ಹಾಸನ : ಪಕ್ಷಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು ನಾನು ಮೂರು ಬಾರಿ ಸೋತಿದ್ದರು ಕೂಡ ಧೃತಿಗೆಡುವುದಿಲ್ಲ. 2028ಕ್ಕೆ ಕುಮಾರಣ್ಣನ ಈ ರಾಜ್ಯದ ಮುಖ್ಯಮಂತ್ರಿ ಮಾಡೋದೆ ನಮ್ಮ ಗುರಿ. ಪಕ್ಷಕ್ಕಾಗಿ ನಾನು ಯಾವ ತ್ಯಾಗಕ್ಕೂ ನಾನು ಸಿದ್ದನಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹಾಸನದ ಜನತಾ ಸಮಾವೇಶದಲ್ಲಿ ಗುಡುಗಿದ್ದಾರೆ.ಹಾಸನದ ಬಿ.ಜಿ.ಎಸ್.ಕೆ ಬಡಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಅಂಗಾವಗಿ ಆಯೋಜಿಸಿದ್ದ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು,ಜೆಡಿಎಸ್ ಪಕ್ಷವನ್ನು ಹಾಸನದಿಂದ ಓಡಿಸಲು ಯಾರಿಗೂ ಸಾಧ್ಯವಿಲ್ಲ, ನಿಮ್ಮೆಲ್ಲರ ಹೃದಯದಲ್ಲಿ ಜೆಡಿಎಸ್ ಶಾಶ್ವತ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧಾನೆ ಏನು.? ಎಂದು ಕಿಡಿಕಾರಿದ್ದಾರೆ.
ನಮ್ಮಲ್ಲೇ ತಿಂದು,ಉಂಡು,ಜೆಡಿಎಸ್ ಟಿಕೆಟ್ ತಗೊಂಡು ಗೆದ್ದು,ಬೆಳೆದು,ತಿಂದು-ಉಂಡು. ತಿಂದ ಮನೆಗೆ, ಹೆತ್ತ ತಾಯಿಗೆ ಮೋಸ ಮಾಡಿದಾಗೆ ಎಂದು ಹೆಸರು ಹೇಳದೆ ಶಿವಲಿಂಗೇಗೌಡ ವಿರುದ್ಧ ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.ನಾನು ಮೂರು ಬಾರಿ ಸೋತಿರಬಹುದು. ನನ್ನ ರಾಜಕೀಯ ಭವಿಷ್ಯವನ್ನ ನಿರ್ಧರಿಸಿರೋದು ಹಾಸನಾಂಬೆ ತಾಯಿ. ನನ್ನ ಮುಂದೆ ಇರೋ ಗುರಿ ಮತ್ತೊಮ್ಮೆ ಕುಮಾರಣ್ಣನ 2028ಕ್ಕೆ ಮುಖ್ಯಮಂತ್ರಿ ಮಾಡಬೇಕು.ನನ್ನ ರಾಜ್ಯ ಪ್ರವಾಸ ಹೋದ ಕಡೆಯಲ್ಲೆಲ್ಲಾ ಹೇಳೋದು ಒಂದೇ ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ಅಂತ ನಿಖಿಲ್ ಅವರು ಹೇಳಿದ್ದಾರೆ.
ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ, ಸಾಧನೆ ಹೆಸರಿನಲ್ಲಿ ಮಾಡಿದ್ರು ಸಮಾವೇಶ ಮಾಡಿದ್ರು, ಅಲ್ಲಿ ದೇವೇಗೌಡರ ಕುಟುಂಬವನ್ನ ಟೀಕಿಸಿದ್ದೆ ಅವರ ಸಾಧನೆ. ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ದೇವೇಗೌಡರು ಹಾಗೂ ಕುಮಾರಣ್ಣನ, ರೇವಣ್ಣ ಅವರು ಈ ಜಿಲ್ಲೆಗೆ ಕೊಟ್ಟಿರುವ ಸಾಧನೆ ಶಾಶ್ವತ ಎಂದು ನಿಖಿಲ್ ಅವರು ಒತ್ತಿ ಹೇಳಿದ್ದಾರೆ.
