ಬೆಂಗಳೂರು; ಗೃಹ ಇಲಾಖೆ ನಡೆಸೋಕೆ ನನಗೆ ಬಹಳ ಹೆಮ್ಮೆ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ’ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಪ್ರಶಸ್ತಿ ಸ್ವೀಕರಿಸಿದವರಿಗೆ ಅಭಿನಂದನೆ. ಪ್ರಶಸ್ತಿ ಕೇವಲ ಮೆಡಲ್, ಪದಕವಲ್ಲ. ಇದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜ ಸೇವೆ ಮತ್ತು ಮುಂದಿನ ಪೀಳಿಗೆಗೆ ಆದರ್ಶವಿದೆ. ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿ ಪಡೆದಿದೆ. ಗೃಹ ಇಲಾಖೆ ನಡೆಸೋಕೆ ನನಗೆ ಬಹಳ ಹೆಮ್ಮೆ ಇದೆ. ಕಾನ್ಸ್ ಸ್ಟೇಬಲ್ ನಿಂದ ಅನುಯಾಯಿಗೆವರೆಗೆ ಪ್ರಶಸ್ತಿ ಸಿಕ್ಕಿದೆ.ಎಲ್ಲ ರೀತಿಯ ಕ್ರಮ, ಜನರ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿದೆ. ನಾಗರಿಕ ಸಮಾಜ ಶಾಂತಿಯಿಂದ ಇರಬೇಕಾದ್ರೆ ಇಲಾಖೆ ಕಾರಣ. ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡಿದ್ವಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ನೂರಾರು ಕಂಪನಿಗಳು ಬಂದ್ವು. ಅನೇಕ ಎಂಒಯುಗಳಿಗೆ ಸಹಿ ಮಾಡಲಾಯ್ತು. ಯಾವುದೇ ರಾಜ್ಯದ, ರಾಷ್ಟ್ರದ ಬಂಡವಾಳ ಹೂಡಿಕೆಗೆ ಸಮಾಜದ ಶಾಂತಿಯನ್ನ ಕಂಪನಿಯು ನೋಡುತ್ತೆ ಎಂದರು.
ಪೊಲೀಸ್ ಇಲಾಖೆ ಪದಕವನ್ನು ತೆಗೆದುಕೊಂಡ್ರವಷ್ಟೇ ಅಲ್ಲ ಅನುಯಾಯಿಗಳಿಗೂ ಪ್ರಶಸ್ತಿ ನೀಡಲಾಗಿದೆ. ರಾಜ್ಯ ಪೊಲೀಸ್ ಆಧುನೀಕರಣಗೊಳ್ಳುತ್ತಿದೆ. ಅನೇಕ ಸವಾಲುಗಳನ್ನ ಎದುರಿಸುತ್ತಿದೆ. ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚಾಗುತ್ತಿದೆ. ಗಮನಿಸದಿದ್ರೆ, ನಿಲ್ಲಿಸದಿದ್ದರೆ ಕೋಟ್ಯಾಂತರ ಜನರಿಗೆ ನಷ್ಟ ಉಂಟಾಗುತ್ತದೆ.ಇಡೀ ದೇಶದಲ್ಲೇ ಮೊದಲ ಬಾರಿಗೆ ಸೈಬರ್ ಸ್ಟೇಷನ್ ಸ್ಥಾಪನೆ ಮಾಡಿದ್ವಿ. 45ಕ್ಕೂ ಹೆಚ್ಚು ಸೈಬರ್ ಪೊಲೀಸ್ ಸ್ಟೇಷನ್ ಆಗಿದೆ .ಯಾವುದೆ ಸ್ಟೇಷನ್ ನಲ್ಲಿ ಬೇಕಾದ್ರೂ ದೂರು ಕೊಡಬಹುದು. ನಂತರ ಅದನ್ನ ಸೈಬರ್ ಸ್ಟೇಷನ್ ಗೆ ದೂರು ಕಳುಹಿಸುತ್ತಾರೆ. ರಾಜಕೀಯ, ಧಾರ್ಮಿಕವಾಗಿ ಸಮಾಜವನ್ನ ಕೆಡಿಸುವ ಕೆಲಸ ಮಾಡ್ತಿದ್ದಾರೆ. ಕರ್ನಾಟಕದ ಪೊಲೀಸರು ಯಶಸ್ವಿಯಾಗಿ ಮಾಡುತ್ತಿದ್ದಾರೆ.ಯಾವುದೇ ಅಪರಾಧ, ಕೊಲೆ ಪತ್ತೆ ಹಚ್ಚುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.
ಪೊಲೀಸ್ ಇಲಾಖೆಯ ಮೇಲೆ ಸಿದ್ದರಾಮಯ್ಯ ಗಮನ ಕೊಟ್ಟಿದ್ದಾರೆ. ಇದರ ಪ್ರಯುಕ್ತ ಆಗಿರುವ ಕೊಲೆಗಳಲ್ಲಿ 99% ಭೇದಿಯಲು ಯಶಸ್ವಿಯಾಗಿದ್ದೇವೆ. ಸಾಧಾರಣವಾಗಿ ಟೀಕೆ, ಟಿಪ್ಪಣಿಗೆ ಒಳಗಾಗುತ್ತೇವೆ. ನಾವು ಟೀಕೆ, ಟಿಪ್ಪಣಿಗಳನ್ನ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಟೀಕೆಗಳನ್ನ ಸಲಹೆಗಳಾಗಿ ಸ್ವೀಕರಿಸಿ ಕೆಲಸ ಮಾಡ್ತೇವೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಕಾನ್ಸ್ ಟೇಬಲ್ ಗಳ ಪ್ರಯತ್ನ ಪ್ರಾಮಾಣಿಕವಾಗಿ ಆಗದಿದ್ದರೆ ಅಪರಾಧಿಗಳನ್ನ ಭೇದಿಸಲು ಕಷ್ಟ ಆಗುತ್ತೆ ಎಂದು ಹೇಳಿದರು
ಮೈಸೂರಿನಲ್ಲಿ ಗರ್ಭಿಣಿ ಹೆಂಗಸು ರಸ್ತೆ ದಾಟುವಾಗ ಕಾನ್ಸ್ ಟೇಬಲ್ ರಸ್ತೆ ಪಕ್ಕದಲ್ಲೇ ಹೆರಿಗೆ ಮಾಡಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸುತ್ತಾರೆ. ಕೆಲಸದ ನಡುವೆ ಸೇವೆ ಮಾಡುವ ಕೆಲಸ ಮಾಡ್ತಿದ್ದಾರೆ. ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಭಗವಂತ ಅವರ ಕುಟುಂಬಕ್ಕೆ ನಷ್ಟ ಭರಿಸುವ ಶಕ್ತಿ ಕೊಡಲಿ. ಕೆಲಸ ಮಾಡುವಾಗ ಅನೇಕ ಘಟನೆಗಳಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು. ಅವರ ನಿಸ್ವಾರ್ಥ ಕೆಲಸ ಬೇರೆಯವರಿಗೆ ಸ್ಪೂರ್ಥಿಯಾಗಲಿ. ನಿಮ್ಮ ಕೆಲಸಗಳಿಗಷ್ಟೇ ಪದಕ ಕೊಡ್ತಿಲ್ಲ, ರಾಷ್ಟ್ರಪತಿಗಳ ಪದಕ ಶ್ಲಾಘನೀಯ. ಇಂದು ಅನೇಕ ರೀತಿಯ ವಿಧವಿಧವಾದ ಪದಕಗಳನ್ನ ನೀಡಲಾಗಿದೆ ಎಂದು ತಿಳಿಸಿದರು.











