ಮನೆ Latest News ನಾನು ಹಾಗೂ ಸಿಎಂ ಸೋತ ಅಭ್ಯರ್ಥಿ ಗಳು ಹಾಗೂ ಸಚಿವರ ಜೊತೆಗೆ ಪ್ರತ್ಯೇಕ ಸಭೆಯನ್ನು ಮಾಡುತ್ತೇವೆ;...

ನಾನು ಹಾಗೂ ಸಿಎಂ ಸೋತ ಅಭ್ಯರ್ಥಿ ಗಳು ಹಾಗೂ ಸಚಿವರ ಜೊತೆಗೆ ಪ್ರತ್ಯೇಕ ಸಭೆಯನ್ನು ಮಾಡುತ್ತೇವೆ; ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ನಾನು ಹಾಗೂ ಸಿಎಂ ಸೋತ ಅಭ್ಯರ್ಥಿ ಗಳು ಹಾಗೂ ಸಚಿವರ ಜೊತೆಗೆ ಪ್ರತ್ಯೇಕ ಸಭೆಯನ್ನು ಮಾಡುತ್ತೇವೆ ಎಂದು  ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಂದು ೮೬ ವಿಧಾನಸಭಾ ಕ್ಷೇತ್ರದಲ್ಲಿ ನಾವು ಸೋತಿದ್ದೆವು. ಆ ಎಲ್ಲ ಅಭ್ಯರ್ಥಿ ಗಳನ್ನು ಕರೆಸಿ ಅವರ ಕಷ್ಟ ಸುಖ ಮುಂದಿನ ಚುನಾವಣೆಗೆ ಹೇಗೆ ತಯಾರಾಗೇಕು‌. ಸ್ಥಳೀಯ ಸಂಸ್ಥೆ ಚುನಾವಣೆಗೆ ಹೇಗೆ ತಯಾರಾಗಬೇಕು ಎಂದು ಚರ್ಚೆ ಮಾಡಿದ್ದೇವೆ. ಪರಾಜಿತ ಲೋಕಸಭಾ ಅಭ್ಯರ್ಥಿ ಗಳ ಜೊತೆಗೂ ಸಭೆ ಮಾಡ್ತೇವೆ. ಚುನಾವಣೆ ಸೋತ ಮೇಲೆ ಪರಾಜಿತ ಅಭ್ಯರ್ಥಿ ಗಳು ಕೆಲಸ ಮಾಡಿದ್ದಾರೆ. ಮುಂದೆ ಅವರ ಶಕ್ತಿ ಹೇಗೆ ಬಲಪಡಿಸಬೇಕು ಎಂದು ಅವರಿಗೆ ಸಲಹೆ ನೀಡಿದ್ದೇವೆ. ನಾನು ಹಾಗೂ ಸಿಎಂ ಸೋತಂತ ಅಭ್ಯರ್ಥಿ ಗಳು ಹಾಗೂ ಸಚಿವರ ಜೊತೆಗೆ ಪ್ರತ್ಯೇಕ ಸಭೆಯನ್ನು ಮಾಡುತ್ತೇವೆ. ೨೩ ಮಾರ್ಚ್ ರಿಂದ ಏಪ್ರಿಲ್ ೧ ರವರೆಗೂ ಎಲ್ಲ ಸಚಿವರು ನಮ್ಮ ನಮ್ಮ ಅಸೆಂಬ್ಲಿಯಲ್ಲಿ ಎಲ್ಲ ಕಾರ್ಯಕರ್ತರ ಸಭೆಯನ್ನು ಕ್ಷೇತ್ರವಾರು ನಡೆಸಬೇಕು. ನನ್ನನ್ನೂ ಸೇರಿದಂತೆ ಎಲ್ಲ ಉಸ್ತುವಾರಿ ಸಚಿವರು ಕಾರ್ಯಕರ್ತರ ಸಭೆ ಮಾಡಬೇಕು.ಎಲ್ಲ ೨೮ ಕ್ಷೇತ್ರ ಬೆಂಗಳೂರಿನಲ್ಲಿಯೇ ಕಾರ್ಯಕರ್ತರ ಸಭೆಯನ್ನು ನಡೆಸಲು ತೀರ್ಮಾನ ಮಾಡಿದ್ದೇವೆ.ಕಾರ್ಯಕರ್ತರ ಸಭೆ ನಡೆಯುವಾಗ ಸರ್ಕಾರ ಯಾರನ್ನು ನಾಮನಿರ್ದೇಶನ ಮಾಡಿದೆ ಎಂದರು.

ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿಗೆ ಕಾಂಗ್ರೆಸ್ ಭವನ ಕಟ್ಟಡದ ಶಂಕು ಸ್ಥಾಪನೆಗೆ ಆಹ್ವಾನ ನೀಡುತ್ತೇವೆ.೧೦೦ ಕಾಂಗ್ರೆಸ್ ಕಟ್ಟಡಗಳು ರೆಡಿ ಅಗುತ್ತವೆ. ಕೆಲವು ಕಡೆಗಳಲ್ಲಿ ಸ್ವಂತ ದುಡ್ಡಿನಿಂದ ಕಾಂಗ್ರೆಸ್ ಕಟ್ಟಡ ಜಾಗ ಖರೀದಿ ಮಾಡಿ ಎಂದು ಸೂಚಿಸಿದ್ದೇನೆ ಎಂದ ಅವರು  ಮರಾಠ ಪುಂಡರ ಹಾವಳಿ ವಿಚಾರದ ಬಗ್ಗೆ ಮಾತನಾಡಿ ನಮ್ಮ ಗೃಹ ಸಚಿವರು ಮತ್ತು ಸಾರಿಗೆ ಸಚಿವರು ಹೋಗಿದ್ದಾರೆ.ಅಲ್ಲಿಂದ ವಾಪಸ್ ಬಂದ ಮೇಲೆ ಅವರು ಮಾಹಿತಿ ಕೊಡ್ತಾರೆ. ಆಮೇಲೆ ಉತ್ತರಿಸುತ್ತೇನೆ ಎಂದರು,

ಶಾಸಕ ಮುನಿರತ್ನ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿದ ಅವರು ಅಶೋಕ್,ಯಡಿಯೂರಪ್ಪನವರನ್ನ ಕೇಳಬೇಕು. ಮೊದಲು ಅವರು ಉತ್ತರ ಕೊಡಬೇಕು. ಆಮೇಲೆ ನಾನು ಉತ್ತರ ಕೊಡ್ತೇನೆ ಎಂದಿದ್ದಾರೆ.