ಬೆಂಗಳೂರು; ಬೆದರಿಕೆ ಮೆಸೇಜ್ ಬೆದರಿಕೆ ಕರೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರತಿಕ್ರಿಯಿಸಿದ್ದು ಬೆದರಿಕೆ ಕರೆಗಳು ಸಹಜ . ತಮಗೆ ನೆನಪಿದ್ದರೆ ವಿರೋಧ ಪಕ್ಷದಲ್ಲಿ ಇದ್ದಾಗಲೂ ಕೂಡ ನಾನೇ ಎರಡು ಮೂರು ಸಾರಿ ದೂರನ್ನು ಕೊಟ್ಟಿದ್ದೆ ಎಂದಿದ್ದಾರೆ.
ಆವಾಗ ಗೃಹ ಸಚಿವರಾಗಿದ್ದವರು ಬಸವರಾಜ ಬೊಮ್ಮಾಯಿ. ಅವಾಗಿನ ಅಧಿಕಾರಿಗಳು ಕೂಡ ಸಹಕರಿಸಿ ಏನ್ ಮಾಡಬೇಕು ಮಾಡಿದ್ದರು . ವೈಯಕ್ತಿಕವಾಗಿ ನನ್ನ ಜೊತೆ ಅಧಿಕಾರಿಗಳು ಮಾತನಾಡಿದ್ದರು, ರಿಪೋರ್ಟ್ ಕೂಡ ಕೊಟ್ಟಿದ್ದರು. ಹೊರದೇಶದಿಂದ ಕರೆಗಳು ಬರುತ್ತಿದ್ದವು ನಂಬರ್ ಯಾವುದೋ ಒಂದು ದೇಶದಲ್ಲಿರುತ್ತದೆ ಅದರ ಐಪಿ ಮಾಸ್ಕ್ ಆಗಿರುತ್ತದೆ. ಟ್ರೇಸ್ ಮಾಡುವುದು ಗೊತ್ತಾಗುತ್ತಿಲ್ಲ ಪ್ರಯತ್ನ ಮಾಡಿದ್ದೇವೆ ಅದನ್ನ ಮೀರಿ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು . ಈ ವ್ಯವಸ್ಥೆಯ ವಿರುದ್ಧ ನಾವು ಧ್ವನಿ ಎತ್ತಿದಾಗಲೆಲ್ಲ ನಮಗೆ ಇಂಥ ಕರೆಗಳು ಬಂದಿವೆ. ಇದು ಹೊಸದೇನಲ್ಲ . ಈ ತತ್ವ ಸಿದ್ಧಾಂತ ಗಾಂಧೀಜಿ ಅವರಿಗೇ ಬಿಟ್ಟಿಲ್ಲ ಅಂಬೇಡ್ಕರ್ ಅವರಿಗೇ ಬಿಟ್ಟಿಲ್ಲ ನಮಗೆ ಬಿಡುತ್ತಾರಾ? ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಕೂಡ ನಾವು ಧ್ವನಿ ಎತ್ತಿದಾಗೆಲ್ಲ ಬೆದರಿಕೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೂಡ ಲ್ಯಾಂಡ್ ಲೈನ್ ನಲ್ಲಿ ಬೆದರಿಕೆ ಬಂದಿತ್ತು. ಈಗಲೂ ಕೂಡ ಸಫ್ದರ್ ಜಂಗ್ ಪೊಲೀಸ್ ಸ್ಟೇಷನ್ ನಲ್ಲಿ ನಮ್ಮ ದೂರು ಇದೆ. ಅವರಿಗೂ ಕೂಡ ಎರಡು ಮೂರು ಸಂದರ್ಭದಲ್ಲಿ ಬೆದರಿಕೆ ಕರೆ ಬಂದಿತ್ತು.ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನ ಮನೆಯಲ್ಲಿ ಇದ್ದಾಗಲೂ ಕೂಡ ರಾತ್ರಿ ಒಂದು ಗಂಟೆಗೆ ಫೋನ್ ಮಾಡಿ ಲ್ಯಾಂಡ್ ಲೈನ್ ಗೆ ಬೆದರಿಕೆ ಹಾಕಿದ್ದರು . ಇದೆಲ್ಲವನ್ನು ನಾವು ಎದುರಿಸಬೇಕಾಗುತ್ತದೆ .