಗನಾ..? ಪಾವಗಡ ವೆಂಕಟೇಶ್ ಇಲ್ವೇನ್ರಿ ನಾಲ್ಕನೇ ಸೀರಿಯಲ್ ನಂಬರ್. ನಮ್ಮನ್ನ ಯಾರು ಬಿಟ್ಟುಹೋಗಲ್ಲ, ಎಲ್ಲರೂ ಒಟ್ಟಿಗೆ ಇದ್ದೇವೆ. 138 ಜನ ಕಾಂಗ್ರೆಸ್ ಎಂಎಲ್‌ಎ ಗಳು ಎಲ್ಲರೂ ಒಂದೇನೆ. ಸುಮ್ನೆ ಎಲ್ಲರಿಗೂ ಒಂದು ಊಟ ಹಾಕಣೋ, ಅರ್ಧ ಗಂಟೆ ಇಸ್ಪೀಟು ಆಡೋಣ ಅಂತ ಕರೆದ್ರೆ ಹೋಗ್ತಾರೆ ಎಂದಿದ್ದಾರೆ.

ಇದೇ ವೇಳೆ ದೆಹಲಿ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೆ ಎಲ್ಲಾ ಹೇಳಿದ್ದೇನೆ. ಡೆಲ್ಲಿಗೆ ಹೋದ ಸಂಧರ್ಭದಲ್ಲಿ ನಮ್ಮ ಹಿರಿಯರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದೇನೆ.  ಕರ್ನಾಟಕದಲ್ಲಿರುವ ಗೊಂದಲ ಏನಿದೆ ಇದರಿಂದ ಸರ್ಕಾರಕ್ಕೆ ಧಕ್ಕೆಯಾಗ್ತದೆ. ಗೌರವಕ್ಕೆ ಚ್ಯುತಿಯಾಗ್ತದೆ.ಪಕ್ಷಕ್ಕು ಚ್ಯುತಿಯಾಗುತ್ತದೆ, ಈ ಗೊಂದಲವನ್ನು ನೀವು ನಿವಾರಣೆ ಮಾಡಬೇಕು ಎಂದು ನಾನು ಒತ್ತಾಯ ಪೂರಕವಾಗಿ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಮುಂದಿನ ಬಾರಿ ಕಾಂಗ್ರೆಸ್ ಬರಲ್ಲ ಎಂಬ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು  ಬಾಲಕೃಷ್ಣ ಹೇಳಿರುವುದು ಅವರ ಕ್ಷೇತ್ರದಲ್ಲಿ ಇರಬಹುದು. ನಾವೆಲ್ಲ ಗೆಲ್ಲಲ್ವಾ..? 224 ರಲ್ಲಿ 138 ಜನ ಕಾಂಗ್ರೆಸ್ ಶಾಸಕರಿದ್ದೇವೆ, ಬಾಕಿ ಇನ್ನು 90 ಜನ ಸೋತಿರುವವರು ಇದ್ದಾರೆ. ಅದರಲ್ಲಿ ಸೋತಿರುವವರು ಕೆಲವರು ಗೆಲ್ತಾರೆ, ಗೆದ್ದಿರುವವರು ಕೆಲವರು ಸೋಲ್ತಾರೆ.ಇದು ರಾಜಕೀಯದಲ್ಲಿ ನಡೆಯುವಂತ ಪ್ರಕ್ರಿಯೆ.  ಕಾಂಗ್ರೆಸ್ ಪಕ್ಷ ಸದೃಡವಾಗಿದೆ ಮುಂದಿನ ಬಾರಿ ನಾವು ಗೆಲ್ತಿವಿ ಎಂದ ಅವರು  ದೆಹಲಿಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ  ಪಕ್ಷದಲ್ಲಿ ಸಂಘಟನೆಗೆ ಸರ್ಕಾರದ ಗೌರವ ಹೆಚ್ಚಿಸಲಿಕ್ಕೆ ಏನೆಲ್ಲ ಮಾಡಬಹುದು.ಅದನ್ನು ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ. ನಮ್ಮಲ್ಲಿ ಏನ್ ಚರ್ಚೆ ಆಗಿದೆ ಅದು ಸಾರ್ವತ್ರಿಕವಾಗಿ ಚರ್ಚೆಗಳು ಆಗುವುದಿಲ್ಲ ಎಂದಿದ್ದಾರೆ.