ಬೆಂಗಳೂರು: ಸಿ.ಟಿ ರವಿ ಅವರನ್ನು ಇಡೀ ರಾತ್ರಿ ಸುತ್ತಾಡಿಸಿರೋದು ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸಿ ಟಿ ರವಿ ಅವರನ್ನು ಇಡೀ ರಾತ್ರಿ ಸುತ್ತಾಡಿಸಿರೋದು ಗೊತ್ತಿಲ್ಲ. ಹಿರೇಭಾಗೆವಾಡಿ ಸ್ಟೇಷನ್‌ಗೆ ಕರೆದುಕೊಂಡು ಹೋದಾಗ ಸ್ಟೇಷನ್ಗೆ ಬಿಜೆಪಿ ನಾಯಕರು ಹೋಗಿದ್ದಾರೆ. ಹೊರಗೆ ಸುತ್ತಾಡಿಸಿರೋದು ಗೊತ್ತಿಲ್ಲ. ಪೊಲೀಸರು ಎಲ್ಲವನ್ನೂ ಕೇಳಿಯೇ ಮಾಡಲ್ಲ. ಸಿಎಂ ಆಗಲಿ, ನಾನಾಗಲಿ ಯಾವುದೇ ಸೂಚನೆ ಕೊಟ್ಟಿಲ್ಲ. ಪ್ರೊಸೀಜರ್ ಹೀಗೇ ಮಾಡಬೇಕು ಅಂತ ಹೇಳಿಲ್ಲ ಎಂದಿದ್ದಾರೆ.
ಖಾನಾಪುರ ಸ್ಟೇಷನ್‌ನಲ್ಲಿ ಇದ್ದಾಗಲೇ ರಕ್ತ ಬಂದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನನಗೆ ಗೊತ್ತಿಲ್ಲ. ಕ್ರಿಮಿನಲ್ ಆಕ್ಟಿವಿಟೀನಾ ಅಂತಾ ಎಲ್ಲವನ್ನೂ ನೋಡ್ತಿದ್ದಾರೆ. ಪೊಲೀಸರಿಗೆ ಸಂಬಂಧಿಸಿದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ. ಇದು ಕಾನ್ಫಿಡೆನ್ಸೀಶಿಯಲ್ ವಿಚಾರ. ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ನಾನು ಅಸೆಂಬ್ಲಿಯಲ್ಲಿ ಇದ್ದೆ. ವಿಚಾರ ಗೊತ್ತಾಗ ಸಿಎಂ ಹಾಗೂ ಹಿರಿಯ ಸಚಿವರು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಕಂಪ್ಲೆಂಟ್ ಮಾಡಿದ್ದಾರೆ. ದೂರಿನ ಮೇಲೆ ಬಂಧನ ಆಗಿದೆ . ಕೇವಲ ರವಿ ಮಾತ್ರ ಬಂಧನ ಆಗಿಲ್ಲ. ಕೌಂಟರ್ ಕಂಪ್ಲೆಂಟ್ ಕೂಡ ರಿಸೀವ್ ಮಾಡಿದ್ದಾರೆ. ಮೂಲತ ಇದು ಪ್ರಾರಂಭವಾಗಿದ್ದು ಹೇಗೆ. ಅವರನ್ನ ಬೈದರು ಅಂತ. ಸದನದಲ್ಲಿ ಹಿರಿಯ ಪ್ರತಿನಿಧಿಯಾಗಿ ಈ ರೀತಿ ಮಾತಾಡಿದ್ದು ಸರಿಯಲ್ಲ. ರವಿ ಹೇಳಿದ್ದಾರೆ ಅಂತ ಪಕ್ಕದಲ್ಲಿದ್ದವರು ಸಾಕ್ಷಿ ಹೇಳಿದ್ದಾರೆ ಎಂದರು.
ಇನ್ನು ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಂಬೇಡ್ಕರ್ ಅವಹೇಳನ ಮಾಡಿರೋದು. ಲಕ್ಷ್ಮಿ ಅವರ ಬಗ್ಗೆ ಹೇಳಿಕೆ ನೀಡಿರೋದು. ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆಯಾಗಿದೆ ಎಂದಿದ್ದಾರೆ.