ಕುಟುಂಬ ಸದಸ್ಯರಿಗೆ ಯಾವುದೇ ಕರೆ ಬಂದಿಲ್ಲ . ನನಗೆ ಮಾತ್ರ ಕರೆಗಳನ್ನು ಕಂಟಿನ್ಯೂ ಬರುತ್ತಿದೆ.ಒಂದೆರಡಲ್ಲ ನಿರಂತರವಾಗಿ ವಾಟ್ಸಾಪ್ ಕಾಲ್ಗಳು ಕೂಡ ಬರುತ್ತಿವೆ. ಎಫ್ ಐ ಆರ್ ರಿಜಿಸ್ಟರ್ ಮಾಡಿಸಬಹುದು. ಆದರೆ ಇದು ಮತ್ತೆ ಅದೇ ರೀತಿ ಆಗುತ್ತದೆ. ಎನ್ಕ್ರಿಪ್ಟೆಡ್ ಕಾಲ್ಸ್ ಟ್ರೇಸ್ ಮಾಡುವುದು ಕಷ್ಟ . ನಮ್ಮ ಈ ಹೋರಾಟದಿಂದ ಯಾಕೆ ಹಿಂದೆ ಸರಿಯಬೇಕು?. ವಿರೋಧ ಪಕ್ಷದಲ್ಲಿ ಇದ್ದಾಗಲೇ ಹಿಂದೆ ಸರಿಲಿಲ್ಲ ಆಡಳಿತ ಪಕ್ಷದಲ್ಲಿದ್ದಾಗ ಹಿಂದೆ ಸರಿಯುತ್ತಿವಾ?. ಯಾರಿಗ್ರಿ ಹೆದರಿಸುತ್ತಾರೆ ಇವರು? ನೂರು ವರ್ಷದಿಂದ ಇದೇ ಬೆದರಿಕೆ ಹಾಕುವ ಪ್ರಯತ್ನದಲ್ಲಿ ಇದ್ದಾರಲ್ವಾ?. ಗಾಂಧೀಜಿಯವರನ್ನು ಇದೇ ತತ್ವದಿಂದಲೇ ಇವರು ಗಾಂಧಿಯನ್ನ ಬಲಿ ತೆಗೆದುಕೊಂಡಿಲ್ವಾ?. ಅಂಬೇಡ್ಕರ್ ಅವರನ್ನು ಮುಗಿಸಿಲ್ವಾ?. ಇವರು ಮಾಡ್ತಾನೆ ಇರ್ತಾರೆ ನಮ್ಮ ಪ್ರಯತ್ನದಲ್ಲಿ ನಾವಿರುತ್ತೇವೆ ಎಂದು ತಿಳಿಸಿದ್ದಾರೆ.
ಇವರಿಗೆ ನೂರು ವರ್ಷ ಆದರೆ ನಮಗೂ 135 ವರ್ಷದ ಇತಿಹಾಸ ಇರುವ ಪಾರ್ಟಿ ಅಲ್ವಾ?. ನಾನು ಏಕಾಂಗಿ ಅಲ್ಲ ಇದು ನನ್ನ ಸಿದ್ದಾಂತ . ನಾನು ಬುದ್ಧ ಬಸವ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಪಾಲಿಸುತ್ತೇನೆ. ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆ ನನಗಿದೆ .ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ. ಆರ್ ಎಸ್ ಎಸ್ ನ ತತ್ವ ಸಿದ್ಧಾಂತದಲ್ಲಿ ಎಲ್ಲರಿಗೂ ಅವಕಾಶ ಇಲ್ಲ .ನಿನ್ನೆ ಸಿಎಂ ಮಾತನಾಡಿದ್ದಾರೆ ಸಂತೋಷ್ ಲಾಡ್ ದಿನೇಶ್ ಗುಂಡೂರಾವ್, ಡಿಸಿಎಂ ಎಲ್ಲರೂ ಕೂಡ ಮಾತನಾಡಿದ್ದಾರೆ .ಕೆಲವು ಹೋರಾಟಗಳು ಎಲ್ಲರೂ ಮಾಡಬೇಕಾಗುತ್ತದೆ .ಕೆಲವು ಹೋರಾಟವನ್ನು ಏಕಾಂಗಿಯಾಗಿಯೂ ಮಾಡಬೇಕಾಗುತ್ತದೆ .ನಮ್ಮ ಸಮಾಜವನ್ನು ಉಳಿಸುವ ವಿಚಾರದಲ್ಲಿ ಕರ್ನಾಟಕವನ್ನು ಉಳಿಸುವ ವಿಚಾರದಲ್ಲಿ ಎಲ್ಲರೂ ಒಂದಾಗಿದ್ದೇವೆ ಎಂದಿದ್ದಾರೆ.
