ಮನೆ Latest News ಯಾವುದೇ ಟಾರ್ಗೆಟ್ ಇಟ್ಟುಕೊಂಡು ನಾನು ಕರಾವಳಿಗೆ ಬಂದಿಲ್ಲ; ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ಯಾವುದೇ ಟಾರ್ಗೆಟ್ ಇಟ್ಟುಕೊಂಡು ನಾನು ಕರಾವಳಿಗೆ ಬಂದಿಲ್ಲ; ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

0

ಮಂಗಳೂರು: ಯಾವುದೇ ಟಾರ್ಗೆಟ್ ಇಟ್ಟುಕೊಂಡು ನಾನು ಕರಾವಳಿಗೆ ಬಂದಿಲ್ಲ ಎಂದು ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರಾವಳಿಗೆ ನಿರಂತರ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದೇ ಟಾರ್ಗೆಟ್ ಇಟ್ಟುಕೊಂಡು ಬಂದಿಲ್ಲ. ಕಾರ್ಯಕ್ರಮ ಒಪ್ಪಿಕೊಂಡಿದ್ದೇನೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಆರ್.ಎಸ್.ಎಸ್ ಮುಖಂಡ ಕಲ್ಲಡ್ಲ ಪ್ರಭಾಕರ್ ಭಟ್ ಮೇಲೆ ಕೇಸ್ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರೇ ದ್ವೇಷದ ಭಾಷಣ ಮಾಡಿದರೂ ಎಫ್ಐಆರ್ ಹಾಕುತ್ತೇವೆ.ಸಮಾಜದಲ್ಲಿ ದ್ವೇಷ ಉಂಟು ಮಾಡುವುದು ಸರಿಯಲ್ಲ.ಅಶಾಂತಿ ನಿರ್ಮಾಣ ಮಾಡುವುದು ಸರಿಯಲ್ಲ.ಯಾರೇ ಈತರ ಭಾಷಣ ಮಾಡಿದರು ಎಫ್ಐಆರ್ ಆಗುತ್ತದೆ.ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದ ಅವರು ಆರ್.ಎಸ್.ಎಸ್ ಜಮೀನು ಕಟ್ಟಡ ಆಡಿಟ್ ವಿಚಾರದ ಬಗ್ಗೆ ಮಾತನಾಡಿ ಆ ಬಗ್ಗೆ ನನಗೆ ಗೊತ್ತಿಲ್ಲ.. ಸಚಿವ ಕೃಷ್ಣ ಬೈರೇಗೌಡ ಅವರನ್ನೇ ಕೇಳಿ ಎಂದಿದ್ದಾರೆ.

ಧರ್ಮಸ್ಥಳ ಎಸ್ಐಟಿ ತನಿಖೆ ಪ್ರಕರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತನಿಖೆಗೆ ನಾವು ಇಂಟರ್ಫಿಯರ್ ಆಗಲ್ಲ. ಗೃಹ ಸಚಿವರಿಗೆ ವರದಿ ಕೊಡಬಹುದು.ವರದಿ ಕೊಡದೆಯೇ ಇರಬಹುದು.ನನ್ನ ಬಳಿ ಏನು ಹೇಳಿಲ್ಲ.ಈ ತಿಂಗಳ ಅಂತ್ಯದಲ್ಲಿ ಕೊಡಬಹುದು ಎಂದಿದ್ದಾರೆ. ಮುಖ್ಯಮಂತ್ರಿ ರೇಸ್ ನಲ್ಲಿ ಮುನಿಯಪ್ಪ ಪರಮೇಶ್ವರ್ ಡಿಕೆಶಿ ವಿಚಾರದ ಬಗ್ಗೆ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಯಲ್ಲಿ ಇರುವವರನ್ನು ತಪ್ಪಿಸಲು ಆಗಲ್ಲ. ಸ್ಪರ್ಧೆಯಲ್ಲಿ ಇರಬೇಡಿ ಎಂದು ಹೇಳಲು ಆಗಲ್ಲ. ಪ್ರಜಾಪ್ರಭುತ್ವದಲ್ಲಿ ಕೇಳೋದು ಅವರ ಹಕ್ಕು.ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೇಳುವ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದು ತಿಳಿಸಿದ್ದಾರೆ.

ಐದು ವರ್ಷ ಸಿದ್ದರಾಮಯ್ಯ ನೇ ಸಿಎಂ ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರ ಸ್ವಂತ ಅಭಿಪ್ರಾಯ. ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.