ಇವತ್ತು ಹಾಸನದಲ್ಲಿ ಐತಿಹಾಸಿಕ ಬೆಳ್ಳಿ ಹಬ್ಬದ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಮಾತೃ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ರಾಜಕಾರಣಿಗಳು ತಲೆಯಿಂದ ರಾಜಕಾರಣದ ಯೋಚನೆ ಮಾಡ್ತಾರೆ. ಆದ್ರೆ ಹೃದಯಿಂದ ಯೋಚನೆ ಮಾಡೋರು ನೀವು ಬೆಳೆಸಿರೋ ಕುಮಾರಣ್ಣ ಎಂದಿದ್ದಾರೆ.ದೇವೇಗೌಡರು ಕೆಂಪುಕೋಟೆ ಮೇಲೆ ಬಾವುಟ ಹಾರಿಸೋಕೆ ಈ ಜಿಲ್ಲೆಯ ಜನ ಕಾರಣ. ಅನೇಕ ರಾಜಕೀಯ ನಾಯಕರು ರಾಜಕಾರಣ ಮಾಡಿದ್ದಾರೆ. ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಇಲ್ಲಿವರೆಗೂ ಉಳಿಸಿಕೊಂಡಿರೋದು ದೇವೇಗೌಡರು ಮಾತ್ರ. ಮುಂದೆ ಬರುವ ಯುವ ಪೀಳಿಗೆಗೂ ದೇವೇಗೌಡರು ಮಾದರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಕೀಯ ಜೀವನದ ಉದ್ದಗಲಕ್ಕೂ ದೇವೇಗೌಡರು ಹೋರಾಟ ಮಾಡಿಯೇ ರಾಜಕಾರಣ ಮಾಡಿದ್ದಾರೆ. ಅವರು ಅಧಿಕಾರಕ್ಕಾಗಿ ಅಂಟಿಕೊಂಡು ಹೋಗಿಲ್ಲ. ಇಂದಿನ ಹೋರಾಟಗಳು ಕೇವಲ ಹತ್ತು ನಿಮಿಷ ಭಾಷಣಕ್ಕೆ ಸೀಮಿತ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಬಲಕ್ಕೆ ನಿಲ್ಲುತ್ತೀರಿ ಎಂದು ನಂಬಿದ್ದೇವೆ.ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಲು ನಾವೆಲ್ಲರೂ ನಿರಂತರವಾಗಿ ಶ್ರಮಿಸೋಣ ಎಂದಿದ್ದಾರೆ.
ಯಾರು ಕೂಡ ಕುಮಾರಣ್ಣ ಅರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ, ಕುಮಾರಣ್ಣ ಶಾತಯುಷಿ. ರಾಜ್ಯದ ಜನತೆ ಆಶೀರ್ವಾದ ಹಾಗೂ ಅವರ ತಂದೆ ತಾಯಿ ಮಾಡಿದ ಪುಣ್ಯ ಕುಮಾರಣ್ಣ ಅರೋಗ್ಯವಾಗಿದ್ದರೆ ಎಂದು ಹೇಳಿದ್ದಾರೆ.ಈಗಾಗಲೇ ಜನರೊಂದಿಗೆಜನತಾದಳ ಕಾರ್ಯಕ್ರಮದ ಮೂಲಕ 52 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ, ಎರಡನೇ ಹಂತದ ಪ್ರವಾಸವನ್ನು ಶೀಘ್ರವಾಗಿ ಆರಂಭಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ 2028ಕ್ಕೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲು ದಿನಕ್ಕೆ 18 ಗಂಟೆ ಕೆಲಸ ಮಾಡೋಣ. ಪಕ್ಷ ಸಂಘಟನೆಗಾಗಿ ನೀವು ರಾಜ್ಯದ ಯಾವುದೇ ಮೂಲೆಗೆ ಕರೆದರು ನಾನು ಬರುತ್ತೇನೆ ಎಂದು ಕಾರ್ಯಕರ್ತರುಗಳಿಗೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು, ಎ. ಮಂಜು ಅವರು, ವೆಂಕಟರಾವ್ ನಾಡಗೌಡ ಅವರು , ಹೆಚ್.ಕೆ. ಕುಮಾರಸ್ವಾಮಿ ಅವರು, ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಅವರು, ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರು, ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ರವರು, ಕೋರ್ ಕಮೀಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾ ರೆಡ್ಡಿ ಅವರು, ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಸೇರಿದಂತೆ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಉಪಸ್ಥಿತರಿದ್ದರು.