48 ತಾಸಿನಲ್ಲಿ ಬಿಜೆಪಿಯವರ ಹಾಲತ್ ಏನಾಗಿದೆ ನೋಡಿ?. ಮಾಧ್ಯಮದವರಿಗೆ ಹೇಗೆ ಗೊತ್ತಾಯ್ತು ನನಗೆ ಗೊತ್ತಿಲ್ಲ .48 ತಾಸಿನಲ್ಲಿ ಆರ್ ಎಸ್ ಎಸ್ ನವರು ಒಬ್ಬರು ಮಾತನಾಡುತ್ತಿಲ್ಲ ಬಿಜೆಪಿಯವರು ಎಲ್ಲರೂ ಮಾತನಾಡಿಸಿದ್ದಾರೆ. ಬಿಜೆಪಿಯವರು ಆರ್ ಎಸ್ ಎಸ್ ಮೇಲೆ ಡಿಪೆಂಡ್ ಆಗಿದ್ದಾರೆ .ಆರ್ ಎಸ್ ಎಸ್ ಪರವಾಗಿ ಎಷ್ಟು ಮಾತಾಡಬೇಕು ಅಷ್ಟು ಮಾತಾಡ್ತಿದ್ದಾರೆ. ಸದನದಲ್ಲಿ ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಇಡೀ ಕಲಾಪವನ್ನು ಮುಗಿಸಿಬಿಡ್ತಾರೆ.ಆಫ್ಟರ್ ಆಲ್ ಆರ್ ಎಸ್ ಎಸ್ ಸೋ ಕಾಲ್ಡ್ ಎನ್ ಜಿ ಓ. ಅನ್ ರಿಜಿಸ್ಟರ್ಡ್ ಸೋ ಕಾಲ್ಡ್ ಎನ್ ಜಿ ಓ ಅಷ್ಟೇ. ಪತ್ರವನ್ನು ಮೊನ್ನೆ ಬರೆದಿದ್ದೇನೆ. ಸಿಎಂ ಚೀಪ್ ಸೆಕ್ರೆಟರಿಗೆ ಸೂಚಿಸಿದ್ದಾರೆ . ಸಾಧಕ ಬಾದಕಗಳನ್ನು ನೋಡಿಕೊಂಡು ನಿರ್ಧಾರ ಮಾಡುತ್ತಾರೆ. ತಮಿಳುನಾಡಿನಲ್ಲಿ ಸರ್ಕಾರಿ ಮೈದಾನಗಳಲ್ಲಿ ಅನುಮತಿ ಇಲ್ಲದ 39 ಆರ್ಎಸ್ಎಸ್ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ ಎಂದಿದ್ದಾರೆ.
ವೈಯಕ್ತಿಕ ಮದುವೆ ಸಾರ್ವಜನಿಕ ರಸ್ತೆಯಲ್ಲಿ ಮಾಡುವಾಗ ಅನುಮತಿ ಪಡೆಯಬೇಕಾ? ಬೇಡವಾ??. ಬಿಜೆಪಿ ಪಾರ್ಟಿ, ಕಾಂಗ್ರೆಸ್ ಪಾರ್ಟಿ ಯಾವುದೇ ಸಂಘ ಸಂಸ್ಥೆ ಆದ್ರೂ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡುವಾಗ ಅನುಮತಿ ಪಡೆಯಬೇಕೋ ಬೇಡ್ವೋ?. ಆರ್ ಎಸ್ ಎಸ್ ಯಾಕೆ ಅನುಮತಿ ಪಡೆಯುವುದಿಲ್ಲ ಕಡ್ಡಾಯವಾಗಿ ಅನುಮತಿ ಪಡೆಯಬೇಕು .ಅನುಮತಿ ಬೇಕು ಎಂಬ ಕಾನೂನು ನಮ್ಮಲ್ಲಿಯೂ ಇದೆ .ನೀವು ಒಂದು ಹತ್ತು ಜನ ಸೇರಿ ದೊಣ್ಣೆ ಹಿಡಿಯಬೇಕು ಎಂದರೆ ಅನುಮತಿ ಪಡೆಯಬೇಕು ಬೇಡ್ವಾ?. ದೊಣ್ಣೆ ಬೀಸಿಕೊಂಡು ಬರುವವರಿಗೆ ಸುಮ್ಮನೆ ಇರಬೇಕಾ?.ಸರ್ಕಾರಕ್ಕೆ ಇದು ನನ್ನ ಸಲಹೆ ಡಿಮ್ಯಾಂಡ ಅಲ್ಲ.ನಾಳೆ ನಾನು ಒಂದು ಕರೆ ಕೊಡುತ್ತೇನೆ ಎಲ್ಲಾ ನಮ್ಮ ಅಂಬೇಡ್ಕರ್ ವಾದಿಗಳು ನೀಲಿ ಶರ್ಟ್ ಹಾಕಿಕೊಂಡು ದೊಣ್ಣೆ ತೆಗೆದುಕೊಂಡು ಬರಬೇಕು ಪಥ ಸಂಚಲನ ಮಾಡೋಣ ಅಂದ್ರೆ ಬಿಡ್ತೀರಾ?? ಬಿಡುವುದಿಲ್ಲ .ಬೇರೆ ಸಮಾಜದವರು ಬೇರೆ ಕಾರ್ಯಕ್ರಮಕ್ಕೆ ಅವರವರ ತತ್ವ ಸಿದ್ಧಾಂತದ ಪ್ರಕಾರ ಮೆರವಣಿಗೆ ಮಾಡಬೇಕು ಅಂತಾರೆ. ಆ ಮೆರವಣಿಗೆಯಲ್ಲಿ ದೊಣ್ಣೆಗಳು ಕತ್ತಿಗಳನ್ನ ಹಿಡಿದುಕೊಂಡು ಬನ್ನಿ ಅಂತ ಕರೆ ಕೊಟ್ರೆ ಬಿಡ್ತೀರಾ? ಎಂದು ಪ್ರಶ್ನಿಸಿದ್ದಾರೆ.











